ಸಮಾಚಾರ

‘ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡ್ತೀನಿ’ ಎಂದ ರಾಕಿಂಗ್ ಸ್ಟಾರ್ ಯಶ್

ರಿಷಬ್ ಶೆಟ್ಟಿ ಮತ್ತು ಅವರ ತಂಡದವರು ಸದ್ಯ ಭರ್ಜರಿ ಗೆಲುವೊಂದರ ಸಂತಸದಲ್ಲಿದ್ದಾರೆ. ‘ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ’ ಚಿತ್ರ ಬೆರಗಾಗಿಸುವಂಥಾ ಯಶಸ್ಸಿನ ರೂವಾರಿಯಾಗಿದೆ. ಇಡೀ ರಾಜ್ಯದ ತುಂಬಾ ಈ ಕ್ಷಣಕ್ಕೂ ಈ ಸಿನಿಮಾ ಯಶಸ್ವೀ ಪ್ರದರ್ಶನ ಕಾಣುತ್ತಿದೆ.. ಕೇವಲ ಪ್ರೇಕ್ಷಕರು ಮಾತ್ರವಲ್ಲದೆ ಚಿತ್ರರಂಗದ ಅನೇಕರು ಕೂಡ ಚಿತ್ರವನ್ನು ನೋಡಿ ಹೊಗಳಿದ್ದಾರೆ…

 

 

ಕಿಚ್ಚ ಸುದೀಪ್, ಪುನೀತ್ ಸೇರಿದಂತೆ ಅನೇಕರು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನ ಆಡಿದ್ದರು. ಇದೀಗ ಯಶ್ ಕೂಡ ಚಿತ್ರವನ್ನು ಕೊಂಡಾಡಿದ್ದಾರೆ.. ನೆನ್ನೆ ಸಿನಿಮಾ ನೋಡಿ ಮಾತನಾಡಿದ ಯಶ್ ಈ ವೇಳೆ ರಿಷಬ್ ಜೊತೆಗೆ ಸಿನಿಮಾ ಮಾಡುವ ಬಗ್ಗೆಯೂ ಅವರು ಮಾತನಾಡಿದ್ದಾರೆ. “ನಿರ್ದೇಶಕರು ಕಥೆ ಮಾಡಿಕೊಂಡು ಬರಬೇಕು. ಆ ರೀತಿಯ ಅವಕಾಶ ಸಿಕ್ಕರೆ ಖಂಡಿತ ಅವರ ಜೊತೆಗೆ ಸಿನಿಮಾ ಮಾಡುತ್ತೇನೆ.. ಅವರಿಗೆ ಕಥೆ ಹೇಳಲು ಬಹಳ ಚೆನ್ನಾಗಿ ಬರುತ್ತೆ. ಈ ರೀತಿ ಕಥೆಯನ್ನೇ ಅದ್ಭುತವಾಗಿ ಹೇಳಿ ಗೆದ್ದಿದ್ದಾರೆ ಎಂದರೆ, ಅವರು ಏನು ಬೇಕಾದರು ಮಾಡಬಹುದು” ಎಂದು ಯಶ್ ಹೇಳಿದರು.

“ಇಂತಹ ಮಕ್ಕಳ ಸಿನಿಮಾ ಮಾಡೋಕೆ, ಸಿನಿಮಾ ಪ್ರೀತಿ ಇರಬೇಕು. ಅಂತಹ ಪ್ರೀತಿಯಿಂದಲೇ ರಿಷಬ್ ಇವತ್ತು ಗೆದ್ದಿದ್ದಾರೆ. ರಿಷಬ್​​ ರಂತಹ ನಿರ್ದೇಶಕರು ಕನ್ನಡದಲ್ಲಿರುವುದು ಹೆಮ್ಮೆಯ ವಿಚಾರ.. ಸಾಕಷ್ಟು ವಿಷಯಗಳು ಸಿನಿಮಾದಲ್ಲಿ ಇದೆ. ಅನಂತ್ ಸರ್ ಅದ್ಭುತವಾಗಿ ನಟಿಸಿದ್ದಾರೆ. ನಮ್ಮ ಭಾಷೆಯಲ್ಲಿ ಈ ರೀತಿಯ ಸಿನಿಮಾ ಬಂದಿದೆ ಎಂದು ಹೆಮ್ಮೆ ಪಡಬೇಕು.. ಸಿನಿಮಾ ನೋಡುವ ವೇಳೆ ಬಾಲ್ಯ ನೆನಪಾಯ್ತು, ಕೆಲವು ಸನ್ನಿವೇಶಗಳಲ್ಲಿ ಶಿಳ್ಳೆ, ಚಪ್ಪಾಳೆ ಹೊಡೆದು ಖುಷಿ ಪಟ್ಟಿದ್ದೇನೆ” ಎಂದು ಯಶ್ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top