ಮನೋರಂಜನೆ

ಸನ್ನಿ ಲಿಯೋನಿ ಮನೆಗೆ ಎಂಟ್ರಿ ಕೊಟ್ಟ ಕಿರಿಕ್ ರಾಣಿ ಸಂಯುಕ್ತ ಹೆಗಡೆ.

ಬಿಗ್ ಬಾಸ್ ಸೀಸನ್ 5ನಲ್ಲಿ ಇಜ್ಜಿಲೊಲೆಯ ಸಮೀರ್ ಆಚಾರ್ಯನಿಗೆ ತದುಕಿ ಹೊರ ಬಂದ ನಂತರ ಸಂಪೂರ್ಣವಾಗಿ ಕಾಣೆಯಾಗಿದ್ದಾಕೆ ಕಿರಿಕ್ ಹುಡುಗಿ ಸಂಯುಕ್ತ ಹೆಗಡೆ.. ತಾನು ಮಾಡಿಕೊಂಡ ಎಡವಟ್ಟುಗಳ ದೆಸೆಯಿಂದಲೇ ಒಳ್ಳೊಳ್ಳೆ ಸಿನಿಮಾ ಚಾನ್ಸ್’ಗಳನ್ನು ಹಾಳುಮಾಡುಕೊಂಡ ಸಂಯುಕ್ತ ಏನಾದರೂ ಅಲ್ಪ ಸ್ವಲ್ಪ ಸದ್ದು ಮಾಡಿದ್ದಾಳೆ ಎಂದರೆ ಅದು ಟ್ರೊಲ್’ಗಳಿಂದ ಮಾತ್ರ.. ಅಂತೆಯೇ ಯಾವೊಬ್ಬ ನಿರ್ದೇಶಕನು ಈಕೆಯನ್ನು ಹಾಕಿಕೊಂಡು ಸಿನಿಮಾ ಮಾಡುವ ಸಾಹಸಕ್ಕೆ ಈವರೆಗೂ ಕೈಹಾಕಿಲ್ಲ.

ವಾರಕ್ಕೊಂದರಂತೆ ಚೋಟುದ್ದದ ಬಟ್ಟೆ ತೊಟ್ಟು ರೈಲ್ವೇ ಹಳಿ ಮೇಲೆ ಕಾಲೆತ್ತಿಕೊಂಡು ಬಿದ್ದ ವಿಚಿತ್ರ ಭಂಗಿಯ ಫೋಟೋಗಳನ್ನು ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಅಪ್ಲೋಡ್ ಮಾಡಿ ಜನರ ಬೈಗುಳುವನ್ನೂ ಎಂಜಾಯ್ ಮಾಡುತ್ತಿದ್ದ ಸಂಯುಕ್ತ ಟ್ರಾಲಿಗರಿಗೆ ಭರ್ಜರಿ ಭೋಜನ ಪೂರೈಸುತ್ತಿದ್ದಳು.. ಹೀಗೆ ಕೈಯಲ್ಲಿ ಸಿನಿಮಾ ಇಲ್ಲದೆ ಖಾಲಿ ಕುಳಿದಿದ್ದ ಸಂಯುಕ್ತ ಜಿಮ್’ನತ್ತ ಮುಖ ಮಾಡಿ ಫಿಟ್ನೆಸ್ ನತ್ತ ಸ್ವಲ್ಪ ಗಮನಹರಿಸಿ ಆ ಮೂಲಕವೇ ಹೆಚ್ಚು ಕಾಲಕಳೆಯುತ್ತಿದ್ದರು. ಈ ಮಧ್ಯೆ ತಾನು ತಮಿಳು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂಬ ಸುದ್ದಿಯನ್ನು ಆಕೆಯೇ ಹಬ್ಬಿಸಿದ್ದಳೂ, ನಂತರ ಅವು ಕೂಡ ಸುಳ್ಳಾಗಿದ್ದವು.. ಇಂಥಾ ಕಿರಿಕ್ ರಾಣಿ ಸಂಯುಕ್ತ ಈಗ ಮತ್ತೊಮ್ಮೆ ಬೇರೆ ಕಾರಣಕ್ಕಾಗಿ ಸುದ್ದಿಯಾಗಿದ್ದಾಳೆ.

 

 

ಸಂಯುಕ್ತ ಈಗ ಸನ್ನಿ ಲಿಯೋನ್​​​​ ಮನೆ ಸೇರಿಕೊಂಡಿದ್ದಾಳೆ. ಅದ್ಯಾಕಪ್ಪ ಈ ಹುಚ್ಚು ಹುಡುಗಿ ಸನ್ನಿ ಲಿಯೋನ್​ ಮನೆಗೆ ಹೋದ್ಲು ಅಂತೀರಾ? ಸನ್ನಿ ಮನೆ ಅಂದ್ರೆ ಅದು ಸನ್ನಿ ಲಿಯೋನಿ ನಡೆಸಿಕೊಡುವ ಜನಪ್ರಿಯಾ ರಿಯಾಲಿಟಿ ಶೋ ‘ಸ್ಲ್ಪಿಟ್ಸ್​ ವಿಲ್ಲಾ’ ಮನೆಗೆ ಸಂಯುಕ್ತ ಎಂಟ್ರಿ ಕೊಟ್ಟಿದ್ದಾರೆ. ಹೌದು ಸಂಯುಕ್ತ ಸದ್ಯ ‘ಸ್ಲ್ಪಿಟ್ಸ್​ ವಿಲ್ಲಾ ಸೀಸನ್​ 11ರ’ ಸ್ಪರ್ಧಿಯಾಗಿ​ ಎಂಟ್ರಿ ಕೊಟ್ಟಿದ್ದಾರೆ. ಹಿಂದಿಯ ಜನಪ್ರಿಯ ಡೇಟಿಂಗ್ ರಿಯಾಲಿಟಿ ಶೋ ಆಗಿರೋ ಸ್ಲ್ಟಿಟ್ಸ್ ವಿಲ್ಲಾ ಹೆಚ್ಚಾಗಿ ವಯಸ್ಕರು ನೋಡೋ ಕಾರ್ಯಕ್ರಮ. ರಾತ್ರಿ 10ಗಂಟೆಯ ನಂತ್ರ ಈ ಷೋ ಪ್ರಸಾರವಾಗುತ್ತೆ.. ಒಂದಷ್ಟು ವಿವಾದಗಳ ಜೊತೆಯಲ್ಲಿಯೇ ಜರುಗೋ ಈ ರಿಯಾಲಿಟಿ ಶೋ ಸಂಯುಕ್ತಾಳ ಮನಸ್ಥಿತಿಗೆ ಹೇಳಿ ಮಾಡಿಸಿದಂತಿದೆ.

ನನಗೆ ತಮಿಳು ತೆಲುಗಿನಲ್ಲಿ ಸಿಕ್ಕಾಪಟ್ಟೆ ಆಫರುಗಳು ಬರುತ್ತಿವೆ ಎಂದು ಹೇಳಿಕೊಂಡು ಓಡಾಡುತ್ತಿದ್ದ ಸಂಯುಕ್ತಾಗೆ ವಯಸ್ಕರ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗುವ ಗತಿ ಬಂತಲ್ಲಾ ಅಂತ ಸಿನಿಮಾ ಮಂದಿ ಆಡಿಕೊಳ್ಳಲಾರಂಭಿಸಿದ್ದರಂತೆ.. ಒಟ್ಟಿನಲ್ಲಿ ಬಿಗ್​ಬಾಸ್​ಗೆ ವೈಲ್ಡ್​​ ಕಾರ್ಡ್​​ ಎಂಟ್ರಿ ಕೊಟ್ಟು ಸಮೀರ್​ ಆಚಾರ್ಯನ ಕಪಾಳಕ್ಕೆ ಬಾರಿಸಿದ್ದ ಸಂಯುಕ್ತ ಈಗ ಯಾವ ರಾದ್ದಂತ ಮಾಡಿಕೊಳ್ಳುತ್ತಾಳೋ ಕಾದು ನೋಡ್ಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top