ಮನೋರಂಜನೆ

ಕರ್ನಾಟಕ ರಾಜ್ಯೋತ್ಸವದಂದು ಸಂತೋಷ್- ಪುನೀತ್ ಚಿತ್ರಕ್ಕೆ ನಾಮಕರಣ.

ಕನ್ನಡದ ಸ್ಟಾರ್ ನಿರ್ದೇಶಕರ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿರುವ ಸಂತೋಷ್ ಆನಂದ್‌ರಾಮ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಲು ಹೊಂಚಿಕೂತಿದ್ದಾರೆ. ರಾಜಕುಮಾರದಂತಹ ಪರಿಪೂರ್ಣ ಹಿಟ್ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಪುನೀತ್ ರಾಜಕುಮಾರ್ ಮತ್ತು ಸಂತೋಷ್ ಆನಂದರಾಮ್ ಅವರ ಕಾಂಬಿನೇಷನ್ ನಲ್ಲಿ ಮತ್ತೊಂದು ಕನ್ನಡ ಚಿತ್ರ ಮೂಡಿಬರುತ್ತಿದೆ ಎಂಬ ವಿಚಾರ ಜಗಜ್ಜಾಹೀರಾಗಿ ತಿಂಗಳುಗಳೇ ಸವೆದಿವೆ. ಈ ಚಿತ್ರ ಸೆಟ್ಟೇರುವುದಕ್ಕೂ ಮುಂಚೆಯೇ ನಾನಾ ಬಗೆಯ ನಿರೀಕ್ಷೆಗಳು, ವಿಪರೀತ ಕುತೂಹಲಗಳು ಚಿತ್ರದ ಮೇಲೆ ಬೆಟ್ಟ ಮಾಡುತ್ತಿವೆ. ಈ ನಡುವೆ ಚಿತ್ರದ ಬಗ್ಗೆಯೇ ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೆ ಸಂತೋಷ್.

 

 

ಡಾ.ರಾಜಕುಮಾರ್ ಅವರು ನಟಿಸಿರುವ 206 ಚಿತ್ರಗಳ ಪೈಕಿ ಒಂದು ಚಿತ್ರದ ಟೈಟಲ್ ಅನ್ನು ಈ ಹೊಸ ಚಿತ್ರಕ್ಕೆ ಇಡಲಾಗಿದ್ದು ಯಾವ ಚಿತ್ರದ ಹೆಸರನ್ನು ಇಡಲಾಗಿದೆ ಎಂಬ ಗುಟ್ಟನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಈ ಚಿತ್ರಕ್ಕೆ ಸಂಭಂದಿಸಿದ ಕುತೂಹಲಕಾರಿ ಮಾಹಿತಿಯೊಂದು ಬಹಿರಂಗಗೊಂಡಿದ್ದು ಚಿತ್ರದ ಬಗೆಗಿನ ನಿರೀಕ್ಷೆಗಳನ್ನು ಇಮ್ಮಡಿಗೊಳಿಸಿವೆ. ಕನ್ನಡ ರಾಜ್ಯೋತ್ಸವದ ದಿನ ಚಿತ್ರದ ಟೈಟಲ್ ಲಾಂಚ್ ಆಗಲಿದೆ. ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಚಿತ್ರದ ಹೆಸರನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಅಂದಹಾಗೆ ರಾಜಕುಮಾರ ಚಿತ್ರವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಪ್ರೊಡಕ್ಷನ್ ಅವರ ವಿಜಯ್ ಕಿರಂಗದೂರು ಅವರೇ ಮತ್ತೆ ಪುನೀತ್ ಮತ್ತು ಸಂತೋಷ್ ಜೋಡಿಯ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ದೊಡ್ಡ ಬಜೆಟ್’ನಲ್ಲಿ ಚಿತ್ರ ನಿರ್ಮಾಣವಾಗಲಿದ್ದು ಚಿತ್ರಕ್ಕೆ ನಾಯಕಿ, ತಾರಾಗಣ ಮತ್ತು ತಾಂತ್ರಿಕ ವರ್ಗವನ್ನು ಇನ್ನಷ್ಟೇ ಫೈನಲ್ ಮಾಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top