ಮನೋರಂಜನೆ

“ಕ್ರಿಯಾಶೀಲ ಕೆಲಸಗಳಲ್ಲಿ ಎಂದೂ ಜಾತಿಯನ್ನು ತರಬಾರದು” ಜಾತಿವಾದಿಗಳಿಗೆ, ಟಿವಿ ಚಾನೆಲ್ಲುಗಳಿಗೆ ಕಿಚ್ಚ ಹೇಳಿದ್ದಿಷ್ಟು.

ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ನಡೆಯುತ್ತಿರುವ ‘ವೀರ ಮದಕರಿ’ ಸಿನಿಮಾದ ಕಾಳಗದ ಬಗ್ಗೆ ಟಿವಿ ಚಾನೆಲ್ಲುಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಚಾಲ್ತಿಗೆ ತಂದಿವೆ. ಮದಕರಿ ನಾಯಕನ ಪಾತ್ರವನ್ನು ದರ್ಶನ್​ ನಿರ್ವಹಿಸಬಾರದು ಎಂದು ಅದ್ಯಾರೋ ಸ್ವಾಮೀಜಿ ಹೇಳಿಕೆ ನೀಡಿದ್ದಾರಲ್ಲಾ, ಆ ನಂತರ ಈ ವಿಷಯವನ್ನು ಮಾಧ್ಯಮಗಳು ತಮ್ಮ TRPಗೋಸ್ಕರ ವಿವಾದವನ್ನಾಗಿ ಮಾಡಿದ್ದವು.. ದರ್ಶನ್ ಮತ್ತು ಸುದೀಪ್ ಇಬ್ಬರೂ ಸುಮ್ಮನಿದ್ದರೂ ತಮಗೆ ತಾವೇ ಊಹಿಸಿಕೊಂಡು ಬೇಕಾದ್ದ ಹೇಳಿಕೆಗಳನ್ನು ನೀಡಿದ್ದವರಿಗೆಲ್ಲಾ ಸ್ವತಃ ಸುದೀಪ್ ಅವರೇ ಇದೀಗ ಟ್ವಿಟರ್ ಮೂಲಕ ಉತ್ತರ ನೀಡಿದ್ದಾರೆ.

 

 

ಚಾನೆಲ್ಲುಗಳುಗಳಲ್ಲಿ ಚರ್ಚೆಯಾಗುತ್ತಿರುವ ಮದಕರಿ ವಿಷಯದ ಬಗ್ಗೆ ಸುದೀಪ್ ನೀಡಿರುವ ಸ್ಪಷ್ಟನೆ ಈ ರೀತಿ ಇದೆ.

ಈಗ ಚಾನೆಲ್ಲುಗಳು ಹಾಗೂ ವೇದಿಕೆಗಳಲ್ಲಿ ಚರ್ಚೆಯ ವಿಷಯವಾಗಿರುವ ವಸ್ತು, ಚರ್ಚೆ ಮಾಡುವುದಕ್ಕಾಗಿಯೇ ಹುಟ್ಟಿಕೊಂಡಿರುವoತಿದೆ.

ವಿಷಯ ಸರಳವಾಗಿದೆ… ರಾಕ್ ಲೈನ್ ವೆಂಕಟೇಶ್ ಅವರು ತಮಗೆ ಇಷ್ಟವಿರುವ ಸಿನೆಮಾ ಮಾಡುತ್ತಿದ್ದಾರೆ. ನಾನು ಇಷ್ಟಪಟ್ಟು ಕನಸು ಕಂಡು ಮಾಡಬೇಕೆಂದಿರುವ ಸಿನೆಮಾ ನಾನು ಮುಂದುವರೆಸುತ್ತೇನೆ. ಸ್ವಾಮೀಜಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಷಯ ಇಲ್ಲಿಗೆ ಮುಗಿಯಬೇಕು. ಮುಗಿಯದ ಚರ್ಚೆಗಳಿಂದ ಏನೂ ಪ್ರಯೋಜನವಿಲ್ಲ.

ಎಲ್ಲರ ಅಭಿಪ್ರಾಯ, ಆಸೆಗಳು ಹಾಗೂ ಚಿಂತನೆಗಳನ್ನು ಗೌರವಿಸುತ್ತ ಈ ವಿಷಯದ ಬಗೆಗಿನ ಚರ್ಚೆ ಇಲ್ಲಿಗೆ ತಿಳಿಯಾಗಲಿ.

ಕ್ರಿಯಾಶೀಲ ಕೆಲಸಗಳಲ್ಲಿ ಎಂದೂ ಜಾತಿಯ ಯೋಚನೆಗಳು ಬರುವುದಿಲ್ಲ, ಬರಕೂಡದು. ಸ್ವಾಮೀಜಿಗಳು, ರಾಕ್ ಲೈನ್ ವೆಂಕಟೇಶ್ ರವರು ಹಾಗು ಚಾನೆಲ್ ರವರ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಆದರೆ ಇದು ನನಗೆ ಚರ್ಚೆಯ ವಿಷಯವೇ ಅಲ್ಲ. ನನ್ನ ಹಿಂದಿನ ಪತ್ರದಲ್ಲೂ ಇದನ್ನು ಸ್ಪಷ್ಟಪಡಿಸಿದ್ದೇನೆ.

ಸಿನೆಮಾ ಮಾಡುವುದೇ ಪ್ರೇಕ್ಷಕರಿಗಾಗಿ. ಎರಡೂ ಸಿನೆಮಾಗಳನ್ನು ಅವರಿಗೆ ಕೊಡುಗೆ ಕೊಡೋಣ. ಎರಡೂ ಚಿತ್ರಗಳು ಚರಿತ್ರೆಯ ಆ ಮಹಾಪುರುಷನಿಗೆ ಗೌರವ ಸಲ್ಲಿಸಲಿ. ಈಗ ನಡೆಯುತ್ತಿರುವ ಚರ್ಚೆಗಳಿಗಿಂತ ಏರಡು ಚಿತ್ರಗಳು ಮಾಡಿ ಅವರಿಗೆ ಗೌರವಿಸೋಣ.

ಗಮನ ಹರಿಸಲು ಇದಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರ ಸಮಸ್ಯೆಗಳು ಬಹಳಷ್ಟಿವೆ. ಇದಕ್ಕೆ ಹರಿಬಿಟ್ಟ ಶಕ್ತಿ ಹಾಗು ಶ್ರಮ ಆ ಸಮಸ್ಯೆಗಳಿಗೆ ವ್ಯಯಿಸಿದರೆ ಎಲ್ಲರ ಜೀವನವು ಸ್ವಲ್ಪವಾದರೂ ಹಸನಾದೀತು. ಯೋಚನೆಗಳು ಯಾವಾಗಲೂ ಜನಪರವಾಗಿರಲೆಂದು ನನ್ನ ಈ ಎರಡು ಮಾತುಗಳೇ ಹೊರತು ಯಾರ ಮನಸನ್ನು ನೋಯಿಸಲು ಅಲ್ಲ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top