fbpx
ದೇವರು

ಇಡೀ ಪ್ರಪಂಚದಲ್ಲಿಯೇ ಅತೀ ದೊಡ್ಡ ಏಕಶಿಲಾ ದೇವಾಲಯವಿರುವುದು ಎಲ್ಲಿ ಗೊತ್ತಾ ,ಈ ದೇವಸ್ಥಾನಕ್ಕೂ ಇತಿಹಾಸಕ್ಕೂ ಇರುವ ಸಂಬಂಧವಾದ್ರು ಏನು,ತಿಳ್ಕೊಳ್ಳಿ ಈ ದೇವಸ್ಥಾನ ಕುರಿತ ಕುತೂಹಲಕಾರಿ ಸಂಗತಿ

ಇಡೀ ಪ್ರಪಂಚದಲ್ಲಿಯೇ ಅತೀ ದೊಡ್ಡ ಏಕಶಿಲಾ ದೇವಾಲಯವಿದು.ಆ ದೇಗುಲ ಯಾವುದು ?ಎಲ್ಲಿದೆ ಅದು ಎಂದು ನಿಮಗೆ ಗೊತ್ತಾ ?
ಸೃಷ್ಟಿಯ ರಹಸ್ಯ, ಸೃಷ್ಟಿಗೆ ಪ್ರತಿ-ಸೃಷ್ಟಿ ಎಲ್ಲೋರಾ ಗುಹೆಗಳನ್ನು ನೋಡಿದಾಗ ನೆನಪಿಗೆ ಬರುವ ಮಾತುಗಳು ಇವು. ಶಿಲೆಗಳ ಮೇಲೆ ಶಿಲ್ಪಗಳನ್ನು ಕೆತ್ತಿ ಅದ್ಭುತ ಅಂದವನ್ನು ತಂದವರು ನಮ್ಮವರು ಎಂದು ಅನ್ನಿಸಿದಾಗ ನಿಜವಾಗಿಯೂ ಮನಸ್ಸಿನಲ್ಲಿ ಮನಸಿಟ್ಟು ಕೆತ್ತಿದ್ದಾರೆ ಎನ್ನುವ ಅದ್ಭುತ ಎಲ್ಲೋರಾ ಗುಹೆಗಳು.ಸಹ್ಯಾದ್ರಿ ಪರ್ವತಗಳನ್ನು ಕೆತ್ತಿ ವಿನ್ಯಾಸ ಮಾಡಿರುವಂತಹ ಈ ಹೀಗೆ ಅನೇಕ ಆಶ್ಚರ್ಯಗಳನ್ನು ಒಳಗೊಂಡಿದೆ. ಮಹಾರಾಷ್ಟ್ರದಲ್ಲಿರುವ ಎಲ್ಲೋರಾ ಗುಹೆ 16ನೇ ಗುಹೆಯಲ್ಲಿರುವ ಕೈಲಾಸ ದೇವಾಲಯ ಪ್ರಪಂಚದಲ್ಲಿಯೇ ಅತಿ ದೊಡ್ಡ ಏಕಶಿಲಾ ದೇವಾಲಯವಾಗಿದೆ.

 

 

 

ಈ ದೇವಾಲಯವನ್ನು ನಿರ್ಮಿಸುವುದಕ್ಕೆ 150 ವರ್ಷ ಸಮಯ ಹಿಡಿದಿತ್ತಂತೆ. ಇದರ ನಿರ್ಮಾಣಕ್ಕೆ 7 ಸಾವಿರ ಕಾರ್ಮಿಕರನ್ನು ಬಳಸಿದ್ದರಂತೆ. ಈ ದೇವಾಲಯ 60 ಸಾವಿರ ಚದುರ ಅಡಿಯಷ್ಟು ದೊಡ್ಡದಾಗಿದೆ . ಈ ದೇವಾಲಯದ ಎಲ್ಲ ಭಾಗಗಳಲ್ಲಿ ರಾಮಾಯಣ ಕಾಲದ ಕಥೆಯುಳ್ಳ ಶಿಲ್ಪಿಗಳನ್ನು ಕೆತ್ತಿದ್ದಾರೆ.ಇಲ್ಲಿನ ನಟರಾಜನ ವಿಗ್ರಹಕ್ಕೆ ಹಾಕಿದ ಬಣ್ಣ, ಈಗಲೂ ಹಾಗೆ ಇರುವುದು ಮತ್ತೊಂದು ವಿಶೇಷ.ಒಳಭಾಗದಲ್ಲಿರುವ ಒಂದೊಂದು ಶಿಲ್ಪಕಲೆಯು ಕೂಡ ಒಂದೊಂದು ಅದ್ಭುತ. ಯಾವ ದೇವಾಲಯವನ್ನೇ ಆಗಲಿ ಮೊದಲು ಕೆಳಭಾಗದಿಂದ ಕಟ್ಟುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆದರೆ ಈ ದೇವಾಲಯವನ್ನು ಬೆಟ್ಟದ ಮೇಲಿನ ಭಾಗದಿಂದ ಕೆತ್ತನೆಯನ್ನು ಮಾಡಿ ನಿರ್ಮಿಸಿದ್ದಾರೆ. ಈ ರೀತಿ ನಿರ್ಮಾಣ ಮಾಡಿದ ಇಂದೂ ದೇವಾಲಯಗಳಲ್ಲಿ ಇದೇ ಮೊದಲನೆಯದ್ದು.
ಈ ದೇವಾಲಯದಲ್ಲಿ ಆನೆಗಳ ಶಿಲ್ಪಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಕಲ್ಲುಗಳನ್ನು ಬೇರ್ಪಡಿಸಿ ಈ ದೇವಾಲಯವನ್ನು ನಿರ್ಮಿಸಿದ್ದಾರೆ . ಈಗಿನ ಕಾಲದಲ್ಲಿ ಇಂತಹ ದೇವಾಲಯವನ್ನು ನಿರ್ಮಿಸಬೇಕು ಎಂದರೆ ನೂರು ವರ್ಷ ಸಮಯ ಹಿಡಿಯುತ್ತದೆ. ಈಗಿನ ಕಾಲದಲ್ಲಿ ನಿರ್ಮಿಸಿದರು ಯಾರೂ ಕೂಡ ಈ ರೀತಿಯ ಶಿಲ್ಪ ಕಲೆಯನ್ನು ಕೆತ್ತನೆ ಮಾಡುವುದಕ್ಕೆ ಆಗುವುದಿಲ್ಲ ಎನ್ನುತ್ತಿದ್ದಾರೆ.

ಔರಂಗಜೇಬನು ಇಂದೂ ದೇವಾಲಯಗಳನ್ನು ಧ್ವಂಸ ಮಾಡುತ್ತಿರುವ ಸಮಯದಲ್ಲಿ ಅಕ್ರಮವಾಗಿ ಈ ದೇವಾಲಯವನ್ನು ಧ್ವಂಸ ಮಾಡುವುದಕ್ಕೆ ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕಳಿಸುತ್ತಾನಂತೆ. ವಿಶ್ರಾಂತಿ ಇಲ್ಲದೆ ಮೂರು ವರ್ಷಗಳ ಕಾಲ ಧ್ವಂಸ ಮಾಡಲು ಪ್ರಯತ್ನ ಮಾಡಿದರೂ ಕೇವಲ ಐದರಷ್ಟು ಶಿಲ್ಪ ಕಲೆಗಳನ್ನು ಮಾತ್ರ ಧ್ವಂಸ ಮಾಡಲು ಆಯಿತಂತೆ. ಈ ದೇವಾಲಯವನ್ನು ಯಾವಾಗ ನಿರ್ಮಿಸಿದ್ದಾರೆ ? ಯಾರು ನಿರ್ಮಿಸಿದ್ದಾರೆ ? ಎನ್ನುವುದಕ್ಕೆ ಸರಿಯಾದ ಉತ್ತರ ಇನ್ನೂ ಸಿಕ್ಕಿಲ್ಲ. ಸಾವಿರಾರು ವರ್ಷಗಳ ಹಿಂದೆ ಇಂತಹ ದೊಡ್ಡ ದೇವಾಲಯವನ್ನು ಹೇಗೆ ನಿರ್ಮಿಸಿದ್ದಾರೆ. ಅಂತಹ ಒಂದು ದೊಡ್ಡ ರಹಸ್ಯ ಇಂದಿಗೂ ಎಲೋರದಲ್ಲಿ ರಹಸ್ಯವಾಗಿಯೇ ಉಳಿದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top