ದೇವರು

ಮನೆಯಲ್ಲಿ ಈ ಕೆಟ್ಟ ಅಭ್ಯಾಸದ ಕೆಲಸಗಳನ್ನು ಮಾಡಿದರೆ ಅಷ್ಟ ಕಷ್ಟ ದರಿದ್ರ ನಿಮ್ ಮನೇಲಿ ನೆಲೆಸುತ್ತಂತೆ

ಲಕ್ಷ್ಮೀ ದೇವಿ ತುಂಬಾ ಚಂಚಲೆ ,ಚಂಚಲ ಮನಸುಳ್ಳುವಳು ಅಂತಹ ಲಕ್ಷ್ಮೀ ದೇವಿಯು ನೀವು ಈ ಕೆಲವು ಕೆಟ್ಟ ಅಭ್ಯಾಸಗಳನ್ನು ಮಾಡುತ್ತಿದ್ದರೆ, ಅಂತಹ ಮನೆಯಲ್ಲಿ ಇರಲು ಇಷ್ಟ ಪಡುವುದಿಲ್ಲ.ಲಕ್ಷ್ಮೀ ದೇವಿ ತುಂಬಾ ಚಂಚಲವಾದ ಮನಸುಳ್ಳ ದೇವಿ.ಒಂದು ಸ್ಥಳದಲ್ಲಿ ಸ್ಥಿರವಾಗಿ ನೆಲೆಸುವುದಿಲ್ಲ.ಆದ್ದರಿಂದಲೇ ಪ್ರತಿಯೊಬ್ಬರೂ ಲಕ್ಷ್ಮೀ ದೇವಿಯನ್ನು ಮನೆಯಲ್ಲಿ ಸ್ಥಿರವಾಗಿ ಇಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ.ಆದರೆ ಕೆಲವರಿಗೆ ಧನ ಪ್ರಾಪ್ತಿ ಅಧಿಕವಾಗಿ ಸಿಕ್ಕಿದ ಮೇಲೆ ಅವರು ಆ ಧನವನ್ನು ಹಲವು ರೀತಿಯಲ್ಲಿ ದುರುಪಯೋಗ ಮಾಡುವುದಲ್ಲದೆ ಕಷ್ಟ ಪಡುವುದನ್ನು,ಕಷ್ಟ ಪಟ್ಟು ದುಡಿಯುವುದನ್ನು ಸಹ ಮರೆತು ಬಿಡುತ್ತಾರೆ.ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯು ಕೋಪೋದ್ರಿಕ್ತಳಾಗತ್ತಾಳೆ.ಹೀಗೆ ಇನ್ನೂ ಅನೇಕ ಕಾರಣಗಳು ಇವೆ.ಅವು ಏನೆಂಬುದನ್ನು ಈಗ ನಾವು ತಿಳಿಯೋಣ.

 

 

 

ಮಂಗಳವಾರದ ದಿನ ಸಾಲವನ್ನು ತೆಗೆದುಕೊಳ್ಳಬಾರದು ಹಾಗೆ ಯಾರಿಗೂ ಹಣವನ್ನು ಕೊಡಲೂ ಬಾರದು.ಒಂದು ವೇಳೆ ನೀವು ಹಣವನ್ನು ಮಂಗಳವಾರದ ದಿನ ಕೊಟ್ಟರೆ ,ಕೊಟ್ಟ ಹಣ ಬೇಗನೇ ಹಿಂತಿರುಗಿ ಬರುವುದಿಲ್ಲ ಹಾಗೆ ಮಂಗಳವಾರ ಸಾಲ ತೆಗೆದುಕೊಂಡವರಿಗೆ ಹಣವನ್ನು ಮರುಪಾವತಿ ಮಾಡಲು ಸಾಧ್ಯವಾಗದೆ ಇರುವಂತೆ ಮಾಡುತ್ತದೆ.
ಬುಧವಾರದ ದಿನ ಸಾಲವನ್ನು ಅಧಿಕವಾಗಿ ಕೊಡಬಾರದು.ತಾವರೆ ಹೂ,ಬಿಲ್ವ ಪತ್ರೆಯನ್ನು ಹಿಸುಕಬಾರದು,ಪೂಜೆಯ ಮನೆಯಲ್ಲಿ ಎಂಜಲು ಪಾತ್ರೆಯನ್ನು ಇಡಬಾರದು.ಪೂಜೆಯ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು.ಗೋಡೆಯ ಮೇಲೆ ಅನಾವಶ್ಯಕತೆಯ ಬರಹಗಳನ್ನು ಬರೆಯಬಾರದು ಎಲ್ಲೆಂದರಲ್ಲಿ ಕಪ್ಪು ಬಣ್ಣದಿಂದ ಗೀಚಬಾರದು.ಯಾವುದೇ ಆಕಾರವಿರುವ ಚಿತ್ರಗಳನ್ನು ಬರೆಯಬಾರದು.ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಬೇಕು.ಅತಿಥಿ ಸತ್ಕಾರ ಮಾಡಬೇಕು.ಹಸು,ಕರು,ನಾಯಿ,ಯಾವುದೇ ಮೂಕ ಪ್ರಾಣಿಗಳಿಗೆ ಒಡೆದು,ಬಡಿದು ಹಿಂಸೆ ಕೊಡಬಾರದು.ಅನಾವಶ್ಯಕವಾಗಿ ಹೊಡೆಯಬಾರದು.

ಸಾಯಂಕಾಲದ ಸಮಯದಲ್ಲಿ (ಗೋಧೂಳಿ ಸಮಯ) ಮನೆಯನ್ನು ಸ್ವಚ್ಛ ಮಾಡಬಾರದು. ಇದರ ಬದಲಾಗಿ ಸಂಜೆಯ ಸಮಯದಲ್ಲಿ ಪ್ರತಿ ದಿನ ಮನೆಯಲ್ಲಿ ಧೂಪ,ದೀಪದಿಂದ ದೇವರ ಮನೆಯಲ್ಲಿ ದೈವಾರಾಧನೆ,ಪೂಜೆ,ಪ್ರಾರ್ಥನೆ ಮಾಡಬೇಕು.ತುಳಸಿ ಗಿಡವನ್ನು ಎಂದಿಗೂ ನಿರ್ಲಕ್ಷಿಸಬಾರದು,ಕಾಲಿನಲ್ಲಿ ಒದೆಯಬಾರದು.ಇದರ ಬದಲಾಗಿ ಭಕ್ತಿಯಿಂದ ಪೂಜೆ ಸಲ್ಲಿಸಬೇಕು.ಸೂರ್ಯೋದಯ ಆದ ನಂತರ ಮತ್ತು ಸೂರ್ಯಾಸ್ತದ ಸಮಯದಲ್ಲಿ ನಿದ್ದೆ ಮಾಡಬಾರದು ಹಾಗೆ ಮಾಡಿದರೆ ಅದು ದಾರಿದ್ರ್ಯವನ್ನು ತಂದೊಡ್ಡುತ್ತದೆ.ಮನೆಯ ಒಳಗೆ ಧೂಮಪಾನ,ಮದ್ಯಪಾನದಂತಹ ಕೆಟ್ಟ ಅಭ್ಯಾಸಗಳನ್ನು ಮಾಡಬಾರದು.ಯಾವ ಮನೆಯಲ್ಲಿ ಯಾವಾಗಲೂ ಅನಾವಶ್ಯಕವಾಗಿ ಕಲಹ,ಜಗಳ ಜೋರಾದ ಧ್ವನಿಯಲ್ಲಿ ಮಾತನಾಡುವುದು ಇವೆಲ್ಲ ಇದ್ದರೆ ಅಂತಹ ಮನೆಯಲ್ಲಿ ಲಕ್ಷ್ಮೀ ದೇವಿ ಇರಲು ಇಷ್ಟಪಡುವುದಿಲ್ಲ.ಬೇಗನೆ ಆ ಮನೆಯನ್ನು ಬಿಟ್ಟು ಹೊರಟು ಹೋಗುತ್ತಾಳೆ.ಆದ್ದರಿಂದ ಇಂತಹ ತಪ್ಪುಗಳನ್ನು ಮಾಡವುದನ್ನು ತಡೆಗಟ್ಟಿ ಆಗ ಲಕ್ಷ್ಮೀ ದೇವಿ ಸ್ಥಿರವಾಗಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top