fbpx
ಮನೋರಂಜನೆ

ಡಾ.ವಿಷ್ಣು ಟ್ರಸ್ಟ್’ಗೆ ದೇಣಿಗೆ ನೀಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.

ಡಾ. ವಿಷ್ಣುವರ್ಧನ್ ಅವರ ವಿಭಾ ಟ್ರಸ್ಟ್​ಗೆ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ದೇಣಿಗೆ ನೀಡಿದ್ದಾರೆ. ಸೆಪ್ಟೆಂಬರ್ ೧೮ಕ್ಕೆ ವಿಷ್ಣು ಹುಟ್ಟುಹಬ್ಬದ ಪ್ರಯುಕ್ತವಾಗಿ, ವಿಷ್ಣು ಫ್ಯಾಮಿಲಿ, ವಿಷ್ಣು ನೆನಪಿನಲ್ಲೊಂದು ಕಾರ್ಯಕ್ರಮವನ್ನ ಹಮ್ಮಿಕೊಂಡಿತ್ತು. ಆ ಕಾರ್ಯಕ್ರಮಕ್ಕೆ ಹೋಗಿದ್ದ ಶಿವಣ್ಣ ಮೂರು ಹಾಡುಗಳನ್ನು ಸಹ ಹಾಡಿ ದೇಣಿಗೆ ಸಂಗ್ರಹ ಮಾಡಲು ಸಾಥ್ ನೀಡುತ್ತೇನೆ ಎಂದು ಹೇಳಿದ್ದರು.

ಅದರಂತೆ ಶಿವಣ್ಣ ವಿಭಾ ಟ್ರಸ್ಟ್​ಗೆ ಶಿವರಾಜ್ ಕುಮಾರ್ ಒಂದು ಲಕ್ಷ ರೂ ದೇಣಿಗೆ ನೀಡಿದ್ದಾರೆ. ಇತ್ತೀಚಿಗೆ ಅನಿರುದ್ಧ್ ಅವ್ರಿಗೆ ಒಂದು ಲಕ್ಷ ಚೆಕ್‌ನ್ನ ಹಸ್ತಾಂತರಿಸಿದ್ದಾರೆ. ಈ ಮೂಲಕ.. ವಿಭಾ ಚಾರಿಟೆಬಲ್ ಟ್ರಸ್ಟ್ ಪರವಾಗಿ ಹೃದಯ ಸಂಬಂಧಿ ಕಾಯಿಲೆನಿಂದ ಬಳಲುತ್ತಿರುವವರಿಗೆ ನೆರವಾಗಿ ನಿಂತಿದ್ದಾರೆ.

ವಿಷ್ಣುವರ್ಧನ್ ಸ್ಮರಣಾರ್ಥ ವಿಭಾ ಎನ್ನುವ ಟ್ರಸ್ಟ್ ಒಂದನ್ನು ತೆರೆಯಲಾಗಿದೆ. ಈ ಟ್ರಸ್ಟ್ ನಿಂದ ಬಹಳಷ್ಟು ಮಕ್ಕಳಿಗೆ, ಅಸಹಾಯಕರಿಗೆ ಸೌಲಭ್ಯ, ಸಹಾಯ ಮಾಡಲಾಗಿದೆ. ಈ ಟ್ರಸ್ಟ್’ಗೆ ಇದೀಗ ಶಿವರಾಜ್ ಕುಮಾರ್ ಕೂಡ ಕೈ ಜೋಡಿಸಿದ್ದಾರೆ.

 

 

View this post on Instagram

 

Meet anirudh

A post shared by Dr.Shivarajkumar (@dr.shivarajkumar) on

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top