ಸಮಾಚಾರ

ಪ್ರೇಮಿಗಳ ನಿಶ್ಚಿತಾರ್ಥವನ್ನು ಮುರಿದು ಹಾಕಿದ ಕೋಟಿ ಕಳ್ಳ ಮೋದಿ.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿಗಳ ನಾಮವಿಟ್ಟು ದೇಶ ಬಿಟ್ಟಿರುವ ಕುಖ್ಯಾತ ವಜ್ರ ವ್ಯಾಪಾರಿ ನೀರವ್ ಮೋದಿ ಮಾಡಿದ ಮನೆಹಾಳು ಕೆಲಸದಿಂದ ನಿಶ್ಚಿತಾರ್ಥ ಮುರಿದುಬಿದ್ದಿದೆ! ಕೆನಡಾದ ಪೌಲ್ ಅಲ್ಫೋನ್ಸೋ ನೀರವ್ ಮೋದಿಯ ಮೋಸದ ಬಲೆಗೆ ಬಿದ್ದ ಯುವಕ. ಈತ ಪಾವತಿ ನಿರ್ವಹಣಾ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ.

ಕೆನಡಾದ ಆರ್ಥಿಕ ವ್ಯವಹಾರಗಳ ಕಂಪೆನಿಯೊಂದರ ಮುಖ್ಯಸ್ಥರಾದ ಆಲ್ಫೋನ್ಸೊ ಎಂಬುವರಿಗೆ ನೀರವ್‌ ಮೋದಿ ನಕಲಿ ವಜ್ರದ ಉಂಗುರಗಳನ್ನು ನೀಡಿ 1.50 ಕೋಟಿ ರೂ.ಗಳಷ್ಟು ಟೋಪಿ ಹಾಕಿದ್ದಾನೆ. ನಿಶ್ಚಿತಾರ್ಥದ ವೇಳೆ ಅಲ್ಫೋನ್ಸೋ ತಮ್ಮ ಭಾವೀ ಪತ್ನಿಗೆ ನೀಡಿದ್ದ ಈ ವಜ್ರದ ಉಂಗುರ ನಕಲಿ ಎಂದು ಗೊತ್ತಾದ ಮರುಕ್ಷಣವೇ ಸಂಬಂಧ ಮುರಿದುಬಿದ್ದಿದೆ.

2012ರಲ್ಲಿ ನೀರವ್‌ ಮೋದಿ ಹಾಗೂ ಆಲ್ಫೋನ್ಸೊಗೂ ಪರಿಚಯವಾಗಿ, ಕ್ರಮೇಣ ಆತ್ಮೀಯತೆ ಬೆಳೆದಿತ್ತು. ಏಪ್ರಿಲ್‌ ತಿಂಗಳ‌ಲ್ಲಿ, ತಮ್ಮ ಪ್ರೇಯಸಿಗಾಗಿ ಎಂಗೇಜ್‌ಮೆಂಟ್‌ ಉಂಗುರಗಳನ್ನು ಕೊಳ್ಳಲು ಮುಂದಾಗಿದ್ದ ಆಲ್ಫೋನ್ಸೊಗೆ ನೀರವ್‌ ನೆನಪಾಗಿದ್ದಾರೆ. ಆದ್ರೆ ನೀರವ್ ಮೋದಿ ಭಾರತದಲ್ಲಿ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ. ಪಂಗನಾಮ ಹಾಕಿ ಪರಾರಿಯಾಗಿರುವ ಬಗ್ಗೆ ಅಲ್ಫಾನ್ಸೋಗೆ ಮಾಹಿತಿಯಿರಲಿಲ್ಲ. ನೀರವ್ ಮೋದಿಗೆ ಜ್ಯುವೆಲ್ಲರಿ ಶಾಪ್ ಇರುವುದನ್ನು ಮನಗಂಡಿದ್ದ ಅಲ್ಫಾನ್ಸೋ ತನ್ನ ಪ್ರೇಯಸಿಗೆ ಡೈಮಂಡ್ ರಿಂಗ್ ಮಾಡಿಕೊಡುವಂತೆ ಕೇಳಿದ್ದ. ಕಳೆದ ಜೂನ್ ನಲ್ಲಿದ್ದ ಡೈಮಂಡ್ ರಿಂಗ್ ಕೂಡ ಕೈಸೇರಿತು. ಅಲ್ಫಾನ್ಸೋ ಅದನ್ನ ಪ್ರೇಯಸಿಗೆ ನೀಡಿದ್ದಾನೆ. ಪ್ರಿಯತಮೆ ಕೂಡ ಸಂತೋಷದಿಂದಲೇ ಉಂಗುರವನ್ನು ಸ್ವೀಕರಿಸಿದ್ದಾಳೆ. ಆದ್ರೆ ಅದು ನಕಲಿ ಎಂದು ಗೊತ್ತಾದಾಗ ನಿಶ್ಚಿತಾರ್ಥ ಮುರಿದುಬಿದ್ದಿದೆ ಎನ್ನಲಾಗಿದೆ.

ಮನನೊಂದು ಯುವತಿ ತನ್ನ ಪ್ರಿಯಕರನಿಂದ ದೂರವಾಗಿದ್ದಾಳೆ. ಇದೀಗ ಆ ವ್ಯಕ್ತಿ ಗೆಳತಿಯ ಅಗಲಿಕೆಯಿಂದ ಮಾನಸಿಕ ಖಿನ್ನತೆಗೆ ತುತ್ತಾಗಿದ್ದಾನೆ.. ಈ ನೀರವ್ ಮೋದಿ ಎಂಬ ದಗಲ್ಬಾಜಿಯ ವಿರುದ್ಧ ಸಿಬಿಐ ತನಿಖೆಗಿಳಿದಿರುವಾಗಲೇ ನಕಲಿ ಉಂಗುರದ ಆರೋಪ ಕೇಳಿಬಂದಿದೆ. ಈ ಬಗ್ಗೆ ಕ್ಯಾಲಿಫೋರ್ನಿಯಾದಲ್ಲಿ ನೀರವ್ ವಿರುದ್ಧ ಪ್ರಕರಣ ದಾಖಲಿಸಿದ್ದು ಒಟ್ಟು 4.2 ಮಿಲಿಯನ್ ಡಾಲರ್ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top