fbpx
ಮನೋರಂಜನೆ

ಮಂಚಕ್ಕೆ ಕರೆದವನಿಗೆ ಖುಷ್ಬೂ ಏನು ಮಾಡಿದ್ದರು ಗೊತ್ತೇ? ಅಭಿಮಾನಿಗಳ ಅಧಿದೇವತೆಯನ್ನೂ ಬಿಡಲಿಲ್ಲ ಕಾಸ್ಟಿಂಗ್ ಕೌಚ್ ಭೂತ

ತಮಿಳಿನ ಬಹು ಭಾಷಾ ತಾರೆ ಖುಷ್ಬೂ ಅವರನ್ನೇ ಈ ಕಾಸ್ಟಿಂಗ್ ಕೌಚ್ ಭೂತ ಬಿಟ್ಟಲ್ಲವೆಂದರೆ ಅದರ ಇತಿಹಾಸ ಎಂಥಾದ್ದೆಂಬುದು ಯಾರಿಗಾದರೂ ಅರ್ಥವಾಗುತ್ತದೆ. ತಮಿಳುನಾಡಲ್ಲಿ ಅಭಿಮಾನಿಗಳ ಅಧಿದೇವತೆಯಂತಿರುವ ಖುಷ್ಬೂ ಕನ್ನಡವೂ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿರುವ ಬಹುಭಾಷಾ ತಾರೆ. ಈಕೆಯ ಮೇಲೆ ತಮಿಳು ನಾಡಲ್ಲಿ ಅದೆಂಥಾ ಕ್ರೇಜ್ ಇದೆಯೆಂದರೆ ಅಭಿಮಾನಿಗಳೇ ಖುಷ್ಬೂಗೆ ದೇವಸ್ಥಾನ ಕಟ್ಟಿ ಪೂಜಿಸುತ್ತಾರೆ!

ಇಂಥಾ ಖುಷ್ಬೂ ಕೂಡಾ ಭಾರತೀಯ ಚಿತ್ರರಂಗದ ಇತರೇ ನಟಿಯರಂತೆಯೇ ಕಾಸ್ಟ್ ಕೌಚಿಂಗ್ ಭೂತದಿಂದ ಕಂಗೆಟ್ಟಿದ್ದರೆಂದರೆ ಎಂಥವರಿಗಾದರೂ ಅಚ್ಚರಿಯಾಗದಿರೋದಿಲ್ಲ. ಆದರೆ ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿರೋದರಿಂದ ನಂಬದೇ ಬೇರೆ ವಿಧಿ ಇಲ್ಲ.

 

 

ಅಂದಹಾಗೆ ಖುಷ್ಬೂಗೆ ಕಾಮುಕರ ಕಾಟ ಕಂಡು ಬಂದಿದ್ದು ತೆಲುಗು ಚಿತ್ರರಂಗದಲ್ಲಿ. ವರ್ಷಾಂತರಗಳ ಹಿಂದೆ ಖುಷ್ಬೂ ಹದಿನೆಂಟನೇ ವಯಸ್ಸಿನಲ್ಲಿ ತೆಲುಗಿನ ‘ಚಿನ್ನೋಡು ಪೆದ್ದೋಡು’ ಎಂಬ ಚಿತ್ರದಲ್ಲಿ ನಟಿಸಿದ್ದರಂತೆ. ಆ ಚಿತ್ರದ ನಾಯಕನಾಗಿದ್ದಾತ ಚಂದ್ರ ಮೋಹನ್. ಆ ಕಾಲಕ್ಕೇ ಚಂದ್ರ ಮೋಹನ್ ತೆಲುಗಿನಲ್ಲಿ ಸ್ಟಾರ್ ನಟನಾಗಿ ಮಿಂಚುತ್ತಿದ್ದ.

ಇಂಥವನಿಗೆ ತನ್ನ ಜೊತೆ ತೆರೆ ಹಂಚಿಕೊಂಡ ನಟಿಯರೆಲ್ಲ ನಂಬರ್ ಒನ್ ಹೀರೋಯಿನ್ನುಗಳಾಗುತ್ತಾರೆಂಬ ಭ್ರಮೆ ಇತ್ತು. ಇದನ್ನೇ ತನ್ನ ಕಚ್ಚೆಹರುಕತನದ ಕಾಯಿಲೆಗೆ ಬಳಸಿಕೊಳ್ಳುತ್ತಿದ್ದ ಚಂದ್ರ ಮೋಹನ್ನು ತನ್ನ ಪ್ರಭಾವಲಯಕ್ಕೆ ಬರುವ ನಟಿಯರನ್ನೆಲ್ಲ ಮಂಚಕ್ಕೆ ಆಹ್ವಾನಿಸುತ್ತಿದ್ದ.

ಇಂಥಾ ಚಂದ್ರ ಮೋಹನ ಗುಂಡು ಗಂಡಗಿದ್ದ ಖುಷ್ಬೂ ಮೇಲೆ ಕಣ್ಣು ಹಾಕದಿರಲು ಸಾಧ್ಯವೇ? ಅದೇ ರೀತಿ ಖಷ್ಬೂಗೆ ಮೆಲ್ಲಗೆ ಕಾಟ ಕೊಡಲಾರಂಭಿಸಿದ್ದ ಆತ ತನ್ನೊಂದಿಗೆ ಮಂಚ ಹಂಚಿಕೊಂಡರೆ ಇನ್ನೂ ಹೆಚ್ಚಿನ ಅವಕಾಶ ಕೊಡಿಸೋದಾಗಿ ಆಮಿಷ ಒಡ್ಡಿದ್ದನಂತೆ. ಆರಂಭದಲ್ಲಿ ಶಾಕ್ ಆದರೂ ಒಂದಷ್ಟು ದಿನಗಳ ಕಾಲ ಇದನ್ನೆಲ್ಲ ಸಹಿಸಿಕೊಂಡ ಖುಷ್ಬೂಗೆ ತಾಳ್ಮೆಯ ಕಟ್ಟೆ ಒಡೆದದ್ದೇ ಚಂದ್ರ ಮೋಹನ್‌ಗೆ ಸೆಡ್ಡು ಹೊಡೆದಿದ್ದರಂತೆ!

ಮಾರನೇ ದಿನವೇ ಸೆಟ್ಟಿಗೆ ತನ್ನ ಸಹೋದರರನ್ನು ಕರೆದುಕೊಂಡು ಹೋದ ಖುಷ್ಬೂ ಚಂದ್ರ ಮೋಹನ್ ಎದುರು ನಿಂತವರೇ `ನಿನ್ನ ಮನೆಯ ಹೆಣ್ಣು ಮಕ್ಕಳನ್ನು ನನ್ನ ಸಹೋದರರ ಜೊತೆ ಮಲಗಿಸು. ಆ ನಂತರ ನಾನು ನಿನ್ನ ಆಸೆಯಂತೆ ನಡೆದುಕೊಳ್ಳುತ್ತೇನೆ’ ಅಂದಿದ್ದರಂತೆ. ಇದಲ್ಲದೇ ಸಂಬಂಧಿಸಿದ ಒಂದಷ್ಟು ಮಂದಿಗೂ ಚಂದ್ರ ಮೋಹನನ ಲೀಲೆಗಳನ್ನು ಹೇಳಿದ್ದರಂತೆ. ಆ ನಂತರ ಮಾನ ಹರಾಜಾಗುವ ಭಯಕ್ಕೆ ಬಿದ್ದ ಚಂದ್ರ ಮೋಹನ ಖುಷ್ಬೂಗೆ ಕಾಟ ಕೊಡೋದನ್ನು ನಿಲ್ಲಿಸಿದ್ದ ಅಂತ ಈ ನಟಿಯೇ ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top