ಮನೋರಂಜನೆ

ಮುದ್ದು ಮಡದಿ ರಾಧಿಕಾ ಬಯಕೆ ಈಡೇರಿಸಲು ಹೊಸ ಅವತಾರ ತಾಳಿದ ರಾಕಿಂಗ್ ಸ್ಟಾರ್

ತೆರೆ ಮೇಲಿರಲಿ ಅಥವಾ ತೆರೆ ಹಿಂದಿರಲಿ ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾಗೆ ಮೊದಲ ಸ್ಥಾನ ಮೀಸಲಿದೆ.ಸರಿಸುಮಾರು ಒಂದೂವರೆ , 2 ವರ್ಷದ ಹಿಂದೆ ಇಬ್ಬರೂ ಸಾಂಸಾರಿಕ ಜೀವನಕ್ಕೆ ಧುಮುಕಿದರು,ಇಡೀ ಕರ್ನಾಟಕ ಜನತೆ ಯಶ್ ಹಾಗೂ ರಾಧಿಕಾ ಮಗುವಿನ ಆಗಮನದ ನೀರಿಕ್ಷೆಯಲ್ಲಿ ಇದ್ದಾರೆ ,ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ರಾಧಿಕಾ ಅನೇಕ ಕುತೂಹಲಕಾರಿ ವಿಷಯಗಳನ್ನು ಹೆಕ್ಕಿತಂದು ಅಭಿಮಾನಿಗಳ ಮುಂದೆ ದಾಖಲಿಸುತ್ತಾ ಬಂದಿದ್ದಾರೆ.

ಈ ಸಲ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಸುದ್ದಿಯಲ್ಲಿ ಇರುವುದು ಈ ಕಾರಣಕ್ಕೆ ,ಅವರ ಫೋಟೋ ಹಾಗೂ ಪೋಸ್ಟ್ ಗಳಿಗೆ ಎಷ್ಟೋ ಜನ ಅಭಿಮಾನಿಗಳು ಕಾದು ಕುಳಿತಿರುತ್ತಾರೆ,ಈ ವಿಷ್ಯಕ್ಕೆ ಫುಲ್ ಸುದ್ದಿಯಲ್ಲಿ ಇದ್ದಾರೆ ರಾಧಿಕಾ ,ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಈಗ ಗರ್ಭಿಣಿ ,ಗರ್ಭಿಣಿ ಅಂದ್ಮೇಲೆ ಬಯಕೆಗಳು ಕಾಮನ್ ,ರಾಧಿಕಾ ಗೆಳತಿಯರಾದ ಪ್ರತಿಭಾ ಸುರೇಶ್, ಸಾನಿಯಾ ಸರ್ದರಿಯಾ ಮತ್ತು ವನಿತಾ ಉಮೇಶ್ ಮೂವರು ರಾಧಿಕಾಗೆ ಸರ್ಪ್ರೈಸ್ ನೀಡಿದರು ಅದನ್ನು ಮೊನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಫುಲ್ ಖುಷಿ ಪಟ್ಟಿದ್ರು ರಾಧಿಕಾ ಆ ಬೆನ್ನಲೇ ರಾಧಿಕಾ ಈಗ ಇನ್ನೊಂದು ಪೋಸ್ಟ್ ಮಾಡುವ ಮೂಲಕ ಫುಲ್ ಸುದ್ದಿಯಲ್ಲಿದ್ದಾರೆ ರಾಧಿಕಾ ,ರಾಕಿಂಗ್ ಸ್ಟಾರ್ ಯಶ್ ತನ್ನ ಹೆಂಡತಿ ರಾಧಿಕಾಗಾಗಿ ಹೊಸ ಅವತಾರದಲ್ಲಿ ಕಣ್ಣಿಸಿಕೊಂಡಿದ್ದಾರೆ,ಹೌದು ಗರ್ಭಿಣಿ ರಾಧಿಕಾಳ ಹೊಸ ಬಯಕೆಯನ್ನು ಈಡೇರಿಸಿದ್ರಂತೆ ಯಶ್.

 

 

 

ಯಶ್ ತಮ್ಮ ಪತ್ನಿಗಾಗಿ ಅಡುಗೆ ಮಾಡಿ ಕೊಡುವ ಮೂಲಕ ಪತ್ನಿಯ ಆಸೆಯನ್ನು ನೆರವೇರಿಸಿದ್ದಾರೆ. ಯಶ್ ಅಡುಗೆ ಮಾಡುತ್ತಿರುವ ಫೋಟೋವನ್ನು ಪತ್ನಿ ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.ಅದರ ಜೊತೆ ಹೀಗೆ ಬರೆದುಕೊಂಡಿದ್ದಾರೆ “ನನ್ನ ಪತಿ ಯಾವುದೇ ವಿಷಯದಲ್ಲೂ ಹಿಂದಿರಲು ಬಯಸುವುದಿಲ್ಲ. ಯಶ್ ನನಗಾಗಿ ಅಡುಗೆ ಮಾಡಿದ್ದಾರೆ. ಮಿ. ರಾಕಿಂಗ್ ಸ್ಟಾರ್ ನೀವು ಒಳ್ಳೆಯ ಶೆಫ್” ಈ ಫೋಟೋ ಈಗ ಫುಲ್ ವೈರಲ್ ಆಗಿದ್ದು ಯಶ್ ಹಾಗೂ ರಾಧಿಕಾ ಫ್ಯಾನ್ಸ್ ಈ ಫೋಟೋ ನೋಡಿ ಫುಲ್ ಫಿದಾ ಆಗಿದ್ದು ಇವರ ಪ್ರೀತಿಗೆ ಯಾವ ದೃಷ್ಟಿ ಕೂಡ ತಾಕಬಾರದು ಸದಾ ಕಾಲ ಹೀಗೆ ಇಬ್ಬರು ಖುಷಿಯಾಗಿರಲ್ಲಿ ಎಂದು ಹರಸಿದ್ದಾರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top