fbpx
ಮನೋರಂಜನೆ

ಲೈಂಗಿಕ ಕಿರುಕುಳ ಆರೋಪ ಹೊತ್ತ ರಘು ದೀಕ್ಷಿತ್ ವಿರುದ್ಧವೇ ಮಾತನಾಡಿದ ಪತ್ನಿ ಮಯೂರಿ.

ಬಾಲಿವುಡ್ ನಟಿ ತನುಶ್ರೀ ದತ್ತಾ ನಿರ್ದೇಶಕ ಮತ್ತು ಹಿರಿಯ ನಟ ನಾನಾ ಪಾಟೇಕರ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ನಂತರ ದೇಶದಲ್ಲಿ ‘ಮೀಟೂ’ ಆಂದೋಲನ ಚುರುಕು ಪಡೆದುಕೊಂಡಿದೆ. ಈ ಅಭಿಯಾನ ತೀವ್ರಗೊಂಡಿರುವಾಗಲೇ ಕನ್ನಡದ ಜನಪ್ರಿಯ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ಮೇಲೂ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಈ ಮೂಲಕ ಸ್ಯಾಂಡಲ್‍ವುಡ್‌ನಲ್ಲೂ #Metoo ಅಭಿಯಾನದ ಕಿಡಿ ಹೊತ್ತಿಸಿದ್ದಾರೆ.

ಗಾಯಕಿ ಚಿನ್ಮಯಿ ಶ್ರೀಪಾದ ಈಗ ರಘು ದೀಕ್ಷಿತ್‌ ಮೇಲೂ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ರಘು ದೀಕ್ಷಿತ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಇಬ್ಬರು ವಿವರಿಸಿರುವುದನ್ನು ಗಾಯಕಿ ಚಿನ್ಮಯಿ ಶ್ರೀಪಾದ ಟ್ವೀಟ್ ಮಾಡಿದ್ದಾರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಘು ದೀಕ್ಷಿತ್​ ಬೇಷರತ್​ ಕ್ಷಮೆ ಯಾಚಿಸಿದ್ದಾರೆ.

 

 

ಇನ್ನು ಈ ಆರೋಪಕ್ಕೆ ಸಂಬಂಧಪಟ್ಟಂತೆ ರಘು ದೀಕ್ಷಿತ್ ಪತ್ನಿ ಮಯೂರಿ ಉಪಾಧ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು,”ನಡತೆಯಲ್ಲಿ ಅಸಭ್ಯವಾಗಿ ಮತ್ತು ಅನುಚಿತವಾಗಿ ವರ್ತಿಸಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು, ಶಿಕ್ಷೆಯಾಗಲೇಬೇಕು, ಈ ಮೂಲಕವಾದರೂ ಬೇರೆ ಪುರುಷರು ಮಹಿಳೆಯರ ಘನತೆ, ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡುವ ಧೈರ್ಯ ಹೊಂದುವುದಿಲ್ಲ, ಬೇರೆ ಪುರುಷರಿಗೆ ಇದು ಪಾಠವಾಗಬೇಕು.”

“ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರು ಮುಂದೆ ಬಂದು ಮುಕ್ತವಾಗಿ ತಮ್ಮ ನೋವನ್ನು ತೋಡಿಕೊಳ್ಳುವವರಿಗೆ ನನ್ನ ಸಂಪೂರ್ಣ ಬೆಂಬಲವಿದೆ, ಈ ವಿಷಯದಲ್ಲಿ ನಾನು ದೃಢವಾಗಿದ್ದೇನೆ. ಆದರೆ ಮಹಿಳೆಯರಿಗೆ ಈ ವಿಚಾರದಲ್ಲಿ ಅಷ್ಟೊಂದು ಧೈರ್ಯವಿದೆಯೇ ಎಂದು ನನಗೆ ಗೊತ್ತಿಲ್ಲ. ಪುರುಷನ ವಿರುದ್ಧ ಆರೋಪ ಮಾಡಲು ಮಹಿಳೆಗೆ ಸಾಕಷ್ಟು ಧೈರ್ಯ ಬೇಕು, ಅದು ಸೋಷಿಯಲ್ ಮೀಡಿಯಾ ಮೂಲಕವಾಗಿರಲಿ ಅಥವಾ ಬೇರೆ ಮಾಧ್ಯಮಗಳ ಮೂಲಕವಾಗಿರಲಿ, ಲೈಂಗಿಕ ಕಿರುಕುಳ ವಿಚಾರದಲ್ಲಿ ನನ್ನ ನಿಲುವು ಸ್ಪಷ್ಟವಾಗಿದೆ” ಎಂದಿದ್ದಾರೆ.

ಅಲ್ಲದೇ, ಚಿನ್ಮಯಿ ಶ್ರೀಪಾದ್ ಕಾರ್ಯವನ್ನು ಶ್ಲಾಘಿಸಿದ್ದಾರೆ.. ಹಾಗಾದರೆ ಗಾಯಕಿ ಚಿನ್ಮಯಿಯವರ ಆರೋಪವೇನು? ಮತ್ತು ಅದಕ್ಕೆ ರಘು ದೀಕ್ಷಿತ್ ಮೀಡಿರುವ ಉತ್ತರವೇನು? ಅಂತ ನೋಡೋಣ ಬನ್ನಿ.

ಚಿನ್ಮಯಿಯವರ ಆರೋಪಮಯ ಟ್ವೀಟ್ ಈ ರೀತಿ ಇವೆ:

 

 

“ರಘು ದೀಕ್ಷಿತ್ ಪರಭಕ್ಷಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ರೆಕಾರ್ಡಿಂಗ್‌ಗಾಗಿ ಅವರ ಸ್ಟುಡಿಯೋಗೆ ಆಹ್ವಾನಿಸಲಾಗಿತ್ತು. ಅವರ ಪತ್ನಿಗೆ ಹುಷಾರಿಲ್ಲ ಎಂದಿದ್ದರು (ಮದುವೆಯಾದ ಎಲ್ಲಾ ಪುರುಷರಂತೆ). ಅವರ ಪತ್ನಿ ಒಳ್ಳೆಯರು. ಅವರು ಬಂದ ಕಾರಣ ರೆಕಾರ್ಡಿಂಗ್ ಕೆಲಸ ನಡೆಯಲಿಲ್ಲ. ಕೆಲಸಕ್ಕಾಗಿ ಬಂದಿದ್ದೇನೆ ಎಂದು ಪತ್ನಿ ಬಳಿ ನಟಿಸುವಂತೆ ತಿಳಿಸಿದರು. ಈ ಬಗ್ಗೆ ಅವರ ಜತೆ ವಾಗ್ವಾದ ನಡೆಯಿತು. ಬಳಿಕ ಅವರ ಪತ್ನಿ ಬಂದು ಚೆನ್ನಾಗಿಯೇ ಮಾತನಾಡಿಕೊಂಡು ಹೊರಟು ಹೋದರು. ರೆಕಾರ್ಡಿಂಗ್ ಮುಗಿದ ಬಳಿಕ ಚೆಕ್‌ಗೆ ಸಹಿ ಹಾಕುವ ಸಂದರ್ಭದಲ್ಲಿ ನನ್ನನ್ನು ಹತ್ತಿರಕ್ಕೆ ಬರಸೆಳೆದು ಚುಂಬಿಸುವಂತೆ ಕೇಳಿದರು. ಬಳಿಕ ಬಾಗಿಲ ಬಳಿ ನನ್ನನ್ನು ಎತ್ತಿಕೊಳ್ಳಲು ಪ್ರಯತ್ನಿಸಿದರು, ನಾನಾಗ ಕೂಗುತ್ತಾ ಕೆಳಗೆ ಓಡಿ ಹೋದೆ. ಬಹಳಷ್ಟು ಹೆಣ್ಣುಮಕ್ಕಳು ಅವರ ಕೈಯಲ್ಲಿ ಇದೇ ರೀತಿ ಅನುಭವಿಸಿರುತ್ತಾರೆ ಎಂದು ನನಗೆ ಗೊತ್ತು. ಹೇಸಿಗೆ ಆಗುತ್ತದೆ. ನನ್ನ ಹೆಸರನ್ನು ಬಹಿರಂಗಪಡಿಸಲು ಇಚ್ಚಿಸಲ್ಲ. ನಿಜವಾಗಿ ನನಗೆ ಆ ಗಟ್ಸ್ ಇಲ್ಲ, ನಾನಿನ್ನೂ ಸಂಗೀತದಲ್ಲಿ ನೆಲೆನಿಲ್ಲುತ್ತಿದ್ದೇನೆ” ಎಂದು ಅನಾಮಿಕ ಮಹಿಳೆ ಬರೆದುಕೊಂಡಿದ್ದಾರೆ.

ಮತ್ತೊಂದು ಪತ್ರದಲ್ಲಿ “ಹೊಸ ಟ್ಯೂನ್ ಬಗ್ಗೆ ಅಭಿಪ್ರಾಯ ಕೇಳಲು ರಘು ದೀಕ್ಷಿತ್ ನನ್ನನ್ನು ಮನೆಗೆ ಆಹ್ವಾನಿಸಿದ್ದರು. ಬಳಿಕ ತನ್ನ ತೊಡೆ ಮೇಲೆ ಕೂರುವಂತೆ ರಘು ದೀಕ್ಷಿತ್ ಹೇಳಿದ್ದರು. ಇದರಿಂದ ಟ್ಯೂನ್‌ಗಳನ್ನು ಹತ್ತಿರದಿಂದ ಕೇಳಲು ಸಾಧ್ಯವಾಗುತ್ತದೆ” ಎಂದಿದ್ದರಂತೆ. ಆದರೆ ಆ ಮಹಿಳೆ ಅದಕ್ಕೆ ಅಂಗೀಕರಿಸಲಿಲ್ಲ. ಬಳಿಕ ಅವರ ಗೆಳೆಯರು ಬಂದರು ಆಗ ಅವರಿಗೆ ಆಕೆ ಪತ್ರಕರ್ತೆ ಎಂದು ಪರಿಚಯ ಮಾಡಿಸಿದ್ದರು ಎಂದಿದ್ದಾರೆ ಚಿನ್ಮಯಿ.

ರಘು ದೀಕ್ಷಿತ್ ಅವರ ಪ್ರತಿಕ್ರಿಯೆ:

 

 

ನನ್ನ ವಿರುದ್ಧ ಆರೋಪಿಸಿರುವ ಅನಾಮಿಕರಿಗೆ ನನ್ನ ಪ್ರತಿಕ್ರಿಯೆ ಇಲ್ಲಿದೆ. ನನ್ನ ಕಡೆಯಿಂದ ಏನೇ ತಪ್ಪಾಗಿದ್ದರೂ ಕ್ಷಮೆ ಇರಲಿ. ನನ್ನ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ನಾನು ಚಿನ್ಮಯಿ ವಿರುದ್ಧ ಆಕ್ರಮಣ ಮಾಡಲು ಹೋಗಲ್ಲ. ನಾನು ಪ್ರಾಮಾಣಿಕವಾಗಿದ್ದೇನೆ ಎಂಬರ್ಥದಲ್ಲಿ ಸುದೀರ್ಘ ಪತ್ರ ಬರೆದಿದ್ದಾರೆ. ನನ್ನ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ನನಗೆ “ತೀವ್ರ ಅರಿವಿದೆ”. ಇದೊಂದು ತಿಳಿವಳಿಕೆಯಿಲ್ಲದ ತಪ್ಪು ನಿರ್ಣಯ ಎಂದಿದ್ದಾರೆ.

ಚಿನ್ಮಯಿ ಶ್ರೀಪಾದ್​ ಅವರ ಮೇಲೆ ದಾಳಿ ಮಾಡುತ್ತಿರುವ ಎಲ್ಲರಲ್ಲೂ ನನ್ನದೊಂದು ಕೋರಿಕೆ. ದಯವಿಟ್ಟು ಅದನ್ನು ನಿಲ್ಲಿಸಿ. ಚಿನ್ಮಯಿ ಒಳ್ಳೆಯ ವ್ಯಕ್ತಿ. ಬೇರೆಯವರಿಗೋಸ್ಕರ ಆಕೆ ಧ್ವನಿ ಎತ್ತಿರುವುದು ಒಳ್ಳೆಯದೇ. ಚಿನ್ಮಯಿ ಈಗ ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿರುವ ಪ್ರಕರಣ ನನಗೆ ಜ್ಞಾಪಕವಿದೆ. ಅದರಲ್ಲಿ ಪ್ರಸ್ತಾಪಿಸಿರುವ ವ್ಯಕ್ತಿ ಯಾರೆಂಬುದು ನನಗೆ ಗೊತ್ತು. ಈ ಹಿಂದೆಯೇ ಆಕೆಯಲ್ಲಿ ಕ್ಷಮಾಪಣೆ ಕೇಳಿದ್ದೆ. ಈಗ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿಕೊಳ್ಳುವುದರ ಜೊತೆಗೆ ಖಾಸಗಿಯಾಗಿಯೂ ಮತ್ತೊಮ್ಮೆ ಅವರಲ್ಲಿ ಕ್ಷಮೆ ಕೇಳುವೆ. ಘಟನೆ ನಡೆದಿರುವುದು ನಿಜ. ಆದರೆ ಸಂಪೂರ್ಣವಾಗಿ ಅವರು ವರ್ಣಿಸಿದಂತೆ ನಡೆದಿಲ್ಲ. ಅದು ಸಂಪೂರ್ಣವಾಗಿ ನನ್ನ ಕಡೆಯಿಂದ ಆದಂತಹ ಚಿಕ್ಕ ಕೆಟ್ಟ ನಿರ್ಧಾರ.

ರೆಕಾರ್ಡಿಂಗ್ ಬಳಿಕ ಒಂದು ಹಗ್ ಕೊಟ್ಟಿದ್ದೆ. ಅದೇ ರೀತಿ ಚುಂಬಿಸಲು ಪ್ರಯತ್ನಿಸಿದೆ. ಆದರೆ ಅವರು ತಡೆದ ಕಾರಣ ಆ ರೀತಿ ಮಾಡಲಾಗಲಿಲ್ಲ. ಬಳಿಕ ನಾನು ಸ್ಟುಡಿಯೋದಿಂದ ಹೊರಟು ಹೋದೆ. ನನ್ನ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ನಾನು ಕ್ಷಮೆ ಕೋರಿದ್ದೆ” ಎಂದು ರಘು ದೀಕ್ಷಿತ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top