ಮನೋರಂಜನೆ

ಕನ್ನಡ ನಟಿ ಭಾವನಾಗೆ ಸಿಕ್ತು ಅಮೆರಿಕಾದ ಪ್ರತಿಷ್ಠಿತ ಪ್ರಶಸ್ತಿ.

ಕನ್ನಡ ಚಲನಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಳಿಗಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಮೇರಿಲ್ಯಾಂಡ್ ರಾಜ್ಯದ ಗವರ್ನರ್ ಅವರ ಪ್ರತಿಷ್ಠಿತ ಪುರಸ್ಕಾರವನ್ನು ಭಾವನಾ ರಾಮಣ್ಣ ಅವರಿಗೆ ನೀಡಿ ಗೌರವಿಸಲಾಗಿದೆ. ನಟಿ ಭಾವನಾ ಅವರನ್ನು ಅಮೆರಿಕ ಸಂಯುಕ್ತ ಸಂಸ್ಥಾನದ ಮೆರಿಲ್ಯಾಂಡ್​​​​ನ ‘ಬಿಗ್ ಬಿಸಿನೆಸ್ ವಿತ್ ಸ್ಮಾಲ್ ಬಿಸಿನೆಸ್’ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಿ ಈ ಪ್ರಶಸ್ತಿ ನೀಡಲಾಗಿದೆ.

‘ಹೂವು’ ಪ್ರತಿಷ್ಠಾನದ ಮೂಲಕ ಭಾರತದ ವಿವಿಧ ಭಾಗಗಳಲ್ಲಿ ಕಲಾವಿದರನ್ನು ಹಾಗೂ ವಿವಿಧ ಕಲಾಪ್ರಕಾರಗಳನ್ನು ಪ್ರೋತ್ಸಾಹಿಸಿ ಹುರಿದುಂಬಿಸುತ್ತಿರುವುದಕ್ಕಾಗಿ ಕೂಡಾ ರಾಜ್ಯಪಾಲರು ಅವರನ್ನು ಪ್ರಶಂಶಿಸಿದರು.

ಇದೇ ವೇಳೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಾಸಿಸುತ್ತಿರುವ ಕನ್ನಡ ಮಾತನಾಡುವ ಜನರ ಸಾಂಸ್ಕೃತಿಕ ಸಂಘಟನೆಯಾಗಿರುವ, ಮೇರಿಲ್ಯಾಂಡ್ ಮತ್ತು ವಾಷಿಂಗ್ಟನ್ ಡಿಸಿಯ ಕಾವೇರಿ ಕನ್ನಡ ಅಸೋಸಿಯೇಶನ್ ‘ವರ್ಷದ ಅತ್ಯುತ್ತಮ ಭಾರತೀಯ ನಟಿ’ ಪ್ರಶಸ್ತಿಯನ್ನು ಕೂಡ ಭಾವನಾ ರಾಮಣ್ಣ ಅವರಿಗೆ ನೀಡಿ ಗೌರವಿಸಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top