ಮನೋರಂಜನೆ

“ಮಂಚಕ್ಕೆ ಏರಲು ನಿರಾಕರಿಸಿದ್ದಕ್ಕೆ ಚಿತ್ರದಿಂದ ಕೈಬಿಡಲಾಗಿತ್ತು” ಮಲ್ಲಿಕಾ ಶೆರಾವತ್.

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿರೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಂಥ ಕಾಸ್ಟ್ ಕೌಚಿಂಗ್‌ನ ಸರಣಿ ಇದೀಗ ಎಲ್ಲೆಲ್ಲಿಯೋ ಬಿಚ್ಚಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವೇ ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ..

ಇತ್ತೀಚಿಗೆ ಬಾಲಿವುಡ್ ನಟಿ ತನುಶ್ರೀ ದತ್ತಾ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಆರೋಪ ಮಾಡಿದೇಟಿಗೆ ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಇಡೀ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಅದಾದೇಟಿಗೆ ಹಲವು ಚಿತ್ರರಂಗದ ನಟಿಯರೂ ಕೂಡ ಚಿತ್ರರಂಗದಲ್ಲಿ ತಮಗಾಗುತ್ತಿರುವ ಚಿತಾಹಿಂಸೆಯನ್ನು ಒಂದರ ಹಿಂದೊಂದರಂತೆ ಬಿಚ್ಚಿಡುತ್ತಾ ಬಂದಿದ್ದಾರೆ.. ಇದೀಗ ಹಾಟ್ ಬೆಡಗಿ ಮಲ್ಲಿಕಾ ಶೆರಾವತ್ ಕೂಡ ನನಗೂ ಅಂಥ ಅನುಭವವಾಗಿದ್ದ ಹೇಳಿಕೆ ಕೂಡ ಸಕತ್ ಚರ್ಚೆಯಾಗುತ್ತಿದೆ.

ಇತ್ತೀಚಿಗೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಅವರು ಕಾಸ್ಟಿಂಗ್ ಕೌಚ್ ವಿಚಾರವಾಗಿ ಹೊಸ ಬಾಂಬ್ ಸಿಡಿಸಿದ್ದಾರು. “ತೆರೆ ಮೇಲೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮಲ್ಲಿಕಾ ಶೆರಾವತ್ ಎಲ್ಲಕ್ಕೂ ಸುಲಭವಾಗಿ ರಾಜಿಯಾಗ್ತಾರೆ ಅಂತ ಜನರು ತಪ್ಪಾಗಿ ನಂಬಿದ್ದಾರೆ. ತೆರೆ ಮೇಲೆ ರೋಮ್ಯಾನ್ಸ್ ಮಾಡಿದ ಅಥವಾ ತುಂಡು ಬಟ್ಟೆ ಧರಿಸಿದ ಮಾತ್ರಕ್ಕೆ ಅವರಿಗೆ ನೈತಿಕತೆ ಇಲ್ಲ ಎಂದು ಭಾವಿಸಿ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುವ ಮಂದಿ ಬಹಳಷ್ಟು ಇದ್ದಾರೆ, ಅದರ ಅನುಭವ ನನಗೂ ಆಗಿದೆ. ನನಗೆ ಬೆಳಗಿನ ಜಾವ 3 ಗಂಟೆಗೆ ರೂಮ್ ಬಾ ಎಂದು ನಿರ್ದೇಶಕ ಕರೆದದ್ದೂ ಇದೆ”

“ನಾನು ನನ್ನ ಸಹನಟರ ಹಾಗೂ ನಿರ್ದೇಶಕರ ಜೊತೆ ಆಫ್​ಸ್ಕ್ರೀನ್​ನಲ್ಲಿ ಸಲುಗೆಯಿಂದ ಇರುತ್ತಿರಲಿಲ್ಲ ಎಂಬ ಕಾರಣಕ್ಕೆ ನನ್ನನ್ನ ಅನೇಕ ಚಿತ್ರಗಳಿಂದ ಕೈಬಿಡಲಾಗಿದೆ. ಒಂದು ಚಿತ್ರದ ನಾಯಕ, ತೆರೆ ಮೇಲೆ ನನ್ನೊಂದಿಗೆ ಇರುವಂತೆ ತೆರೆ ಹಿಂದೆಯೂ ಇರುತೀಯಾ? ಎಂದು ಕೇಳುವ ಮೂಲಕ ಮಂಚಕ್ಕೆ ಆಹ್ವಾನಿಸಿದ್ದ ಆದರೆ ನಾನು ಅದಕ್ಕೆ ಒಪ್ಪಿಕೊಳ್ಳದಿದ್ದಾಗ ಆ ಚಿತ್ರದಿಂದಲೇ ನನ್ನನ್ನು ಹೊರ ಹಾಕಲಾಯಿತು” ಎಂದು ತಾವು ಕಂಡುಂಡ ಅನುಭವಗಳನ್ನು ಹಂಚಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top