ಸಮಾಚಾರ

ಹೃತಿಕ್ ರೋಷನ್ ವಿರುದ್ಧ ರೊಚ್ಚಿಗೆದ್ದ ಬಾಲಿವುಡ್ ಕ್ವೀನ್ ಕಂಗನಾ ರನೌತ್.

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿರೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಂಥ ಕಾಸ್ಟ್ ಕೌಚಿಂಗ್‌ನ ಸರಣಿ ಇದೀಗ ಎಲ್ಲೆಲ್ಲಿಯೋ ಬಿಚ್ಚಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವೇ ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ..

ಇತ್ತೀಚಿಗೆ ಬಾಲಿವುಡ್ ನಟಿ ತನುಶ್ರೀ ದತ್ತಾ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಆರೋಪ ಮಾಡಿದೇಟಿಗೆ ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಇಡೀ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಅದಾದೇಟಿಗೆ ಹಲವು ಚಿತ್ರರಂಗದ ನಟಿಯರೂ ಕೂಡ ಚಿತ್ರರಂಗದಲ್ಲಿ ತಮಗಾಗುತ್ತಿರುವ ಚಿತಾಹಿಂಸೆಯನ್ನು ಒಂದರ ಹಿಂದೊಂದರಂತೆ ಬಿಚ್ಚಿಡುತ್ತಾ ಬಂದಿದ್ದಾರೆ.. ಇದೀಗ ಬಾಲಿವುಡ್ ಕ್ವೀನ್ ಕಂಗನಾ ರನೌತ್ ಅಖಾಡಕ್ಕಿಳಿದಿದ್ದಾಳೆ.

 

 

 

ಕಂಗನಾ – ಹೃತಿಕ್ ನಡುವಿನ ರಂಪಾಟ ಮತ್ತೊಮ್ಮೆ ಶುರುವಾಗಿದೆ. ಈ ಹಿಂದೆ ಒಬ್ಬರಿಗೊಬ್ಬರು ಲೀಗಲ್ ನೋಟಿಸ್ ಕೊಟ್ಟುಕೊಂಡು, ಅದನ್ನು ಮೀಡಿಯಾಕ್ಕೂ ತಿಳಿಸಿ ಮತ್ತಷ್ಟು ರಾಡಿ ಎಬ್ಬಿಸಿಕೊಂಡಿರು. ಇದೀಗ ಅದೇ ವಿಷಯವಾಗಿ ಕಂಗನಾ ಹೃತಿಕ್ ವಿರುದ್ಧ ಕಿಡಿಕಾರಿದ್ದಾರೆ.

ಮಿಟೂ ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ನಟಿ ಕಂಗನಾ ರನೋಟ್‌ ಈ ಮೂಲಕ ಪುನಃ ನಟ ಹೃತಿಕ್ ರೋಷನ್ ಮೇಲೆ ಕೆಂಡಕಾರಿದ್ದಾರೆ. ”ಹೃತಿಕ್ ರೋಷನ್ ಜೊತೆಗೆ ಯಾರೂ ಕೆಲಸ ಮಾಡಬಾರದು” ಎಂದು ನಟಿ ಕಂಗನಾ ರಣೌತ್ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ. ಮಿ ಟೂ ಅಭಿಯಾನದ ಅಡಿಯಲ್ಲಿ ಹೃತಿಕ್ ಶಿಕ್ಷೆಗೆ ಅರ್ಹ ವ್ಯಕ್ತಿ ಎಂದು ಜೀ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ..

ಮಹಿಳೆಯರ ಜೊತೆಗೆ ಸಭ್ಯವಾಗಿ ನಡೆದುಕೊಳ್ಳದ ಹಲವರು ಇನ್ನೂ ನಮ್ಮ ಇಂಡಸ್ಟ್ರಿಯಲ್ಲಿ ಇದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರು ಇದ್ದಾರೆ. ಅಂಥವರಿಗೆ ಶಿಕ್ಷೆ ಆಗಲೇಬೇಕು” ಎಂದಿದ್ದಾರೆ ನಟಿ ಕಂಗನಾ ರಣೌತ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top