ಮನೋರಂಜನೆ

ಈ ನಟಿ ಒಂದು ಚಿತ್ರದಲ್ಲಿ 20 ನಿಮಿಷದ ಪಾತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ,ಗೊತ್ತಾದ್ರೆ ಬೆಚ್ಚಿ ಬೀಳ್ತಿರಾ

ಚಿತ್ರರಂಗದಲ್ಲಿ ಅದೃಷ್ಟವಿದ್ದರೆ ಏನೂ ಬೇಕಾದರೂ ನಡೆಯುತ್ತದೆ ಎಂಬುದಕ್ಕೆ ಈ ನಟಿಯೇ ಉತ್ತಮ ಉದಾಹರಣೆ. ಪಾಕೆಟ್ ಮನಿಗಾಗಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಈ ಹುಡುಗಿ ಇವತ್ತು ಸೌತ್ ಸಿನಿ ದುನಿಯಾದ ಟಾಪ್ ನಟಿಯರಲ್ಲಿ ಒಬ್ಬರಾಗಿ ಮೆರೆಯುತ್ತಿದ್ದಾಳೆ. ಆ ನಟಿ ಯಾರೆಂದರೆ ಸುಂದರ ಹುಡುಗಿ ‘ರಕುಲ್ ಪ್ರೀತ್ ಸಿಂಗ್’, ಕನ್ನಡದ “ಗಿಲ್ಲಿ” ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದ ಇವರು ಸದ್ಯ ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಟಿಯಾಗಿದ್ದು. ತೆಲುಗಿನ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ಅಭಿನಯಿಸಿ ಸ್ಕ್ರೀನ್ ಹಂಚಿಕೊಂಡಿದ್ದಾರೆ.

 

ಸ್ಯಾಂಡಲ್ ವುಡ್ , ಟಾಲಿವುಡ್ , ಕಾಲಿವುಡ್ ಚಿತ್ರಗಳಲ್ಲಿ ಅಭಿನಯ ಮಾಡಿರುವ ಸುಂದರಿ ರಕುಲ್ ಪ್ರೀತ್ ಸಿಂಗ್ ತಮ್ಮ ಅಮೋಘ ನಟನೆಯ ಮೂಲಕ ಸಿನಿರಸಿಕರ ಮನಸೂ ಗೆದ್ದಿದ್ದಾರೆ. ರಾಕುಲ್ ಪ್ರೀತ್ ತಮ್ಮ ಚಿತ್ರರಂಗದ ಪಯಣ ಆರಂಭಿಸಿದ್ದು ಜಗ್ಗೇಶ್ ಪುತ್ರ ಗುರು ಅವರ ‘ಗಿಲ್ಲಿ’ ಚಲನಚಿತ್ರದ ಮೂಲಕ ಎಂಬುದು ವಿಶೇಷ. ಈಗ ರಾಕುಲ್ ಬಾಲಿವುಡ್ ಚಿತ್ರರಂಗದಲ್ಲೂ ಕೂಡ ಬಹು ಬೇಡಿಕೆಯ ನಟಿ ಆಗಿದ್ದಾರೆ.ಕೆಲವು ದಿನಗಳ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರು ನಗರಕ್ಕೆ ಆಗಮಿಸಿದ್ದ ರಕುಲ್ ತಮಗೆ ಬೆಂಗಳೂರಿನೊಂದಿಗೆ ಇರುವ ನಂಟನ್ನು ವಿವರಿಸಿದರು. ಹಲವಾರು ಬಾರಿ ಬೆಂಗಳೂರಿಗೆ ಆಗಮಿಸಿದ್ದ ರಕುಲ್ ತಮ್ಮ ಬ್ಯುಸಿ ಕೆಲಸಗಳಿಂದ ಬೆಂಗಳೂರಲ್ಲಿ ಹೆಚ್ಚು ಸಮಯ ಕಳೆಯಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಪ್ರತಿ ಬಾರಿ ಬೆಂಗಳೂರಿನ ಭೇಟಿಯಲ್ಲಿ ತಮ್ಮ ಹಳೆಯ ನೆನಪನ್ನು ಮೆಲಕು ಹಾಕುತ್ತಾರೆ ರಕುಲ್ .

 

 

 

ರಕುಲ್ ಗಿಲ್ಲಿ ಸಿನಿಮಾದ ಮೂಲಕ ಕನ್ನಡವನ್ನು ಕಲಿತಿದ್ದಾರೆ. ಅವರ ತಮ್ಮ ಜನಿಸಿದ್ದು ಬೆಂಗಳೂರಿನಲ್ಲಿ. ಒಂದು ವರ್ಷ ಕಾಲ ರಕುಲ್ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರಕುಲ್ ತಂದೆ ಸೇನೆಯಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಎಂ.ಜಿ. ರೋಡ್‌‌, ಬ್ರಿಗೇಡ್ ರೋಡ್ , ಕಿಡ್ಸ್ ಕೆಂಪ್ ಸ್ಕೂಲ್ ಗೆ ಇನ್ನೊಮ್ಮೆ ಭೇಟಿ ನೀಡುವ ಆಸೆ ಇವರಿಗೆ ಇದೆ ಅಂತೆ ಎಂದು ತಿಳಿಸಿದರು,ಮುದ್ದು ಮುಖದ ಬೆಡಗಿ ರಕುಲ್ ಪ್ರೀತ್ ಸಿಂಗ್ ಸದ್ಯ ಸೌತ್ ಸಿನಿಮಾರಂಗದ ಸ್ಟಾರ್ ನಟಿ. ಟಾಲಿವುಡ್ ನಲ್ಲಿ ಬಹುಪಾಲು ಎಲ್ಲ ನಟರ ಜೊತೆಗೆ ಅಭಿನಯ ಮಾಡಿರುವ ಖ್ಯಾತಿ ಈ ನಟಿಗೆ ಇದೆ.

ಈಗ ಇವರ ಬಗ್ಗೆ ಇರೋ ಹೊಸ ಸುದ್ದಿ ಏನು ಅಂದ್ರೆ ರಾಕುಲ್ ಎನ್‌ಟಿಆರ್‌ ಬಯೋಪಿಕ್‌ನಲ್ಲಿ ದಿವಂಗತ ನಟಿ ಶ್ರೀದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಕುಲ್‌ ಪ್ರೀತ್‌ ಸಿಂಗ್‌ರಿಗೆ 1 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ. ಎರಡು ಭಾಗಗಳಿರುವ ಈ ಸಿನಿಮಾದಲ್ಲಿ ಅವರದ್ದು ಕೇವಲ 20 ನಿಮಿಷಗಳ ಪಾತ್ರ. ಇದಕ್ಕಾಗಿ ಅವರು ಇಷ್ಟೊಂದು ಭಾರಿ ಮೊತ್ತ ಪಡೆದುಕೊಂಡಿದ್ದು ದೊಡ್ಡ ಸುದ್ದಿಯಾಗಿದೆ. ಈ ಸಿನಿಮಾದ ಎರಡನೇ ಭಾಗದಲ್ಲಿ ರಾಕುಲ್‌ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ಅವರು ನಟ ಬಾಲಕೃಷ್ಣ ಜೊತೆ ಮಳೆ ಹಾಡಿಗೆ ಡಾನ್ಸ್‌ ಮಾಡುವ ದೃಶ್ಯವಿದೆ. ಇತ್ತೀಚೆಗೆಷ್ಟೇ ರಾಕುಲ್‌, ಈ ಬಯೋಪಿಕ್‌ನಲ್ಲಿ ತಮ್ಮ ಪಾತ್ರದ ಫಸ್ಟ್‌ ಲುಕ್‌ ಅನ್ನು ಇನ್‌ಸ್ಟ್ರಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದರು. ಶ್ರೀದೇವಿಯವರ ಪಾತ್ರ ಮಾಡಲು ನನಗೆ ತುಂಬಾ ಹೆಮ್ಮೆಯೆನಿಸುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top