fbpx
ಮನೋರಂಜನೆ

ಅಭಿಮಾನಿಗಳಿಗೆ ನಿರಾಸೆ- ಈ ಭಾರಿಯ ಬಿಗ್‍ಬಾಸ್ ಶೋನಲ್ಲಿ ಈ ಭಾಗ ಇರೋದಿಲ್ಲ.

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ ಕಾರ್ಯಕ್ರಮದ ಮತ್ತೊಂದು ಸೀಸನ್ನನ್ನು ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬಿಗ್ ಬಾಸ್ ಮತ್ತೆ ಶುರುವಾಗುತ್ತೆ ಎಂಬ ಸುದ್ದಿ ಹೊರಬಿದ್ದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ 6ನೇ ಸೀಸನ್ ಅವತ್ತು ಸ್ಟಾರ್ಟ್ ಆಗುತ್ತಂತೆ, ಇವತ್ತು ಸ್ಟಾರ್ಟ್ ಆಗುತ್ತಂತೆ ಎಂಬ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಇದೀಗ ವಾಹಿನಿಯವರೇ ಬಿಗ್ ಬಾಸ್ ಸ್ಟಾರ್ಟಿಂಗ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ.

ಬಹು ನಿರೀಕ್ಷೆಯ ಬಿಗ್ ಬಾಸ್ 6ನೇ ಆವೃತ್ತಿ ಅಕ್ಟೋಬರ್ 21ರಂದು ಆರಂಭವಾಗಲಿದೆ. ಕಳೆದ ಐದು ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಮತ್ತೊಮ್ಮೆ ಬಿಗ್ ಬಾಸ್ ಆಗಲು ರೆಡಿಯಾಗಿದ್ದಾರೆ.. ಈ ಸೀಸನ್ನಿನ ಪ್ರೊಮೊಗಳು ಅದಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಟಿಸಿದೆ.

ಕಿಚನ್ ಟೈಮ್ ಇರೋದಿಲ್ಲ:
ಕಳೆದ ವರ್ಷದ ಬಿಗ್ ಬಾಸ್ ನ ಹೈಲೈಟ್ ಗಳಲ್ಲಿ ಪ್ರತಿ ಭಾನುವಾರ ಸುದೀಪ್ ನಡೆಸಿಕೊಡುತ್ತಿದ್ದ ‘ಕಿಚನ್ ಟೈಮ್’ ಕಾರ್ಯಕ್ರಮವು ಕೂಡ ಒಂದು. ಅತಿಥಿಗಳಿಗೆ ತಮ್ಮ ಕೈಯಾರೆ ಅಡುಗೆ ಮಾಡುತ್ತಾ, ಅವರೊಟ್ಟಿಗೆ ಹರಟೆ ಹೊಡೆಯುತ್ತ ವೀಕ್ಷಕರನ್ನು ರಂಜಿಸಿದ್ದರು. ಆದರೆ ಈ ಬಾರಿಯ ಬಿಗ್ ಬಾಸ್ ಶೋನಲ್ಲಿ ಈ ಕಿಚನ್ ಟೈಮ್ ಭಾಗ ಇರೋದಿಲ್ಲವಂತೆ. ಹಾಗಂತ ಸ್ವತಃ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಅವರೇ ಹೇಳಿದ್ದಾರೆ.

ಇನ್ನು ಈ ಬಾರಿ ಹೊಸ ರೀತಿಯ ಸಂಚಿಕೆಯೊಂದನ್ನು ವಾರಾಂತ್ಯದಲ್ಲಿ ಪರಿಚಯಿಸುವ ಪ್ಲಾನ್ ನಲ್ಲಿದ್ದಾರೆ ನಿರ್ದೇಶಕ ಪರಮೇಶ್ವರ ಗುಂಡ್ಕಲ್.. ಅದು ಯಾವ ರೀತಿ ಇರುತ್ತೆ ಎಂಬುದು ಮಾತ್ರ ಕಾರ್ಯಕ್ರಮ ಪ್ರಾರಂಭವಾದ ನಂತರವಷ್ಟೇ ತಿಳಿಯಬೇಕಿದೆ.

ಇಂಥಾ ಬಿಗ್ ಬಾಸ್ ಮನೆಗೆ ಈ ಭಾರಿ ಅವರು ಹೋಗ್ತಾರಂತೆ, ಇವರು ಹೋಗ್ತಾರಂತೆ ಎಂಬಂತ ರೂಮರುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ಹರಿದಾಡುತ್ತಿದ್ದಾವೆ. ಆದರೆ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿರುವ ಸ್ಪರ್ಧಿಗಳ ಪಟ್ಟಿ ಗೊತ್ತಾಗಿದ್ದು ಆ EXCLUSIVE ಡೀಟೈಲ್ಸ್ ಇಲ್ಲಿದೆ. ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top