ಆರೋಗ್ಯ

ಹಲ್ಲು ಜುಮ್ ಜುಮ್ ಅನ್ನುತ್ತಿದೆಯೇ ಹಾಗಾದರೆ ಈ ಸಲಹೆಗಳನ್ನು ಪಾಲಿಸಿ.

ಕೆಲವೊಮ್ಮೆತಣ್ಣನೆಯ, ಬಿಸಿ, ಸಿಹಿ ಅಥವಾ ಹುಳಿ ಆಹಾರಗಳು ಬಾಯಿಯಲ್ಲಿ ತೀಕ್ಷ್ಣವಾದ, ಹಠಾತ್ ನೋವನ್ನು ಉಂಟುಮಾಡಬಹುದು, ಮತ್ತು ಬಾಯಿಗೆ ತಂಪಾದ ನೀರನ್ನು ಅಥವಾ ಐಸ್‌ಕ್ಯಾಂಡಿ ಅನ್ನು ತಿನ್ನುವಾಗ ಅತಿಯಾದ ನೋವು ಉಂಟಾಗುವ ಈ ಸಮಸ್ಯೆಗೆ ಹಲ್ಲಿನ ಸೂಕ್ಷ್ಮತೆ ಎನ್ನುವರು. ಹಲ್ಲು ಜುಂ, ಜುಂ ಎನಿಸುವ ಸಮಸ್ಯೆ ಈಗ ಹಲವರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಯಾಗಿದೆ.ಈ ಸಮಸ್ಯೆಯನ್ನು ಕೆಲವು ಸಲಹೆಗಳನ್ನು ಅನುಸರಿಸಿದರೆ ಗುಣಪಡಿಸಿಕೊಳ್ಳಬಹುದು ಅವು ಯಾವುವೆಂದು ಕೆಳಗೆ ಓದಿ ತಿಳಿದು ಕೊಳ್ಳಿ.

 

 

 

ವಿಶೇಷ ಟೂತ್ ಪೇಸ್ಟ್:ನೀವು ಹಲ್ಲಿನ ಸೂಕ್ಷ್ಮತೆಯಿಂದ ಬಳಲುತ್ತಿದ್ದರೆ, ನಿಮ್ಮ ಹಲ್ಲುಗಳನ್ನು ಉಜ್ಜುವುದು ಕಷ್ಟವಾಗಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲ್ಲಿನ ಸೂಕ್ಷ್ಮತೆ ಸಮಸ್ಯೆಯ ನಿವಾರಣೆಗೆಂದೇ ಲಭ್ಯವಿರುವ ವಿಶೇಷ ಟೂತ್ ಪೇಸ್ಟ್ ಗಳನ್ನು ಬಳಸಿ ಪರಿಣಾಮಕಾರಿ ಪರಿಹಾರವನ್ನು ನೀವು ಕಾಣಬಹುದು.

ಸಾಸಿವೆ ಎಣ್ಣೆ ಮತ್ತು ಉಪ್ಪು :ಸಾಸಿವೆ ಎಣ್ಣೆ ಮತ್ತು ಉಪ್ಪನ್ನು ಸಮ ಪ್ರಮಾಣದಲ್ಲಿತೆಗೆದುಕೊಂಡು ಮಿಕ್ಸ್ ಮಾಡಿ ಹಲ್ಲು ಜುಮ್ ಎನ್ನುವ ಭಾಗಕ್ಕೆ ನಿಧಾನವಾಗಿ ಲೇಪಿಸಿ  ನಂತರ ತಣ್ಣೇರಿನಲ್ಲಿ ಬಾಯಿ ಮುಕಲಿಸುವುದರಿಂದ  ಹಲ್ಲು ಜುಮ್ ಎನ್ನುವುದು ಕಡಿಮೆಯಾಗುತ್ತದೆ.

ಉಪ್ಪಿನ ನೀರು :ಸ್ವಲ್ಪ ತಣ್ಣೀರಿಗೆ ಉಪ್ಪನ್ನು ಹಾಕಿ ಬಾಯಿಯನ್ನು ಮುಕ್ಕಿಳಿಸುವುದರಿಂದ ಹಲ್ಲಿನ ಸೂಕ್ಷ್ಮತೆಯು ಕಡಿಮೆಯಾಗುತ್ತದೆ.ದಿನಕ್ಕೆ ಎರಡರಿಂದ ಮೂರುಭಾರಿ ಈ ರೀತಿ ಮಾಡಿ.

ಲವಂಗದ ಎಣ್ಣೆ :ಹಲ್ಲು ಜುಮ್ ಎನ್ನುವ ಜಾಗಕ್ಕೆ ಮೂರ್ನಾಲ್ಕು ಹನಿಗಳಷ್ಟು ಲವಂಗದ ಎಣ್ಣೆಯನ್ನು ನಿಧಾನವಾಗಿ ಹಚ್ಚಿ ಅರ್ಧ ಗಂಟೆಯ ನಂತರ ತಣ್ಣೇರಿನಲ್ಲಿ ಬಾಯಿ ಮುಕಲಿಸುವುದರಿಂದ ಹಲ್ಲಿನ ಸೂಕ್ಷ್ಮತೆಗೆ ವಿದಾಯ ಹೇಳಬಹುದು.

ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಹಲ್ಲುಗಳನ್ನು ಉಜ್ಜಿಕ್ಕೊಳ್ಳಿ: ಪ್ರತಿ ಬಾರಿ ಉಜ್ಜಲೂ ಮೃದುವಾದ ಬ್ರಶ್ ಬಳಸಿ. ಹಲ್ಲುಗಳಿಗೆ ನೀಡುವ ಒತ್ತಡ ಅತಿ ಕಡಿಮೆ ಇರಲಿ. ಒತ್ತಡ ಹೆಚ್ಚಾದಷ್ಟೂ ಹಲ್ಲುಗಳೂ, ಹಲ್ಲುಗಳಿಗಿಂತ ಹೆಚ್ಚಾಗಿ ಒಸಡುಗಳು ಸವೆಯುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top