ಭವಿಷ್ಯ

14 ಅಕ್ಟೋಬರ್: ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ೧೪ ಅಕ್ಟೋಬರ್ ೨೦೧೮
ಸೂರ್ಯೋದಯ : ೦೬:೩೬
ಸೂರ್ಯಾಸ್ತ : ೧೮:೧೧
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಶ್ವಯುಜ

ಪಕ್ಷ : ಶುಕ್ಲ ಪಕ್ಷ
ತಿಥಿ : ಷಷ್ಠೀ – ಪೂರ್ಣ ರಾತ್ರಿ ವರೆಗೆ
ನಕ್ಷತ್ರ : ಜ್ಯೆಷ್ಟ್ಯ – ೧೩:೧೫ ವರೆಗೆ
ಯೋಗ : ಸೌಭಾಗ್ಯ – ೦೭:೦೨ ವರೆಗೆ
ಸೂರ್ಯ ರಾಶಿ : ಕನ್ಯಾ

ಅಭಿಜಿತ್ ಮುಹುರ್ತ:೧೨:೦೧ – ೧೨:೪೭
ರಾಹು ಕಾಲ:೧೬:೪೪ – ೧೮:೧೧
ಗುಳಿಕ ಕಾಲ:೧೫:೧೭ – ೧೬:೪೪
ಯಮಗಂಡ:೧೨:೨೪ – ೧೩:೫೧

ನಿಮ್ಮ ಗಮನಕ್ಕೆ ಬಾರದೆ ಕೆಲವು ಘಟನೆಗಳು ನಿಮ್ಮ ಮನೆಯಲ್ಲಿ ಜರುಗುತ್ತಿರುವುದು ನಿಮಗೆ ಬೇಸರವನ್ನುಂಟು ಮಾಡುವುದು. ಈ ಬಗ್ಗೆ ಆನಂತರ ವಿಷಯ ತಿಳಿದು ನಿಮಗೆ ಸಮಾಧಾನವಾಗುವುದು.

ನೀವು ಪರೋಪಕಾರಿಗಳು. ನಿಮ್ಮ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ನಿಮ್ಮಿಂದ ಹಲವರು ಸಹಾಯ ಕೇಳಿ ಬರುವರು. ಅವರಿಗೆ ಸಹಾಯ ಮಾಡುವುದರಿಂದ ನಿಮ್ಮ ಕೀರ್ತಿ ವರ್ಚಸ್ಸು ಹೆಚ್ಚುವುದು.

ಆರಂಭಿಸಿದ ಕೆಲಸ ಕಾರ್ಯಗಳಿಗೆ ಸ್ನೇಹಿತರ ಬೆಂಬಲ ದೊರೆಯುವುದು. ಅಂತೆಯೇ ಅಧಿಕ ಖರ್ಚಿಗೆ ದಾರಿಯಾಗುವುದು. ಸಾವಧಾನದಿಂದ ನಿರ್ಧಾರ ತೆಗೆದುಕೊಳ್ಳಿರಿ. ಕೆಲಸ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಕುಲದೇವತಾ ಪ್ರಾರ್ಥನೆ ಮಾಡಿರಿ.

ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಸ್ನೇಹಿತರ ಬೆಂಬಲ ದೊರೆಯುವುದು. ಅಧಿಕ ಖರ್ಚು ಎದುರಾಗುವ ಸಂಭವ. ಸಾವಧಾನದಿಂದ ನಿರ್ಧಾರ ತೆಗೆದುಕೊಳ್ಳಿರಿ. ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಆಂಜನೇಯ ಸ್ತೋತ್ರ ಪಠಿಸಿರಿ.

 

ನೀವಂದುಕೊಂಡಿದ್ದನ್ನು ಸಾಧಿಸುವಿರಿ. ಕುಟುಂಬದೊಂದಿಗೆ ದೇಗುಲ ದರ್ಶನ ಮಾಡುವಿರಿ. ಮಗನ ಪ್ರಗತಿಯ ಕಂಡು ಹರ್ಷಚಿತ್ತರಾಗುವಿರಿ. ಆದರೆ ಹಣಕಾಸಿನ ವಿಷಯದಲ್ಲಿ ಜಾಗ್ರತೆ. ಕೊಟ್ಟ ಹಣ ವಾಪಸ್ಸು ಬರುವ ಸಾಧ್ಯತೆಯಿದೆ.

 

ಒಳ್ಳೆಯ ಹೆಸರು ಪಡೆಯುತ್ತೀರಿ. ಪ್ರಯಾಣ ಹಿತಕರವಾಗಿರುತ್ತದೆ. ಹೊಸ ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಹತ್ತು ಹಲವು ಬಾರಿ ಚಿಂತಿಸಿರಿ. ಆರ್ಥಿಕ ಸದೃಢತೆಯು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು.

 

ನಿಮ್ಮ ಬಗ್ಗೆ ಇಲ್ಲಸಲ್ಲದ ಅಪವಾದಗಳನ್ನು ಜನರು ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಜಾಂಶ ಗೊತ್ತಾದ ಮೇಲೆ ಅವರೇ ಸುಮ್ಮನಾಗುವರು. ದೈವ ಕೃಪೆಯಿಂದ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

 

ಸಂಗಾತಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಕೇಳುವುದರಿಂದ ಮಹತ್ತರ ವಿಷಯವನ್ನು ಅರಿಯುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ. ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದು ಒಳ್ಳೆಯದು.

 

ಹಣಕಾಸಿನ ವಿಷಯದಲ್ಲಿ ಜಾಗ್ರತೆ. ಸ್ನೇಹಿತರಿಗೆ ಸಹಾಯ ಮಾಡುವ ನೆಪದಲ್ಲಿ ನಿಮ್ಮ ಜೇಬಿಗೆ ಕತ್ತರಿ ಬೀಳುವುದು. ಮನೆದೇವರನ್ನು ನೆನೆಯಿರಿ. ಧನಾತ್ಮಕ ಚಿಂತನೆಗಳಿಂದ ಒಳಿತನ್ನು ಕಾಣುವಿರಿ.

ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಮಾತೃ ಸಂಬಂಧದವರಿಂದ ದುಃಖ ಮನೋವ್ಯಾಕುಲತೆಯ ಚಿಂತೆ. ಜಿಗುಪ್ಸೆ ಕಾಡುವುದು. ವೃಥಾ ಅಲೆದಾಟದಿಂದ ಹಣವು ನೀರಿನಂತೆ ಖರ್ಚು ಮಾಡುವಿರಿ.

 

 

ಬಾಳಸಂಗಾತಿ ಮತ್ತು ಮಕ್ಕಳು ನಿಮಗೆ ಸಂತಸವನ್ನುಂಟು ಮಾಡುವರು. ಮಾತುಗಾರಿಕೆಯ ಪ್ರಭಾವದಿಂದ ಸಮಾಜದಲ್ಲಿ ಮಾನ ಸನ್ಮಾನಗಳು ಎದುರಾಗುವುದು. ಕೈಗೊಂಡ ಕೆಲಸಗಳಲ್ಲಿ ಪ್ರಗತಿಯುಂಟಾಗುವುದು.

ಅನಿರೀಕ್ಷಿತವಾಗಿ ಭಾರಿ ಮೊತ್ತವೊಂದು ಕೈಸೇರುವ ಸಂದರ್ಭ. ನೂತನ ವಸ್ತುಗಳನ್ನು ಖರೀದಿಸುವಿರಿ. ನಿಮ್ಮ ಸ್ನೇಹಿತರ ಜೊತೆ ಪಾರ್ಟಿಯಲ್ಲಿ ಭಾಗವಹಿಸುವಿರಿ ಮತ್ತು ಈ ದಿನವನ್ನು ಸಂತೋಷದಿಂದ ಕಳೆಯುವಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top