ಆರೋಗ್ಯ

ವಯಸ್ಸಾದ ಮೇಲೆ ಕಾಣಿಸಿಕೊಳ್ಳುವ ಮರೆವಿನ ಕಾಯಿಲೆಯಿಂದ ದೂರವಿರಬೇಕಂದ್ರೆ ಹೀಗ್ ಮಾಡಿ.

ವಯಸ್ಸಾದ ಮೇಲೆ ಮರೆವಿನ ಕಾಯಿಲೆ ಬರುವುದು ಈಗ ಸಾಮಾನ್ಯವಾಗಿದೆ. ಇದಕ್ಕೆ ‘ಅಲ್ಜೈಮರ್’ಎಂಬ ಹೆಸರಿಂದ ಹೇಳುತ್ತಾರೆ.ವಯಸ್ಸು ಕಳೆದಂತೆ ಸುಮಾರು 60ರ ನಂತರ ಕಾಣಿಸಿಕೊಳ್ಳುವ ಈ ಕಾಯಿಲೆ ಮೊದಲು ಮರೆಗುಳಿತನ ತಂದು ನಂತರ ಮೆದುಳಿನ ಕೆಲಸವನ್ನು ದುರ್ಬಲಗೊಳಿಸುತ್ತಾ ಸಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಕೆಲವು ನೈಸರ್ಗಿಕ ಸಲಹೆಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ ಮಾಡಲಾಗಿದೆ ನೋಡಿ.

ಆಪಲ್ ಜೂಸ್ :

 

 

 

ಆಪಲ್ ಜೂಸ್ ಕುಡಿಯುದರಿಂದ ಈ ಸಮಸ್ಯೆ ಇರುವವರಲ್ಲಿ ನೆನಪಿನ ಶಕ್ತಿಯನ್ನು ಹೆಚ್ಚಿಸುವ  ಅಸೆಟೈಕೋಲಿನ್ ಉತ್ಪಾದನೆ ಹೆಚ್ಚುತ್ತದೆ. ಮರೆವಿನ ಸಮಸ್ಯೆ ನಿವಾರಣೆಯಾಗುತ್ತದೆ.

ಕಾಫಿ ಕುಡಿಯಿರಿ:ಅಧ್ಯಯನದ ಪ್ರಕಾರ ದಿನಕ್ಕೆ ಎರಡು ಭಾರಿ ಕಾಫೀ ಕುಡಿಯುದರಿಂದ ಮೆದುಳಿಗೆ ಒತ್ತಡ ಕಡಿಮೆಯಾಗುತ್ತದೆ ಮತ್ತು ಮರೆವಿನ ಕಾಯಿಲೆ ಬಾರದಂತೆ ತಡೆಗಟ್ಟುತ್ತದೆ.

ಗ್ರೀನ್ ಟೀ :ಗ್ರೀನ್ ಟೀ ಅನ್ನು ಹೆಚ್ಚಾಗಿ ಸೇವಿಸುತ್ತಾ ಬಂದರೆ ಮೆದುಳು ಚುರುಕಾಗುತ್ತದೆ  ಮರೆವಿನ ಮತ್ತು ಸಮಸ್ಯೆಯಿಂದ ದೂರವಿರಬಹುದು.

ಧ್ಯಾನ ಮಾಡಿ:ಧ್ಯಾನ ಮಾಡುವುದರಿಂದ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ.ಧ್ಯಾನದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡರೆ ಇಳಿವಯಸ್ಸಿನಲ್ಲಿ ಬರುವ ಮರೆವಿನ ಕಾಯಿಲೆಯಿಂದ ದೂರವಿರಬಹುದು.

ತೆಂಗಿನ ಎಣ್ಣೆ:ಈಗಾಗಲೇ ನಿಮಗೆ ಮರೆವಿನ ಕಾಯಿಲೆ ಇದ್ದರೆ ನಿಮ್ಮ ಆಹಾರದಲ್ಲಿ ತೆಂಗಿನ ಎಣ್ಣೆಯನ್ನು ಉಪಯೋಗಿಸಿ.ಇತರ ಎಣ್ಣೆಗಳಿಗಿಂತ ತೆಂಗಿನ ಎಣ್ಣೆಯಲ್ಲಿ ಮೆದುಳಿನ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಜಾಸ್ತಿ ಇರುತ್ತದೆ.

ಮಾನಸಿಕ ಚಟುವಟಿಕೆ:ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ಶ್ರಮದಾಯಕ ಮಾನಸಿಕ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಿ.ಉದಾ: ಚೆಸ್ ಆಡುವುದು,ಪದಬಂಧ ಬಿಡಿಸುವುದು, ಸುಡುಕು.

ವಿಟಮಿನ್ ‘ಡಿ’ ಆಹಾರಗಳನ್ನು ಹೆಚ್ಚಾಗಿ ಸೇವಿಸಿ:ಬಳಸುವ ಆಹಾರದಲ್ಲಿ ವಿಟಮಿನ್ ಡಿ ಯ ಆಹಾರವನ್ನು ಹೆಚ್ಚಾಗಿ ಸೇವಿಸಿ. ಮೀನು,ಮೊಟ್ಟೆ,ಹಾಲು,ಮಾಂಸ ಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಮರೆವಿನ ಕಾಯಿಲೆಯಿಂದ ದೂರವಿರಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top