ಸಮಾಚಾರ

ಉಪ್ಪಿಯ ಸೂಪರ್ ಸಿನಿಮಾದಂತೆ ಕಳ್ಳರಿಗೆ ಸಂಬಳ ಕೊಟ್ಟು ಕಳ್ಳತನ ಮಾಡಿಸುತ್ತಿದ್ದ ಮಹಾ ಖದೀಮ

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಮೂಡಿಬಂದಿದ್ದ ಸೂಪರ್ ಸಿನಿಮಾದಲ್ಲಿ ಹೇಗೆ ಗೂಂಡಾಗಳನ್ನು ಸೇರಿಕೊಂಡು ಕಾರ್ಪೊರೇಟ್ ರೌಡಿಸಂ ಮಾಡಲಾಗುತ್ತೋ ಅದೇ ಮಾದರಿಯಲ್ಲಿ ನಿರುದ್ಯೋಗಿಗಳನ್ನು ನೇಮಿಸಿಕೊಂಡು ಕಳ್ಳತನ ಮಾಡಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ರಾಜಸ್ತಾನದ ಜೈಪುರದಲ್ಲಿ ಈ ಘಟನೆ ನಡೆದಿದ್ದು ಖದೀಮರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ..

21 ವರ್ಷದ ಆಶಿಷ್ ಎಂಬಾತ ಪ್ರತಿ ದಿನ ಮೋಟಾರ್ ಸೈಕಲ್, ಚಿನ್ನದ ಸರ ಹಾಗೂ ಮೊಬೈಲ್ ಫೋನ್ ಯಾವುದಾದರೊಂದು ವಸ್ತುವನ್ನು ಕಳ್ಳತನ ಮಾಡುವ ಕೆಲಸಕ್ಕೆಂದು ಆರು ಮಂದಿ ನಿರುದ್ಯೋಗಿ ಯುವಕರನ್ನು ನೇಮಿಸಿಕೊಂಡಿದ್ದನು. ಅಲ್ಲದೇ ಅವರಿಗೆ ಮಾಸಿಕ ರೂ. 15,000 ವೇತನವನ್ನು ಗೊತ್ತು ಮಾಡಿದ್ದನು. ಪ್ರತಿ ದಿನ ಒಂದು ಕಳ್ಳತನ ಮಾಡಲೇಬೇಕು ಇಲ್ಲವದಲ್ಲಿ ಆ ದಿನದ ವೇತನ ಕಡಿತ ಮಾಡಲಾಗುವುದು ಎಂಬ ಷರತ್ತನ್ನೂವಿಧಿಸಿದ್ದ.

ಈ ಚೋರ ಜಾಲದ ರೂವಾರಿ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಎಳೆದುಕೊಂಡು ಬಂದಿದ್ದು ಅವರಿಂದ ಬರೋಬ್ಬರಿ 33 ಮೊಬೈಲ್ ಫೋನುಗಳು, ಒಂದು ಲ್ಯಾಪ್‍ಟಾಪ್, ಎರಡು ಚಿನ್ನದಸರ ಹಾಗೂ ನಾಲ್ಕು ಮೋಟಾರ್ ಸೈಕಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಳ್ಳರ ತಂಡವು ಕದ್ದ ಕದ್ದ ಮಾಲುಗಳನ್ನು ಜಾಲದ ರೂವಾರಿ ಆಶಿಷ್ ಎಂಬಾತನಿಗೆ ಅವರು ನೀಡುತ್ತಿದ್ದರು, ಆತ ಅವುಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದನು.

ಜೈಪುರ ನಗರದ ನಿರ್ದಿಷ್ಟ ಏರಿಯಾಗಳಲ್ಲಿ ಕೆಲವೊಂದಷ್ಟು ದಿನಗಳಿಂದ ಮೊಬೈಲ್, ಬೈಕ್ ಮತ್ತು ಸರಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಇದರಿಂದ ಎಚ್ಚೆತ್ತುಕೊಂಡಿದ್ದ ವಿಶೇಷ ಪೊಲೀಸ್ ತಂಡ ಸೀಸಿಟಿವಿಗಳನ್ನು ಪರಿಶೀಲಿಸಿ ಕಳ್ಳರ ಗ್ಯಾಂಗ್ ಅನ್ನು ಎಡೆಮುರಿಕಟ್ಟಿ ಎಳೆದು ತಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top