ಮನೋರಂಜನೆ

ಯಜಮಾನ vs ಕುರುಕ್ಷೇತ್ರ – ‘ಡಿ ಬಾಸ್’ 50ನೇ ಚಿತ್ರ ಯಾವುದಾಗಲಿದೆ ಗೊತ್ತಾ?

ಒಂದು ಚಿತ್ರದ ಒಪ್ಪಿಕೊಂಡ ಮೇಲೆ ಅದರಲ್ಲಿನ ಭಾಗದ ಎಲ್ಲಾ ಕೆಲಸ ಕಾರ್ಯಗಳನ್ನು ಸಂಪೂರ್ಣವಾಗಿ ಮುಗಿಸಿಕೊಂಡ ಮೇಲೆಯೇ ಮತ್ತೊಂದು ಚಿತ್ರದತ್ತ ಗಮನ ಹರಿಸೋದು ದರ್ಶನ್ ಅವರು ಪರಿಪಾಲಿಸಿಕೊಂಡು ಬಂದಿರುವ ನಿಯಮ. ಅದರಂತೆ ಕುರುಕ್ಷೇತ್ರ ಸಿನಿಮಾ ಡಬ್ಬಿಂಗ್ ಪೂರ್ಣಗೊಳಿಸಿಕೊಂಡು ಕೊಂಚವೂ ಬಿಡುವು ಕೊಡದೆ ತಮ್ಮ ಯಜಮಾನ ಚಿತ್ರಕ್ಕಾಗಿ ಕೆಲಸವನ್ನು ಕೂಡ ಮುಗಿಸಿಕೊಟ್ಟಿದ್ದಾರೆ.

 

 

ಈಗಾಗಲೇ ಯಜಮಾನ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು 2 ಹಾಡುಗಳು ಮಾತ್ರ ಬಾಕಿ ಉಳಿದುಕೊಂಡಿವೆಯಂತೆ.. ಈ ಹಂತದಲ್ಲಿ ಯಜಮಾನ ಪ್ರೊಮೋಷನ್’ಗೆ ರೆಡಿಮಾಡಿಕೊಳ್ಳುವಂತೆ ನಿರ್ಮಾಪಕರಿಗೆ ದರ್ಶನ್ ಹೇಳಿದ್ದಾರಂತೆ. ಅಂದುಕೊಂಡಂತೆ ಆಗಿದ್ದರೆ ಕುರುಕ್ಷೇತ್ರ ಇಷ್ಟೊತ್ತಿಗೆಲ್ಲಾ ತೆರೆ ಕಾಣಬೇಕಿತ್ತು ಅನೇಕ ಕಾರಣಗಳಿಂದ ಬಹುತಾರಾಗಣದ ‘ಕುರುಕ್ಷೇತ್ರ’ ಸಿನಿಮಾ ತಡವಾಗುತ್ತಿದೆ. ಇದನ್ನು ಮನಗಂಡಿರುವ ದರ್ಶನ್ ಅವರು ಕುರುಕ್ಷೇತ್ರಕ್ಕಿಂತ ಮೊದಲೇ ಯಜಮಾನ ಚಿತ್ರವನ್ನು ರಿಲೀಸ್ ಮಾಡಲು ರೆಡಿ ಮಾಡಿಕೊಳ್ಳಿ ಎಂದು ನಿರ್ಮಾಪಕರಿಗೆ ಹೇಳಿದ್ದರಂತೆ..

ಅತ್ತ ಕುರುಕ್ಷೇತ್ರ ಚಿತ್ರಕ್ಕೆ ಮುಂಬೈ, ಹೈದರಾಬಾದ್, ಚೆನ್ನೈ ಬೆಂಗಳೂರಿನಲ್ಲಿ ಗ್ರಾಫಿಕ್ಸ್ ಕೆಲಸಗಳು ನಡೆಯುತ್ತಿವೆಯಂತೆ.. ನವೆಂಬರ್ 05ರ ವೇಳೆಗೆಲ್ಲಾ ಅದು ಕಂಪ್ಲೀಟ್ ಆಗಲಿದೆಯಂತೆ. ಇನ್ನು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಮುಗಿದಿರುವ ಕಾರಣ ಮುನಿರತ್ನ ಅವರು ನವೆಂಬರ್ 10 ರಂದು 2ಡಿ ವರ್ಷನ್ ನಲ್ಲಿ ಕುರುಕ್ಷೇತ್ರ ನೋಡಲಿದ್ದಾರಂತೆ. ನೋಡಿದಾಗ ಅವರಿಗೆ ತೃಪ್ತಿಯಾದ್ರೆ, ತಕ್ಷಣವೇ ರಿಲೀಸ್ ಡೇಟ್ ಫಿಕ್ಸ್ ಮಾಡ್ತಾರಂತೆ. ಇಲ್ಲವಾದಲ್ಲಿ, ಮತ್ತಷ್ಟು ಹೆಚ್ಚುವರಿ ಕೆಲಸಕ್ಕೆ ಸೂಚಿಸುತ್ತಾರಂತೆ. ” ನನ್ನ ಸಿನಿಮಾ ಬಗ್ಗೆ ಮೊದಲು ನಾನು ತೃಪ್ತಿಯಾಗಬೇಕು, ನಂತರ ಅಭಿಮಾನಿಗಳ ಮುಂದೆ ಸಿನಿಮಾ ತರಬೇಕು., ನನಗೆ ಇಷ್ಟವಾಗಿಲ್ಲ ಅಂದ್ರೆ, ಇನ್ನು ಫ್ಯಾನ್ಸ್ ಒಪ್ಪಿಕೊಳ್ತಾರಾ” ಎನ್ನುತ್ತಾರೆ ನಿರ್ಮಾಪಕ ಮುನಿರತ್ನ.

ಒಟ್ಟಿನಲ್ಲಿ ದರ್ಶನ್ ಅಭಿನಯದ ಎರಡು ಸಿನಿಮಾಗಳು ಬಹುತೇಕ ಮುಕ್ತಾಯಗೊಂಡು ಬಿಡುಗಡೆಗೆ ರೆಡಿಯಾಗಿದ್ದು ದರ್ಶನ್ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ಆದರೆ ದರ್ಶನ್ ಅವರ ಐವತ್ತನೇ ಸಿನಿಮಾ ಯಾವುದಾಗುತ್ತೆ ಎಂಬುದೇ ಅಭಿಮಾನಿಗಳಲ್ಲಿರುವ ಸದ್ಯದ ಮಿಲಿಯನ್ ಡಾಲರ್ ಪ್ರಷ್ಟೇ. ಅಭಿಮಾನಿಗಳ ಗೊಂದಲಕ್ಕೆ ಕಾಲವೇ ಉತ್ತರ ನೀಡಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top