ಆರೋಗ್ಯ

ವಾರ್ಟ್ಜ್ ಅಥವಾ ಪುಲ್ಲ ಪುರೆ ಸಮಸ್ಯೆಗೆ ಧಿಡೀರ್ ಪರಿಹಾರ ಬೇಕಂದ್ರೆ , ಸುಲಭವಾಗಿ ಸಿಗೋ ಈ 5 ಪದಾರ್ಥಗಳು ಸಾಕು.

ಚರ್ಮದ ಮೇಲ್ಪದರದಲ್ಲಿ ಅನಾವಶ್ಯಕವಾಗಿ ಬೆಳೆಯುವ ಚರ್ಮದ ಬೆಳವಣಿಗೆಯನ್ನು ಪುಲ್ಲ ಪುರೆ ಎಂದು ಕರೆಯುತ್ತೇವೆ ,ಕಂಕುಳ ಕೆಳಗೆ ಕಣ್ಣಿನ ಕೆಳಭಾಗದಲ್ಲಿ ಎದೆಯ ಮೇಲೆ ಹಾಗೂ ಹೆಚ್ಚಾಗಿ ಕತ್ತಿನ ಮೇಲೆ ಇವು ಕಾಣಿಸಿಕೊಳ್ಳುತ್ತವೆ.ಈ ಪುಲ್ಲ ಪುರೆ ಸಮಸ್ಯೆಗೆ ನೈಸರ್ಗಿಕ ಮನೆ ಮದ್ದುಗಳು ಹೀಗಿವೆ .

ಶಂಖ ಭಸ್ಮ ಮತ್ತು ಸರ್ಜ ಕ್ಷಾರ:

 

 

 

ಶಂಖ ಭಸ್ಮ ಮತ್ತು ಸರ್ಜ ಕ್ಷಾರ ಎಂದರೆ ಇಂಗ್ಲಿಷ್ ನಲ್ಲಿ ಸೋಡಿಯಂ ಬೈಕಾರ್ಬೊನೇಟ್ ಇಂಪುರ ಈ ಎರಡು ವಸ್ತುಗಳು ಗ್ರಂಥಿಗೆ ಅಂಗಡಿಗಳಲ್ಲಿ ಹೆಚ್ಚಾಗಿ ದೊರೆಯುತ್ತವೆ , ಶಂಖ ಭಸ್ಮ ಈಗಾಗಲೇ ಪುಡಿಯ ರೂಪದಲ್ಲಿ ದೊರೆಯುತ್ತದೆ ಮತ್ತು ಸರ್ಜ ಕ್ಷಾರ ಗಟ್ಟಿಯಾಗಿ ಇರುತ್ತದೆ , ಇವೆರಡನ್ನೂ ನುಣ್ಣಗೆ ಪುಡಿ ಮಾಡಿ , ಎರಡನ್ನು ಹತ್ತು ಹತ್ತು ಗ್ರಾಂ ಬೆರೆಸಿ  ಪುಲ್ಲ ಪುರೆ ಇರುವ ಭಾಗಕ್ಕೆ ಹಚ್ಚಿ ದಿನಕ್ಕೆ ಎರಡ್ ಬಾರಿ ಈ ಚಿಕಿತ್ಸೆ ನಡೆಸಿದರೆ ಪುಲ್ಲ ಪುರೆ ಹೆಸರಿಲ್ಲದಂತೆ ಮಾಯವಾಗುತ್ತದೆ .

ಆಪಲ್ ಸೈಡರ್ ವಿನೆಗರ್:ಆಪಲ್ ಸೈಡರ್ ವಿನೆಗರ್ ಅನ್ನು ಹತ್ತಿಯಲ್ಲಿ ಅದ್ದಿ ನಂತ್ರ ಪುಲ್ಲ ಪುರೆ ಇರುವ ಜಾಗಕ್ಕೆ ಹಚ್ಚಿ ೪-೫ ಗಂಟೆ ಹಾಗೆ ಬಿಟ್ಟು ಬಿಡಿ ಆನಂತರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ , ದಿನಕ್ಕೆ ಒಂದು ಬಾರಿ ಈ ಕ್ರಿಯೆ ಮುಂದುವರಿಸಿದರೆ ಪುಲ್ಲ ಪುರೆ ಮಾಯವಾಗುತ್ತದೆ .

ಸುಣ್ಣ ಮತ್ತು ಹರಳೆಣ್ಣೆ :ಸ್ವಲ್ಪ ಸುಣ್ಣ ಹಾಗು ಹರಳೆಣ್ಣೆಯನ್ನು ಮಿಶ್ರಣ ಮಾಡಿ ಪುಲ್ಲ ಪುರೆ ಇರುವ ಜಾಗಕ್ಕೆ ಹಚ್ಚಿ ಹತ್ತು ನಿಮಿಷಗಳ ಕಾಲ ಹಾಗೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ .ಎರಡು ಮೂರು ದಿನಗಳಲ್ಲಿ ಈ ಚಿಕಿತ್ಸೆಯಿಂದ ಪುಲ್ಲ ಪುರೆ ಮಾಯವಾಗುತ್ತದೆ .

ಬೆಳ್ಳುಳ್ಳಿ :ಬೆಳ್ಳುಳ್ಳಿಯನ್ನು ಚೆನ್ನಾಗಿ ಜಗ್ಗಿ ವಾರ್ಟ್ಸ್ ಇರುವ ಸ್ಥಳಕ್ಕೆ ಹಚ್ಚಬೇಕು ನಂತರ ಒಂದು ಗಂಟೆ ಹಾಗೆಯೇ ಬಿಡಬೇಕು ಈ ರೀತಿ ಮೂರ್ನಾಲ್ಕು ಬಾರಿ ಮಾಡಿದರೆ ಪುಲ್ಲಾಪುರೆ ಮಾಯಾವಾಗುತ್ತದೆ.ಪ್ರತಿಬಾರಿ ಚೆನ್ನಾಗಿ ಚರ್ಮವನ್ನು ತೊಳೆದುಕೊಳ್ಳಬೇಕು .

ಬಾಳೆ ಚಿಪ್ಪೇ ಮತ್ತು ಬೇಕಿಂಗ್ ಸೋಡಾ :ಬಾಳೆ ಚಿಪ್ಪೆಯನ್ನು ಸಣ್ಣಕ್ಕೆ ಕತ್ತರಿಸಿ , ಅಡುಗೆ ಸೋಡದಲ್ಲಿ ಅದ್ದಿ ಪುಲ್ಲ ಪುರೆ ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡುವುದು ಹೀಗೆ ಎರಡು ಮೂರು ದಿನ ಮುಂದುವರಿಸಿದರೆ ಪುಲ್ಲ ಪುರೆ ಮಾಯವಾಗುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top