ತಿಂಡಿ ತೀರ್ಥ

ರುಚಿ ರುಚಿಯಾದ ಬಿಸಿಯಾದ ಚಕ್ ಅಂತ ಮಾಡಿ ಮಶ್ರೂಮ್ ಪಲಾವ್

ರುಚಿ ರುಚಿಯಾದ ಬಿಸಿಯಾದ ಚಕ್ ಅಂತ ಮಾಡಿ ಮಶ್ರೂಮ್ ಪಲಾವ್

ಮಾಡುವ ವಿಧಾನ ಮಶ್ರೂಮ್ ಪಲಾವ್ ಗೆ ಬೇಕಾಗುವ ಪದಾರ್ಥ: 1 ಕಪ್ ಅಕ್ಕಿ,1 ಕಪ್ ಅಣಬೆ, 4 ಈರುಳ್ಳಿ (ಸಾಂಬಾರು ಈರುಳ್ಳಿ),2 ಲವಂಗ, 1/2 ಇಂಚಿನ ಚೆಕ್ಕೆ, 2 ಏಲಕ್ಕಿ,1 ಪಲಾವ್ ಎಲೆ,1 ಚಮಚ ಗರಂ ಮಸಾಲ, 1 ಚಮಚ ಜೀರಿಗೆ ಪುಡಿ,ಸ್ವಲ್ಪ ಎಣ್ಣೆ,ರುಚಿಗೆ ತಕ್ಕಷ್ಟು ಉಪ್ಪು.

 

 

ಮಶ್ರೂಮ್ ಪಲಾವ್ ತಯಾರಿಸುವ ವಿಧಾನ: ಅಕ್ಕಿಯನ್ನು ಶುದ್ಧಗೊಳಿಸಿ ತೊಳೆಯಬೇಕು. ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಬೇಕು. ಸಾಂಬಾರು ಈರುಳ್ಳಿ ಸಣ್ಣಗೆ ಕತ್ತರಿಸಿ ಹಾಗೂ ಅದನ್ನು ಒಂದೆಡೆ ಇಟ್ಟುಕೊಳ್ಳಬೇಕು.ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ, ಎಣ್ಣೆ ಸರಿ ಬಿಸಿ ಆದ ನಂತರ ಅದರಲ್ಲಿ ಈರುಳ್ಳಿ, ಲವಂಗ, ಚೆಕ್ಕೆ, ಏಲಕ್ಕಿ ಮತ್ತು ಪಲಾವ್ ಎಲೆ, ಹಾಗೂ ಸಣ್ಣದಾಗಿ ತುಂಡು ಮಾಡಿರುವ ಮಶ್ರೂಮ್ ಅನ್ನು ಹಾಕಿ.ತದನಂತರ ಜೀರಿಗೆ ಪುಡಿ ಮತ್ತು ಗರಂ ಮಸಾಲಾ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ.ನಂತರ ಅಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ಎರಡು ಕಪ್ ಬಿಸಿ ನೀರನ್ನು ಅಕ್ಕಿ ಮಿಶ್ರಣಕ್ಕೆ ಹಾಕಿ ಈರುಳ್ಳಿಯ ಹಸಿರು ಭಾಗ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು. ಮುಚ್ಚುಳ ಮುಚ್ಚಿ ಬೇಯಿಸಿದರೆ ಮಶ್ರೂಮ್ ಪಲಾವ್ ತಿನ್ನಲು ರೆಡಿಯಾಗಿರುತ್ತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top