ಉಪಯುಕ್ತ ಮಾಹಿತಿ

ರಂಗೋಲಿ ಹಾಕೋದ್ರ ಹಿಂದಿರೋ ವೈಜ್ಞಾನಿಕಕಾರಣ ಗೊತ್ತಾದ್ರೆ ಇನ್ಮೇಲೆ ದಿನಾ ರಂಗೋಲಿ ಹಾಕ್ತಿರಾ .

ರಂಗೋಲಿಯನ್ನು ಹಾಕುವುದರ ವೈಜ್ಞಾನಿಕ  ಕಾರಣ ಗೊತ್ತದ್ರೆ ನೀವು ಸಹ ನಿಮ್ಮ ಮನೆಯಮುಂದೆ ದಿನಾಲು ತಪ್ಪದೆ ರಂಗೋಲಿ ಹಾಕುತ್ತಿರಿ.

ಹೀಗೆ ವೈವಿಧ್ಯ ಸಂಪ್ರದಾಯ, ಕಲೆಯೊಂದಿಗೆ ಅತ್ಯಂತ ಸಿರಿವಂತೆ ನಮ್ಮ ಭಾರತ ಮಾತೆ. ಸಾಮಾನ್ಯವಾಗಿ ಸಂಸ್ಕೃತಿ ಜೀವಂತವಾಗಿರುವುದೇ ಗ್ರಾಮೀಣ ಪ್ರದೇಶದಲ್ಲಾಗಿರುವುದರಿಂದ ರಂಗೋಲಿಯ ನಿಜವಾದ ರಂಗು, ಅದಕ್ಕಿರುವ ನೈಜ ಗೌರವವನ್ನು ಅರಿಯಬೇಕೆಂದರೆ ನಾವು ಹಳ್ಳಿಗಳಿಗೆ ಹೋಗಿ ನೋಡಲೇ ಬೇಕು. ರಂಗೋಲಿಯ ವೈವಿಧ್ಯ ಮತ್ತು ಅದಕ್ಕಿರುವ ಗೌರವದ ನಿಜವಾದ ಅನುಭವವಾಗುತ್ತದೆ.

 

 

 

ರಂಗೋಲಿಗೆ ಸುಮಾರು 5000 ವರ್ಷಗಳ ಇತಿಹಾಸವಿದೆ. ಸಿಂಧೂ ನಾಗರಿಕತೆಯ ಸಂದರ್ಭದಲ್ಲಿಯೂ ಅಲ್ಲಿಯ ಜನರಿಗೆ ರಂಗೋಲಿ ಕಲೆ ಗೊತ್ತಿತ್ತು. ಅವರು ಸಹ ಮುಂಜಾನೆ ಮನೆಸ್ವಚ್ಛಗೊಳಿಸಿ ಮನೆಯ ಮುಂದೆ ರಂಗೋಲಿ ಹಾಕುವ ಸಂಸ್ಕೃತಿ ರೂಢಿಯಲ್ಲಿತ್ತು. ಆ ಕಾಲದಿಂದಲೇ ರಂಗೋಲಿ ಕಲೆ ಭಾರತೀಯ ಸಂಸ್ಕೃತಿಯೊಂದಿಗೆ ತಳುಕು ಹಾಕಿಕೊಂಡಿದೆ.ಮನೆಯ ಮುಂದೆ, ಹೊಸ್ತಿಲ ಮೇಲೆ, ದೇವರ ಮುಂದೆ, ತುಳಸಿ ಕಟ್ಟೆಯ ಮುಂದೆ ರಂಗೋಲಿ ಇದ್ದರೆ ಅದು ಶುಭದ ಸಂಕೇತ. ರಂಗೋಲಿ ಇಲ್ಲದ ಮನೆ ಅಂದರೆ ಅದು ಅಶುಭ ಎಂಬ ನಂಬಿಕೆ. ಹಿಂದೆಲ್ಲಾ ರಂಗೋಲಿಯಿಲ್ಲದ ಮನೆಗೆ ಸಾಧು ಸಂತರು ಭೇಟಿ ನೀಡುತ್ತಿರಲಿಲ್ಲವಂತೆ. ಹಿಂದೂ ಸಂಸ್ಕೃತಿಯಲ್ಲಿ ರಂಗೋಲಿಗೆ ಅಷ್ಟೊಂದು ಪ್ರಾಮುಖ್ಯತೆ ಇದೆ.

 

 

 

ರಂಗೊಲಿ ಸೂಕ್ಷ್ಮವಾಗಿ ಸೂಚ್ಯಂಕ ಬೆರಳು ಮತ್ತು ಹೆಬ್ಬೆರಳುಗಳನ್ನು ಒತ್ತುವ ಮೂಲಕ ಅನ್ವಯಿಸುತ್ತದೆ. ಯೋಗದ ಪ್ರಕಾರ ಈ ಮುದ್ರೆಯು ಆತ್ಮವನ್ನು ಶುದ್ಧೀಕರಿಸುವಲ್ಲಿ ಸಹ ಅಗತ್ಯವಾಗಿದೆ.ಪುರಾತನ ಕಾಲದಲ್ಲಿ, ಮಹಿಳೆಯರು ತಮ್ಮ ಬಾಗಿಲುಗಳ ಹೊರಗೆ ರಂಗೋಲಿಗಳನ್ನು ಸೆಳೆಯಲು ಬಳಸುತ್ತಿದ್ದರು, ದುಷ್ಟರು, ದುಷ್ಟಶಕ್ತಿಗಳು ಮತ್ತು ನಕಾರಾತ್ಮಕತೆಗಳನ್ನು ಮನೆಯೊಳಗೆ ಪ್ರವೇಶಿಸುವುದನ್ನು ತಡೆಗಟ್ಟುವುದಕ್ಕೆ ಇದು ಕಾರಣವಾಗಿದೆ.ಹಿಂದೂ ಧರ್ಮದಲ್ಲಿ ಪ್ರತಿಯೊಂದು ಕ್ರಿಯಾವಿಧಿಯೂ ಅದರ ಹಿಂದಿನ ಒಂದು ತಾರ್ಕಿಕ ಕಾರಣವನ್ನು ಹೊಂದಿದೆ, ಮತ್ತು ರಂಗೋಲಿ ಗುರುತುಗಳ ಸುಂದರವಾದ ಕಲೆಯಾಗಿದೆ.ಇತ್ತೀಚಿನ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ, ದೇವಸ್ಥಾನಗಳಲ್ಲಿ ಮಾತ್ರ ನಾವು ಈ ರಂಗೋಲಿಗಳನ್ನು ನೋಡುತ್ತಿದ್ದೇವೆ. ಆಧುನಿಕತೆಯ ಭರಾಟೆಯಲ್ಲಿ ರಂಗೋಲಿ ಸಂಸ್ಕೃತಿ ನಿಧಾನವಾಗಿ ಅಳಿವಿನತ್ತ ವಾಲುತ್ತಿದೆ ಎಂಬುದನ್ನು ಮಾತ್ರ ಸಿದ್ಧ ಸತ್ಯ. ಭಾರತದ ಅತ್ಯಂತ ವಿಶಿಷ್ಠ ಸಂಸ್ಕೃತಿಯಾದ ಈ ರಂಗೋಲಿ ಕಲೆ ಉಳಿವಿಗೆ ಪ್ರಯತ್ನಿಸಲೇಬೇಕಾದ ಜವಾಬ್ದಾರಿ ಎಲ್ಲ ಸಂಸ್ಕೃತಿವಂತ ಭಾರತೀಯರ ಮೇಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top