ಆರೋಗ್ಯ

ಸಣ್ಣ ಹುರುಳಿ ಬೀಜ ಕ್ಯಾನ್ಸರ್ ವಿರುದ್ಧ ಮಾರಕ ಅಸ್ತ್ರದ ತರ ಹೋರಾಡುತ್ತೆ ತಿಳ್ಕೊಳ್ಳಿ .

ಅಡುಗೆಗೆ ಬಳಸುವ ಹುರುಳಿ ಬೀಜದಿಂದ ಈ ಅದ್ಭುತ ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಬನ್ನಿ ಆ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

 

 

 

ಕೊಲೆಸ್ಟ್ರಾಲ್  ಕಡಿಮೆಗೊಳಿಸುತ್ತದೆ:ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಅಷ್ಟೇ ಅಲ್ಲದೆ ಹುರುಳಿ ಬೀಜಗಳಲ್ಲಿ ಫೈಬರ್ ಅಂಶವು ಸಹ ಬಹಳ ಹೆಚ್ಚಾಗಿದೆ ಇದು ಜೀರ್ಣಕ್ರಿಯೆಯನ್ನು ಕಾಪಾಡಿಕೊಂಡು ಬರುತ್ತದೆಹುರುಳಿ ಬೀಜಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆಗೊಳಿಸುತ್ತದೆ ಈ ಕೆಟ್ಟ ಕೊಲೆಸ್ಟರಾಲ್ ಅಂಶಗಳು ರಕ್ತನಾಳಗಳಲ್ಲಿ ಶೇಖರಣೆ ಆಗುವುದನ್ನು ತಡೆಯುತ್ತದೆ .

ಹೃದಯದ ಸಮಸ್ಯೆಯನ್ನು ತಡೆಗಟ್ಟುತ್ತದೆ:ಸುಧಾ ನಾಳಗಳಲ್ಲಿ ಶೇಖರಣೆಯಾಗುವ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಗೊಳಿಸುವುದರಿಂದ ಹೃದಯದ ಸಮಸ್ಯೆಗಳಾದ ಹಾರ್ಟ್ ಅಟ್ಯಾಕ್ ಹಾಗೂ ಹೃದಯ ನಾಳಗಳಲ್ಲಿ ಕೊಬ್ಬಿನ ಶೇಖರಣೆ ಸಮಸ್ಯೆಗಳು ಇರುವುದಿಲ್ಲ .

ಸಕ್ಕರೆ ಕಾಯಿಲೆ ಹತ್ತಿರವೂ ಸುಳಿಯುವುದಿಲ್ಲ:ಹುರುಳಿ ಬೀಜಗಳು ಇನ್ಸುಲಿನ್ ಉತ್ಪಾದನೆಯ ಮೇಲೆ ಹಿಡಿತವನ್ನು ಸಾಧಿಸುವುದರಿಂದ ಸಕ್ಕರೆ ಕಾಯಿಲೆ ಬರದಂತೆ ದೂರ ಓಡುವುದು

ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ:ಟೈಪ್ ೨ ಮಧುಮೇಹ ಬರದಂತೆ ತಡೆಗಟ್ಟುತ್ತದೆ ಅಷ್ಟೇ ಅಲ್ಲದೆ ಹುರುಳಿ ಬೀಜಗಳಲ್ಲಿನ ಫೈಬರ್ ಅಂಶವು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ .

ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ:ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಸಮಸ್ಯೆಯಿಂದ ಪರಿಣಾಮಕಾರಿಯಾದ ನಿವೃತ್ತಿಯನ್ನು ಹೊಂದಬೇಕೆಂದರೆ ಹುರುಳಿ ಬೀಜಗಳನ್ನು ನಿಮ್ಮ ಆಹಾರದಲ್ಲಿ ಸೇವಿಸಬೇಕು , ಹುರುಳಿ ಬೀಜಗಳಲ್ಲಿ ಹೆಚ್ಚಾಗಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ಕ್ಯಾನ್ಸರ್ ಕಾರುವ ಅಣುಗಳ ವಿರುದ್ಧ ಹೋರಾಡುತ್ತದೆ .

ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕಾರಿ:ಹುರುಳಿ ಬೀಜಗಳಲ್ಲಿ ಹೆಚ್ಚಾಗಿರುವ ಆಲ್ಫಾ ಅಮೈನೊ ಅಂಶವು ದೇಹದ ತೂಕ ನಿಯಂತ್ರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಹಾಗೂ ನಾರಿನಾಂಶವು ಸಹ ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top