fbpx
ಹೆಚ್ಚಿನ

ಸ್ತ್ರೀ ರಾಜ್ಯಕ್ಕೆ ಬಂದ ಅರ್ಜುನನು ವಿಷ ಕನ್ಯೆಯಾಗಿದ್ದ ಪ್ರಮೀಳೆಯನ್ನು ವಿವಾಹವಾದ ಕಥೆ,ತಪ್ಪದೆ ತಿಳ್ಕೊಳ್ಳಿ

ಕುದುರೆ ಮುಂದೆ ಸಾಗುತ್ತಾ, ಪ್ರವೀಳೆಯ ರಾಜ್ಯದಲ್ಲಿ ಯಜ್ಞಾಶ್ವವು ಬಂದು ಸೇರಿಕೊಂಡಿತ್ತು. ಸ್ತ್ರೀ ರಾಜ್ಯದಲ್ಲಿ ಕೇವಲ ಮಹಿಳೆಯರೇ ತುಂಬಿದ್ದರು. ಸುಂದರಿಯರು ಅನೇಕ ರೀತಿಯ ಸಂಗೀತ-ನೃತ್ಯ ಚಿತ್ರ ಕಲೆಗಳಲ್ಲಿ ಪರಿಣಿತರಾಗಿದ್ದರು. ಅವರ ರಾಣಿ ಸಹ ಸುಂದರಿಯಾಗಿದ್ದು ಯುವತಿಯು ದೀರಳು,ಪರಾಕ್ರಮಿಯೂ ಆಗಿದ್ದಳು. ಅನೇಕ ರೀತಿಯ ಶಸ್ತ್ರಾಸ್ತ್ರ ಪ್ರಯೋಗದಲ್ಲಿ ಸಹ ಪರಿಣಿತಳಾಗಿದ್ದಳು. ಯಾರಾದರೂ ಪುರುಷರು ಈ ರಾಜ್ಯವನ್ನು ಪ್ರವೇಶಿಸಿದರೆ ಮಹಿಳೆಯರು ಅವರನ್ನು ಮರುಳು ಮಾಡಿ ಹೇಗಾದರೂ ಮಾಡಿ ಮದುವೆಗೆ ಒಪ್ಪಿಸುವರು. ಒಂದು ತಿಂಗಳವರೆಗೆ ಅವರೊಂದಿಗೆ ಸರಸವಾಡುತ್ತಾ ಕಾಲ ಕಳೆದು ನಂತರ ಅವನ ಸಂಗಡ ಅಗ್ನಿಪ್ರವೇಶ ಮಾಡುವಳು. ಚಮತ್ಕಾರವೆಂದರೆ ಇಬ್ಬರೂ ಸಹ ಮತ್ತೆ ಹೆಣ್ಣಾಗಿ ಹುಟ್ಟುವರು.

ಇಷ್ಟೇ ಅಲ್ಲದೆ ಈ ರಾಜ್ಯದಲ್ಲಿ ಇರುವ ಸ್ತ್ರೀಯರು ವಿಷಕನ್ಯೆಯರಾಗಿರುವುದು. ಆದುದರಿಂದ ಅರ್ಜುನನು ಸೈನ್ಯದವರಿಗೆಲ್ಲರಿಗೂ ಡಂಗುರ ಹೊಡೆಸಿ ವಿಷಯವನ್ನು ತಿಳಿಸಿದನು. ಎಲ್ಲರೂ ಜಾಗೃತರಾಗಿದ್ದು ಬುದ್ಧಿವಂತಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದನು. ತನ್ನ ಸೀಮೆಯಲ್ಲಿ ಪಾಂಡವರ ಅಶ್ವವು ಬಂದಿದೆಯೆಂದು ತಿಳಿದು ಅದನ್ನು ಕಟ್ಟಿಹಾಕಿ ಲಾಯದಲ್ಲಿ ಸೇರಿಸಿದಳು. ಆನಂತರ ರತ್ನ ಖಚಿತವಾದ ಸಿಂಹಾಸನದಿಂದ ಇಳಿದು ರಣ ವಸ್ತ್ರಗಳನ್ನು ಧರಿಸಿ ಸೇನೆಯೊಂದಿಗೆ ಯುದ್ಧಕ್ಕೆ ಬಂದಳು. ಲಕ್ಷ ಲಕ್ಷ ಸಂಖ್ಯೆಯಲ್ಲಿ ಧೀರೆಯರಾದ ಮಹಿಳೆಯರು ಮಾವುತರು ಸಾರಥಿಯರು ಮತ್ತು ಕಾಲಾಳುಗಳು ಬಂದು ಸೇರಿದ್ದರು.
ರಣಾಂಗಣದಲ್ಲಿ ಸುಂದರಿಯರ ಹೂವು , ಸುಗಂಧಮಯ ವಾತಾವರಣ, ರೂಪುಗೊಂಡಿತು. ಹೆಣ್ಣಾನೆಗಳನ್ನೇರಿದ ಹೆಣ್ಣುಗಳು ಯುದ್ಧಕ್ಕೆ ಸಿದ್ಧರಾಗಿದ್ದನ್ನು ನೋಡಿ ಪಾಂಡವರ ಸೈನ್ಯಕ್ಕೆ ಆಶ್ಚರ್ಯವಾಯಿತು. ಯಾವುದೇ ಅಂತರವಿಲ್ಲದೆ ಯುದ್ಧವು ಆರಂಭವಾಗಿತ್ತು.ಪ್ರಮೀಳೆಯು ಅರ್ಜುನನನ್ನು ಕಂಡು ಇಲ್ಲಿಯವರೆಗೆ ಗಂಡಸರೊಂದಿಗೆ ಯುದ್ಧ ಮಾಡಿರುವೆ. ಈಗ ಸ್ತ್ರೀಯೊಂದಿಗೆ ಯುದ್ಧ ಮಾಡಿ ನೋಡು ಎಂದಳು.

 

 

 

ಅರ್ಜುನನು ಹರನೊಂದಿಗೆ ಯುದ್ಧ ಮಾಡಿದವನಿಗೆ ಈಗ ನಾರಿಯೊಂದಿಗೆ ಸೆಣಸುವುದೇ ? ಎಂದುಕೊಂಡನು. ಪ್ರಮೀಳೆ ಅರ್ಜುನನಿಗೆ “ನೀನು ನನ್ನನ್ನು ಮದುವೆಯಾದರೆ ಕುದುರೆಯನ್ನು ಕೊಡುತ್ತೇನೆ” ಎಂದಳು. ಆದರೆ ಅರ್ಜುನನು ನಿರಾಕರಿಸಿ ಯುದ್ಧಕ್ಕೆ ಸಿದ್ಧನಾದನು. ನಿನಗೆ ಹೇಗಾದರೂ ಮರಣವೇ ಇಲ್ಲಿ ಬಾಣದಿಂದ ಅಥವಾ ಮನೆಯಲ್ಲಿ ನನ್ನೊಂದಿಗೆ ಸೇರಿದರೆ ಆಗಲು ಮರಣವೇ ಉಂಟಾಗುವುದು ಎಂದು ಹೇಳಿದಳು.
ಆ ಸಮಯದಲ್ಲಿ ಅಶರೀರವಾಣಿಯೊಂದು ಆಕಾಶವಾಣಿಯಾಗಿ ಈ ಪ್ರಮೀಳೆಯೊಡನೆ ಯುದ್ಧ ಮಾಡಿದರೆ ಗೆಲುವು ಸಾಧ್ಯವಿಲ್ಲ ಎಂದು ತಿಳಿಸಿತು. ಅಲ್ಲದೇ ಇವಳೊಂದಿಗೆ ಯುದ್ಧವನ್ನು ಬಿಟ್ಟು ಮದುವೆ ಮಾಡಿಕೊಂಡು ಹೋದರೆ ಒಳ್ಳೆಯದಾಗುವುದು ಎಂದು ಅಶರೀರವಾಣಿ ತಿಳಿಸಿದಾಗ ಅದರಂತೆ ಪ್ರಮೀಳೆಯನ್ನು ಅರ್ಜುನನು ಮದುವೆಯಾದನು. ಆದರೆ ಅರ್ಜುನನು ನಾನೀಗ ಯಾಗದೀಕ್ಷೆಯಲ್ಲಿ ಇದ್ದೇನೆ. ನಾರಿಯೊಂದಿಗೆ ಸಮಾಗಮ ಮಾಡುವಂತಿಲ್ಲ ಎಂದು ಹೇಳಿದಾಗ,ನಾರಿ ಸೈನ್ಯವೂ ಹಸ್ತಿನಾವತಿಯ ಕಡೆಗೆ ಸಾಗಿತ್ತು. ಧರ್ಮರಾಯನಿಗೆ ಸೈನ್ಯದ ಬಲವನ್ನು ತೋರಿಸಿದಳು ಪ್ರಮೀಳೆ. ಅವರೆಲ್ಲರೂ ಶ್ರೀಕೃಷ್ಣನ ದರ್ಶನ ಪಡೆದಾಗ, ಅವರಲ್ಲಿದ್ದ ವಿಷವು ಮಾಯವಾಯಿತು. ಮತ್ತೆ ಬಂದು ಅರ್ಜುನನೊಂದಿಗೆ ಮದುವೆ ಮಾಡಿಕೊಂಡಳು. ಯಜ್ಞದ ಕುದುರೆಯು ಮುಂದೆ ಸಾಗಿತ್ತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top