fbpx
ಹೆಚ್ಚಿನ

ನಕ್ಸಲ್ ದಾಳಿ,ಸಾಯುವ ಮುನ್ನ ಲೈವ್ ವರದಿ ಬಿತ್ತರಿಸಿದ ಪತ್ರಕರ್ತ,ನೋಡಿದ್ರೆ ಕಣ್ಣಂಚಲಿ ನೀರು ಬರೋದು ಖಂಡಿತಾ.

ಛತ್ತೀಸಗಢ ರಾಜ್ಯದ ದಂತೇವಾಡಾ ಜಿಲ್ಲೆಯ ಅರನಪುರ ಠಾಣಾ ವ್ಯಾಪ್ತಿಯ ನೀಲವಾಯ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಚುನಾವಣಾ ಕರ್ತವ್ಯ ನಿರತ ಪೊಲೀಸರ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆ ವೇಳೆ ಸ್ಥಳದಲ್ಲಿದ್ದ ಪತ್ರಕರ್ತರು ಸಹ ನಕ್ಸಲರ ಬಲೆಗೆ ಸಿಲುಕಿಕೊಂಡಿದ್ದರು.ಭಯಾನಕ ಘಟನೆಯನ್ನು ಕಣ್ಣಾರೆ ನೋಡಿದ ದೂರದರ್ಶನ ಸಿಬ್ಬಂದಿ ತಮಗಾದ ಅನುಭವವನ್ನು ಸಾಯುವ ಮುನ್ನ ಹಂಚಿಕೊಂಡಿದ್ದರು. ಈ ವೇಳೆ ಅವರು ತಮ್ಮ ತಾಯಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.

ಗುಂಪಿನಲ್ಲಿದ್ದ ದೂರದರ್ಶನ ವಾಹಿನಿ ಪತ್ರಕರ್ತ ಮೋರಧ್ವಜ್ ಎಂಬವರು ತಮ್ಮ ಮೊಬೈಲ್ ಮೂಲಕ ಘಟನೆಯ ಬಗ್ಗೆ ವರದಿ ಮಾಡಿ, ತಮ್ಮ ತಾಯಿಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ. ಇಲ್ಲಿಯ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು, ಪೊಲೀಸರನ್ನು ಮತ್ತು ನಮ್ಮನ್ನು ನಕ್ಸಲರು ಸುತ್ತುವರಿದಿದ್ದಾರೆ. ನಾನು ಬದುಕಿ ಬರುವ ಸಾಧ್ಯತೆಗಳಿಲ್ಲ. ಲವ್ ಯೂ ಅಮ್ಮಾ ಎಂದು ತಾಯಿಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ.
ಮಂಗಳವಾರ ಮುಂಜಾನೆ ಪೊಲೀಸ್ ಹಾಗೂ ನಕ್ಸಲರ ನಡುವಿನ ಗುಂಡಿನ ಚಕಮಕಿಯಲ್ಲಿ ದೂರದರ್ಶನ ಕ್ಯಾಮರಮನ್​ ಅಚ್ಯುತಾನಂದನ್​ ಮೃತಪಟ್ಟಿದ್ದರು. ಆದರೆ ಅವರು ದಾಳಿಯಲ್ಲಿ ಸಾಯುವ ಮುನ್ನ ತಮ್ಮ ತಾಯಿಯೊಂದಿಗೆ ಮಾತನಾಡಿದ ದೃಶ್ಯ ವೈರಲ್​ ಆಗಿದ್ದು, ಎಲ್ಲರ ಮನಕಲಕುತ್ತಿದೆ. 200 ರಿಂದ 250 ನಕ್ಸಲರು ಬರೋಬ್ಬರಿ 45 ನಿಮಿಷಗಳ ಕಾಲ ಸತತವಾಗಿ ಗುಂಡಿನ ಮಳೆಗರೆದಿದ್ದಾರೆ. ಈ ದಾಳಿಗೆ ಮೂವರು ಪ್ರಾಣ ತೆತ್ತರು. ಇಂದು ಮೊತ್ತಬ್ಬರ ಪ್ರಾಣ ಪಕ್ಷಿ ಹಾರಿದೆ. ಒಟ್ಟು ಈ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ.

ವಿಡಿಯೋದಲ್ಲಿ ಏನಿದೆ?

 

 

 

ಚುನಾವಣಾ ಕಾರ್ಯ ನಿಮಿತ್ತ ದಂತೇವಾಡ ಜಿಲ್ಲೆಗೆ ನಮ್ಮನ್ನು ನೇಮಿಸಲಾಗಿತ್ತು. ಸೈನಿಕರ ಜೊತೆ ನಾವು ಹೋಗುತ್ತಿದ್ದಾಗ ನಮ್ಮನ್ನು ನಕ್ಸಲರು ಸುತ್ತುವರಿದಿದ್ದಾರೆ. ಈ ದಾಳಿಯಲ್ಲಿ ಬದುಕುತ್ತೇನೆ ಎಂಬ ಭರವಸೆ ನನಗಿಲ್ಲ. ಅಮ್ಮಾ ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಸಾವನ್ನು ಎದುರು ನೋಡುತ್ತಿದ್ದರೂ, ಯಾಕೋ ನನಗೆ ಭಯ ಆಗುತ್ತಿಲ್ಲ. ನಮ್ಮ ಜೊತೆ ಆರೇಳು ಸೈನಿಕರಿದ್ದರೂ, ನಾಲ್ಕು ದಿಕ್ಕುಗಳಿಂದ ನಕ್ಸಲರು ನಮ್ಮನ್ನು ಸುತ್ತುವರಿದಿದ್ದಾರೆ. ಸ್ಥಳದ ಪರಿಸ್ಥಿತಿಯ ಬಗ್ಗೆ ವಿಶ್ಲೇಷಣೆ ಮಾಡಿರುವ ಮೋರಧ್ವಜ್ ವಿಡಿಯೋವನ್ನು ತಮ್ಮ ಸಿಬ್ಬಂದಿಗೆ ಕಳುಹಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪತ್ರಕರ್ತನ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ಸೂಚಿಸಿದ್ದಾರೆ.ಅಷ್ಟೇ ಅಲ್ಲ, ನನಗೆ ಗುಂಡೇಟು ಬಿದ್ದಿದೆ. ನಾನು ಈ ದಾಳಿಯಲ್ಲಿ ಸಾಯಲು ಬಹುದು. ನನಗೆ ನನ್ನ ತಾಯಿ ಅಂದ್ರೆ ಬಹಳ ಇಷ್ಟ. ಅಮ್ಮ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಈ ದಾಳಿಯಲ್ಲಿ ನಾನು ಬದುಕುಳಿಯದೇ ಇರಬಹುದು. ನೀನು ಧೈರ್ಯದಿಂದ ಇರು ಎಂದು ಮನಕಲುಕುವ ಸಂದೇಶವನ್ನು ತಮ್ಮ ತಾಯಿಗೆ ಕ್ಯಾಮರಾಮೆನ್​ ಅಚ್ಯುತಾನಂದನ ಸಂದೇಶ ರವಾನಿಸಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top