ಆರೋಗ್ಯ

ಮಗು ಹುಟ್ಟಿದ ನಂತರ ಮತ್ತೆ ದೇಹದ ಶೇಪ್ ಪಡೆದುಕೊಳ್ಳೋದು ಹೇಗೆ ?

ನಿಮ್ಮ ಗರ್ಭಾಶಯದೊಳಗೆ ಬೆಳೆಯುತ್ತಿರುವ ಮಗುವಿನ ಕಾರಣದಿಂದಾಗಿ, ನಿಮ್ಮ ಕಿಬ್ಬೊಟ್ಟೆಯ ಸುತ್ತಲಿನ ಚರ್ಮವು ಬಹಳಷ್ಟು ವಿಸ್ತರಿಸುತ್ತದೆ ಅದರ ಮೇಲೆ ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ನಿಮ್ಮ ಹೊಟ್ಟೆ, ಸೊಂಟ ಮತ್ತು ಮೇಲ್ಭಾಗದ ತೋಳುಗಳ ಸುತ್ತಲೂ ಕುಗ್ಗುತ್ತಿರುವ ಚರ್ಮಕ್ಕೆ ಕಾರಣವಾಗುತ್ತದೆ.

 

 

 

ಸಡಿಲವಾದ ಚರ್ಮವನ್ನು ಮತ್ತೆ ಶೇಪ್ ಗೆ ಬರುವಂತೆ ಮಾಡಲು ಸಮಯ ಮತ್ತು ತಾಳ್ಮೆ ತೆಗೆದುಕೊಳ್ಳುತ್ತದೆ. ನಿಮ್ಮ ವಂಶವಾಹಿ, ಮೂಳೆ ರಚನೆ ಮತ್ತು ನೀವು ಎಷ್ಟು ತೂಕವನ್ನು ಹೊಂದಿದ್ದೀರಾ ಎಂಬ ಅಂಶಗಳು ಎಷ್ಟು ವೇಗವಾಗಿ ನೀವು ಮರಳಿ ನಿಮ್ಮ ಶೇಪ್ ಗೆ ಬರುತ್ತೀರಾ ಎಂಬುದನ್ನು ನಿರ್ಧರಿಸುತ್ತದೆ.ಗರ್ಭಾವಸ್ಥೆಯ ನಂತರ ಸಡಿಲವಾದ ಚರ್ಮವನ್ನು ಪುನಃಸ್ಥಾಪಿಸಲು ಮತ್ತು ಪುನರ್ಯೌವನಗೊಳಿಸುವುದಕ್ಕಾಗಿ ಹಲವು ಸರಳ ಮತ್ತು ಪರಿಣಾಮಕಾರಿ ವಿಧಾನಗಳಿವೆ.

ತೂಕವನ್ನು ನಿಧಾನವಾಗಿ ಕಳೆದುಕೊಳ್ಳಿ:ತೂಕವನ್ನು ಕಳೆದುಕೊಳ್ಳುವುದು ನಿಮ್ಮ ದೇಹಕ್ಕೆ ನೀವು ಮಾಡಬಹುದಾದ ಅತ್ಯುತ್ತಮ ವಿಷಯಗಳಲ್ಲಿ ಒಂದಾಗಿದೆ ಆದರೆ ನಿಧಾನವಾಗಿ ತೂಕ ಕಳೆದುಕೊಳ್ಳ ಬೇಕು ಹೀಗೆ ಮಾಡಿದರೆ ದೇಹದ ಎಲಾಸ್ಟಿಸಿಟಿ ಕಾಪಾಡಿ ಚರ್ಮವನ್ನು ಕಾಪಾಡುತ್ತದೆ .ತುಂಬಾ ವೇಗವಾಗಿ ತೂಕವನ್ನು ಕಳೆದುಕೊಳ್ಳುವುದು ಕೊಬ್ಬು ಮತ್ತು ಸ್ನಾಯುಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ , ಸ್ನಾಯು ಸಡಿಲವಾದರೆ ಚರ್ಮದ ಸಮಸ್ಯೆ ಇನ್ನು ಹೆಚ್ಚಾಗುತ್ತದೆ

ವ್ಯಾಯಾಮ ಮಾಡಿ:ದಿನಕ್ಕೆ ಅರ್ಧ ಗಂಟೆ ಅಥವಾ ೨೦ ನಿಮಿಷ ವ್ಯಾಯಾಮ ಮಾಡಿ ಹೀಗೆ ಮಾಡಿದರೆ ದೇಹದ ಕೊಬ್ಬು ಕರಗುತ್ತದೆ , ಯೋಗ ಮಾಡಿದರೆ ಮಾನಸಿಕ ಸ್ಥಿತಿ ಉತ್ತಮ ಗೊಳ್ಳುತ್ತದೆ.

ಎಣ್ಣೆ ಮಸಾಜ್ ಮಾಡಿ:ನಿಮ್ಮ ಸಡಿಲ ಚರ್ಮದ ಮೇಲೆ ಬೆಚ್ಚಗಿನ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ಅಥವಾ ಹರಳೆಣ್ಣೆ ಬಳಸಿ ಮಸಾಜ್ ಮಾಡಿ .

ಲೋಳೆ ಸರ:ಆಲೋ ವೆರಾ ಹಚ್ಚಿ ೨೦ ನಿಮಿಷ ಹಾಗೆ ಬಿಟ್ಟು ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ .

ಗುಲಾಭಿ ಜಲ:ಮೂರು ಚಮಚ ಗುಲಾಭಿ ಜಲಕ್ಕೆ ಒಂದು ಚಮಚ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ , ನಂತರ ದೇಹದ ಎಲ್ಲ ಭಾಗಗಳಿಗೆ ಹಚ್ಚಿಕೊಳ್ಳಿ .

ನಾರಿನಿಂದ ಉಜ್ಜಿಕೊಳ್ಳಿ:ಹಾಗಾಗ ನಾರಿನಿಂದ ಉಜ್ಜಿಕೊಳ್ಳಿ ಇದು ಸಹ ದೇಹ ದಲ್ಲಿ ಹೆಚ್ಚಿನ ಕೊಬ್ಬು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಸ್ತನ ಪಾನ:ಹುಟ್ಟಿದ ಮಕ್ಕಳಿಗೆ ಸ್ತನ ಪಾನ ಮಾಡಿಸುವುದರಿಂದ ಸಹ ಮರಳಿ ದೇಹ ಶೇಪ್ ಪಡೆದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.

ಹೆಚ್ಚು ಪ್ರೋಟೀನ್ ಸೇವಿಸಿ:

 

 

 

ನಿಮ್ಮ ಚರ್ಮವನ್ನು ಬಿಗಿಗೊಳಿಸಲು, ಸ್ನಾಯು ನಿರ್ಮಿಸಲು ನೀವು ಗಮನ ಹರಿಸಬೇಕು. ಡಯಟ್ ಒಂದು ಪಾತ್ರವನ್ನು ವಹಿಸುತ್ತದೆ, ಮತ್ತು ಆರೋಗ್ಯಕರ ಪ್ರೋಟೀನ್ ತಿನ್ನುವುದು ಸ್ನಾಯುವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಪೋಷಕಾಂಶಯುಕ್ತ ಆಹಾರ:ನಿಮ್ಮ ಚರ್ಮವು ಪೋಷಕಾಂಶಗಳನ್ನು ಪಡೆದಾಗ ಮಾತ್ರ ಸ್ಥಿತಿಸ್ಥಾಪಕತ್ವ (ಎಲಾಸ್ಟಿಸಿಟಿ )ವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ನಿಮ್ಮ ಚರ್ಮವು ಮೃದುವಾಗಿ ಮತ್ತು ದೃಢವಾಗಿ ಉಳಿಯಬೇಕಾದರೇ ಆಂಟಿಆಕ್ಸಿಡೆಂಟ್ಗಳು, ವಿಟಮಿನ್ ಇ ಮತ್ತು ಎ, ಮತ್ತು ಒಮೆಗಾ -3 ಕೊಬ್ಬಿನಾಮ್ಲ ಹೆಚ್ಚಾಗಿ ಸೇವಿಸಿ.

ಹೆಚ್ಚು ನೀರು ಕುಡಿಯಿರಿ:ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದು ನಿಮ್ಮ ಹೊಟ್ಟೆ, ತೊಡೆ ಮತ್ತು ತೋಳುಗಳ ಸುತ್ತಲೂ ಸಡಿಲ ಚರ್ಮವನ್ನು ಬಿಗಿಗೊಳಿಸುವ ಮತ್ತೊಂದು ರಹಸ್ಯವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top