ಹೆಚ್ಚಿನ

ಮದ್ವೆ ದಿನ ಹತ್ರ ಬರ್ತಿದೆ ಅನ್ನೋ ಮದುಮಗಳು ಈ ಕ್ರಮಗಳನ್ನ ತಪ್ಪದೆ ಪಾಲಿಸಲೇಬೇಕು .

ಮದ್ವೆ ಟೈಮಲ್ಲಿ ಮದುಮಗಳು ಈ ಕ್ರಮಗಳನ್ನ ಅನುಸರಿಸಲೇಬೇಕು.

 

 

 

ಎಲ್ಲಾ ಹುಡ್ಗೀರು ತಾನು ಅಂದುಕೊಂಡಂತ ಹುಡುಗನ ಜೊತೆ ಮಾಡುವೆ ಆಗಬೇಕು ಎಂದು ಕನಸನ್ನು ಕಟ್ಕೊಂಡಿರ್ತಾರೆ.ಅವರ ಮದ್ವೆಯ ಟೈಮಲ್ಲಿ ಹುಡ್ಗೀರು ತಮ್ಮ ಆರೋಗ್ಯದ ಕಡೆ ನಿಗಾವಹಿಸುದಿಲ್ಲ ,ಹೀಗೆ ಮಾಡೋದು ತಪ್ಪು.ಹುಡ್ಗೀರು ಮದ್ವೆ ಮೊದ್ಲು ಅನುಸರಿಸಲೇ ಬೇಕಾದ ಕೆಲವು ಆರೋಗ್ಯ ಸಲಹೆಗಳು ಇಲ್ಲಿವೆ ಅವನ್ನು ಓದಿ ತಿಳ್ಕೊಳ್ಳಿ.

ತೂಕವನ್ನು ಇಳಿಸಿಕೊಳ್ಳಬೇಕು:ಹೆಚ್ಚು ತೂಕವಾಗೋದು ಹುಡ್ಗೀರ ಸೌಂದರ್ಯನ ಹಾಳು ಮಾಡೊದಲ್ದೆ ಬೇರೆ ಬೇರೆ ತರದ ರೋಗಗಳನ್ನುತರಿಸುತ್ತದೆ .ಅದಕ್ಕಾಗಿ ಮದುವೆಗೂ ಮುಂಚೆ ಹುಡ್ಗೀರು ಜಂಕ್ ಫುಡ್ ಹಾಳು ಮೂಳು ತಿನ್ನದೇ ಎಚ್ಚರಿಕೆ
ವಹಿಸ್ಕೊಬೇಕು.

ನಿಯಮಿತವಾಗಿ ಸಾಕಷ್ಟು ನೀರು ಕುಡಿಯಲು ಪ್ರಯತ್ನಿಸಿ:ಹೆಚ್ಚೆಚ್ಚು ನೀರ್ ಕುಡಿಯೋದ್ರಿಂದ ಮಹಿಳೆಯರಿಗೆ ಸಂಭಂದಪಟ್ಟ ಕೆಲವು ಸಮಸ್ಯೆಗಳು ನಿವಾರಣೆಯಾಗ್ತವೆ.ನೀರನ್ನು ಎಷ್ಟು ಜಾಸ್ತಿ ಕುಡಿತೀರೋ ಅಷ್ಟು ಒಳ್ಳೇದು.

ಖಾಲಿ ಹೊಟ್ಟೆಯಲ್ಲಿ ನಿಂಬೆ ರಸದೊಂದಿಗೆ ನೀರನ್ನ ಕುಡಿಯೋದು:ನೀರಿನ ಜತೆ ನಿಂಬೆ ರಸವನ್ನು ಸೇರಿಸಿ ಕುಡಿಯೋದ್ರಿಂದ ಹುಡ್ಗೀರಲ್ಲಿ ಬೊಜ್ಜು ಕರಗ್ತದೆ. ಇದಲ್ಲದೆ ಋತುಚಕ್ರ ಸಮಸ್ಯೆ ಇದ್ರೆ ಬಗೆಹರಿಯುತ್ತದೆ.

ಉದ್ವಿಗ್ನತೆ ಮತ್ತು ಆತಂಕವನ್ನು ನಿಯಂತ್ರಿಸ್ಕೊಬೇಕು:ಮದ್ವೆಯ ವಿಚಾರವಾಗಿ ಹುಡ್ಗೀರು ಹೆಚ್ಚು ಹೆಚ್ಚು ತಲೆ ಕೆಡುಸ್ಕೊಂಡು ಜಾಸ್ತಿ ಉತ್ಸಾಹ ಪಡಬಾರ್ದು ಹಾಗೆಯೇ ಜಾಸ್ತಿ ಭಯವನ್ನು ಪಡ್ಕೊಬಾರದು ಇದು ನಿಮ್ಮಲ್ಲಿ ಆತ್ಮ ವಿಶ್ವಾಸವನ್ನು ಕಮ್ಮಿ ಮಾಡುತ್ತದೆ.ಅಲ್ಲದಯೇ ಮಾನಸಿಕ ಕಾಯಿಲೆಗಳು ಬರುತ್ತವೆ.

ನಿದ್ದೆಗೆಡಬೇಡಿ:ಬಹುತೇಕ ಹೆಣ್ಣುಮಕ್ಕಳು ತಮ್ಮ ಮದ್ವೆ ಟೈಮ್ ನಲ್ಲಿ ನಿದ್ದೆ ಮಾಡಲ್ಲ ಅಂತ ಅನೇಕ ಸರ್ವೇಗಳು ಹೇಳ್ತವೆ. ಈ ತರ ಮಾಡೋದು ಹುಡ್ಗೀರಾ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರ್ತದೆ.

ಚಹಾ ಕುಡಿಯಿರಿ: ಸೂರ್ಯನ ನೇರಳತೀತ ಕಿರಣಗಳಿಂದ ರಕ್ಷಣೆ ಪಡ್ಕೊಳ್ಳಲು ಪ್ರತಿ ಹುಡ್ಗೀರು ಮದ್ವೆ ಸಮಯದಲ್ಲಿ ದಿನಕ್ಕೆ 2-3 ಗ್ಲಾಸ್ ಟೀ ಕೊಡಿಯಿರಿ. ಹೇಗೆ ಮಾಡೋದ್ರಿಂದ ಮೈಂಡ್ ಕೂಡ ಫ್ರೆಶ್ ಆಗುತ್ತೆ.ನೀವು ತಿನ್ನೋ ಊಟದ ಜೊತೆ ದ್ರಾಕ್ಷಿ,ಗೋಡಂಬಿ ,ಪಿಸ್ತಾ,ಬಾದಾಮಿಗಳನ್ನ ಹೆಚ್ಚಾಗಿ ಉಪಯೋಗಿಸಿ.ಅವುಗಳು ದೇಹಕ್ಕೆ ಮತ್ತು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top