fbpx
ಮನೋರಂಜನೆ

ವಿಷ್ಣು ಸ್ಮಾರಕ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಕಿಚ್ಚ ಸುದೀಪ್ ಮನವಿ.

ಸಾಹಸಸಿಂಹ ವಿಷ್ಣುವರ್ಧನ್​ ಅವರ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ಇಂದು(ನವೆಂಬರ್ 01) ವಿವಿಧ ಸಂಘಟನೆಗಳ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದು ಬೆಂಗಳೂರಿನ ಟೌನ್ ಹಾಲ್ ನಿಂದ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಯಲಿದೆ. ಈ ರ್‍ಯಾಲಿಯಲ್ಲಿ ಎಲ್ಲರೂ ಭಾಗವಹಿಸುವಂತೆ ಕಿಚ್ಚ ಸುದೀಪ್​ ಮನವಿ ಮಾಡಿಕೊಂಡಿದ್ದಾರೆ.

 

ವಿಡಿಯೋ ನೋಡಿ

 

ಕರ್ನಾಟಕ ಕಿಚ್ಚ ಸುದೀಪ್​ ಫ್ಯಾನ್ಸ್​ ಅಸೋಸಿಯೇಷನ್ ಫೇಸ್​ಬುಕ್​ ಖಾತೆಯಲ್ಲಿ ವಿಡಿಯೋ ಮೂಲಕ ಈ ಮನವಿ ಮಾಡಿಕೊಂಡಿರುವ ಸುದೀಪ್​,” ಶೂಟಿಂಗ್​ ಕಾರಣದಿಂದಾಗಿ ನಾನು ಹೈದರಾಬಾದಿನಲ್ಲಿರುವುದರಿಂದ ಈ ಚಳುವಳಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ, ದಯವಿಟ್ಟು ಕ್ಷಮೆ ಇರಲಿ” ಎಂದು ಕ್ಷಮೆ ಕೋರಿದ್ದಾರೆ.

ವಿಷ್ಣು ಸೇನಾ ಸಮಿತಿ,ಕರ್ನಾಟಕ ಸಂಘಟನೆಗಳ ಒಕ್ಕೂಟ ಮತ್ತು ಇತರ ವಿಷ್ಣು ಅಭಿಮಾನಿ ಸಂಘಟನೆಗಳ ವತಿಯಿಂದ ನಡೆಯಲಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಅಭಿಮಾನಿಗಳು ಹಾಗೂ ಸ್ನೇಹಿತರು ಭಾಗಿಯಾಗಲು ಸುದೀಪ್​ ಕರೆ ನೀಡಿದರು. ಈ ಬಗ್ಗೆ ಸರ್ಕಾರ ಆದಷ್ಟು ಬೇಗ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಿ. ವಿಷ್ಣು ಸ್ಮಾರಕ ವಿಚಾರವಾಗಿ ಹೋರಾಡುತ್ತಿರುವ ವಿಷ್ಣು ಸೇನಾ ಸಮಿತಿಗೆ ಒಂದು ನ್ಯಾಯ ಸಿಗಲಿ. ಮೆರವಣಿಗೆ ಯಶಸ್ಸಾಗಲಿ. ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ” ಎಂದು ಸುದೀಪ್ ಕೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top