ಆರೋಗ್ಯ

ಶುಗರ್ ಜಾಸ್ತಿ ಆದ್ರೆ ಯೋಚ್ನೆ ಬೇಡ ಸಿಂಪಲ್ ಮನೆ ಮದ್ದುಗಳಿದೆ!

ನೆಲ್ಲಿಕಾಯಿ:20 ಮಿಲೀ ನೆಲ್ಲಿಕಾಯಿ ರಸವನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಮಧುಮೇಹ ರೋಗಿಗಳಿಗೆ ಒಳ್ಳೆಯದು.

 

 

 

ದಾಲ್ಚಿನ್ನಿ:ಈ ಪ್ರಮುಖ ನೈಸರ್ಗಿಕ ಮನೆಯ ಮದ್ದುಗಳಲ್ಲಿ ಒಂದಾಗಿದೆ.ಮೊದಲು ಒಂದು ಲೀಟರ್ ನೀರು ತೆಗೆದುಕೊಂಡು 3-4 ದಾಲ್ಚಿನ್ನಿ ಸೇರಿಸಿ 20 ನಿಮಿಷಗಳ ಕಾಲ ಬಿಸಿ ಮಾಡಿ , ಕಾದ ಮೇಲೆ ಆರಿಸಿ ಪ್ರತಿ ದಿನ ಒಂದು ಗ್ಲಾಸ್ ಕುಡಿಯಬೇಕು.

ನೇರಳೆ :ನೇರಳೆ ಹಣ್ಣಿನ 1 -2 ಬೀಜಗಳನ್ನು ಪುಡಿಮಾಡಿ ಉಗುರು ಬೆಚ್ಚಗಿನ ನೀರಿನಲ್ಲಿ ಬೇರೆಸಿ ಕುಡಿದರೆ ಒಳ್ಳೆಯದು ಹಾಗೆಯೇ ನೇರಳೆ ಗಿಡದ ಎಲೆಗಳು ಸಹ ಮಧುಮೇಹಕ್ಕೆ ಬಹಳ ಒಳ್ಳೆಯದು.

ಮೆಂತ್ಯ:ಸಣ್ಣ ಲೋಟದಲ್ಲಿ 2 ಚಮಚ ಮೆಂತ್ಯೆಯನ್ನು ತೆಗೆದುಕೊಂಡು ರಾತ್ರಿ ಇಡೀ ನೆನೆಸಿ ಬೆಳಗ್ಗೆ ತಿನ್ನಬೇಕು ,ಮೂರು ತಿಂಗಳು ಈ ರೀತಿ ಮಾಡಿದರೆ ಒಳ್ಳೆಯದು.

ಲೋಳೆ ಸರ (ಅಲೋವೆರಾ ):ಅರ್ಧ ಚಮಚ ಲೋಳೆ ಸರದ ರಸವನ್ನು ಮಧ್ಯಾಹ್ನ ಹಾಗು ರಾತ್ರಿ ಊಟಕ್ಕೆ ಮುಂಚೆ ತಿಂದರೆ ಒಳ್ಳೆಯದು.

ಹಾಗಲಕಾಯಿ : 3 -4 ಹಾಗಲಕಾಯಿ ಸಣ್ಣ ತುಂಡುಗಳನ್ನು ನೀರು ಸೇರಿಸಿ ರುಬ್ಬಿ ಬೆಳಗ್ಗೆ ತಿಂಡಿಗೆ ಮುಂಚೆ ಕುಡಿದರೆ ಬಹಳ ಒಳ್ಳೆಯದು ಹಾಗು ಇದು ಬಹಳ ಪರಿಣಾಮಕಾರಿ ಮದ್ದು.

ಆಲದ ಮರದ ತೊಗಟೆ :20 ಗ್ರಾಂ ಆಲದ ಮರದ ತೊಗಟೆಯನ್ನು 4 ಗ್ಲಾಸ್ ನೀರಿನಲ್ಲಿ ಬೇರೆಸಿ ಕಾಯಿಸಿ ಆರಿಸಿ ದಿನವು 50 ಮಿ ಲಿ ಸೇವಿಸಬೇಕು.

ಅಮೃತ ಬಳ್ಳಿ :ದಿನ ಒಂದು ಅಮೃತ ಬಳ್ಳಿ ಎಲೆಯನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು.

ಪಡವಲ ಕಾಯಿ :ಪಡವಲ ಕಾಯಿಯು ಸಹ ಆರೋಗ್ಯಕ್ಕೆ ಒಳ್ಳೆಯದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top