fbpx
ಸಮಾಚಾರ

ದರ್ಶನ್ ‘ಮದಕರಿ ನಾಯಕ’ ಚಿತ್ರತಂಡ ಸೇರಿಕೊಂಡ ನಾದಬ್ರಹ್ಮ ಹಂಸಲೇಖ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾಗೆ ನಾದಬ್ರಹ್ಮ ಹಂಸಲೇಖ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಮ್ಮ ಸಂತಸ ಹಂಚಿಕೊಂಡಿರುವ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು “ಭಾರತ ಚಿತ್ರರಂಗ ಕಂಡ ಪ್ರತಿಭಾವಂತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ನಮ್ಮ ತಂಡಕ್ಕೆ ಸ್ವಾಗತ” ಎಂದಿದ್ದಾರೆ.

 

 

ಎಸ್,ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಸಿನಿಮಾಗೆ ಹಂಸಲೇಖ ಈಗಾಗಲೇ 7 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು ತಮ್ಮ ಕೆಲಸ ಆರಂಭಿಸಿದ್ದಾರೆ,. ಇದೇ ಮೊದಲ ಬಾರಿಗೆ ದರ್ಶನ್, ರಾಜೇಂದ್ರಸಿಂಗ್ ಬಾಬು ಮತ್ತು ರಾಕ್ಲೈನ್ ವೆಂಕಟೇಶ್ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ, ಇದರ ಜತೆಗೆ ಈ ಚಿತ್ರಕ್ಕೆ ರಮ್ಯಾ ನಾಯಕಿ ಆಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ

‘ಗಂಡುಗಲಿ ವೀರಮದಕರಿ ನಾಯಕ’ ಚಿತ್ರ 2019ರ ಜನವರಿ 15 ರಂದು ಸೆಟ್ಟೇರಲಿದೆ. ‘ಗಂಡುಗಲಿ ಮದಕರಿ ನಾಯಕ’ ಬಿಎಲ್ ವೇಣು ಅವರೇ ಬರೆದಿರುವ ಕಾದಂಬರಿಯಾಗಿದ್ದು, ಇದಕ್ಕೆ ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ದರ್ಶನ್ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಮದಕರಿ ನಾಯಕನಿಗೆ ಸಂಭಾಷಣೆ ಬರೆಯುತ್ತಿದ್ದಾರೆ ಬಿ ಎಲ್ ವೇಣು..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top