fbpx
ಸಮಾಚಾರ

ಗಾಯಕಿ, ನಟಿ ವಸುಂಧರಾ ದಾಸ್‌ ಅವ್ರಿಗೆ ಕ್ಯಾಬ್ ಚಾಲಕನಿಂದ ಕಿರುಕುಳ – ದೂರು ದಾಖಲು

ಸಾರ್ವಜನಿಕ ಪ್ರದೇಶಗಳಲ್ಲಿಯೂ ಹೆಣ್ಣುಮಕ್ಕಳ ಮೇಲೆ ಪೌರುಷ ತೋರಿಸುವ ರಣಹೇಡಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೇ.. ಸಾಮಾನ್ಯ ಹೆಣ್ಣುಮಕ್ಕಳಿಂದ ಹಿಡಿದು ಸಿನಿಮಾ ನಟಿಯರಿಗೂ ಇಂಥಾ ಕಿಡುಗೇಡಿಗಳಿಂದ ಸಮಸ್ಯೆ ತಪ್ಪಿದ್ದಲ್ಲ.. ಅಷ್ಟಕ್ಕೂ ಈಗ ಸಡನ್ನಾಗಿ ಈ ವಿಷ್ಯ ಯಾಕ್ ಹೇಳ್ತಿದ್ದೀವಿ ಅಂದ್ರೆ ಬೆಂಗಳೂರಿನ ಕ್ಯಾಬ್ ಚಾಲಕನೊಬ್ಬನು ಪಿತ್ತನೆತ್ತಿಗೇರಿಸಿಕೊಂಡು ಕನ್ನಡ ಚಿತ್ರನಟಿ ಮತ್ತು ಗಾಯಕಿಯೊಬ್ಬಳ ಮೇಲೆ ಕಿರುಕುಳ ನೀಡಿದ್ದಾನೆ.

ಮಲ್ಲೇಶ್ವರಂನ 18 ನೇ ಕ್ರಾಸ್‌ನಲ್ಲಿ ಅಕ್ಟೋಬರ್‌ 29 ರಂದು ಸಂಜೆ 4.30 ರ ವೇಳೆಗೆ ಘಟನೆ ನಡೆದಿದ್ದು, ಕ್ಯಾಬ್‌ ಚಾಲಕನೊಬ್ಬ ದಾರಿ ಬಿಟ್ಟುಕೊಡಲಿಲ್ಲ ಎಂಬ ಕಾರಣಕ್ಕೆ ವಸುಂಧರಾ ಅವರಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.ಕ್ಯಾಬ್​ ಚಾಲಕ ಭಾಷ್ಯಂ ಸರ್ಕಲ್ ಸಿಗ್ನಲ್‌ನಿಂದ ಹಿಂಬಾಲಿಸಿಕೊಂಡು ಬಂದಿದ್ದಾನೆ. ಇಟಿಯೋಸ್​ ಕಾರಿನಲ್ಲಿ ಬಂದ ಆತ ಮಲ್ಲೇಶ್ವರಂ 18ನೇ ಕ್ರಾಸ್ ಬಳಿ ಕಾರು ಅಡ್ಡಗಟ್ಟಿದ್ದಾನೆ. ಬಳಿಕ ಆತ ಕಾರಿನಿಂದ ಇಳಿದು ವಸುಂಧರಾ ದಾಸ್ ಕಾರಿನ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಇದೇ ವೇಳೆ ವಸುಂಧರಾ ದಾಸ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಸಾರ್ವಜನಿಕರು ಸ್ಥಳಕ್ಕೆ ಬರುತ್ತಿದ್ದಂತೆ ಅಲ್ಲಿಂದ ತೆರಳಿದ್ದಾನೆ.

KA-05 AE-3933 ಕ್ಯಾಬ್ ಚಾಲಕ ಭಾಷ್ಯಂ ಸರ್ಕಲ್ ಸಿಗ್ನಲ್‌ನಿಂದ ನನ್ನ ಕಾರನ್ನು ಹಿಂಬಾಲಿಸಿ ಮಲ್ಲೇಶ್ವರಂ 18ನೇ ಕ್ರಾಸ್ ಬಳಿ ಕಾರು ಅಡ್ಡಗಟ್ಟಿ ಕಾರಿನ ಬಾಗಿಲು ತೆರೆಯಲು ಯತ್ನಿಸಿದ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಂದು ಗಾಯಕಿ ವಸುಂಧರಾ ದಾಸ್​ ಮಲ್ಲೇಶ್ವರಂ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಸೆಕ್ಷನ್‌ 509 341,364 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕ್ಯಾಬ್‌ ಚಾಲಕನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top