fbpx
ಭವಿಷ್ಯ

04 ನವೆಂಬರ್: ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ೦೪ ನವೆಂಬರ್ ೨೦೧೮
ಸೂರ್ಯೋದಯ : ೦೬:೪೫
ಸೂರ್ಯಾಸ್ತ : ೧೭:೫೭
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಶ್ವಯುಜ

ಪಕ್ಷ : ಕೃಷ್ಣ ಪಕ್ಷ
ತಿಥಿ : ದ್ವಾದಶೀ – ೨೫:೨೪+ ವರೆಗೆ
ನಕ್ಷತ್ರ : ಉತ್ತರ ಫಾಲ್ಗುಣಿ – ೨೧:೩೫ ವರೆಗೆ
ಯೋಗ : ವೈಧೃತಿ – ೨೪:೪೩+ ವರೆಗೆ
ಸೂರ್ಯ ರಾಶಿ : ತುಲಾ

ಅಭಿಜಿತ್ ಮುಹುರ್ತ:೧೧:೫೯ – ೧೨:೪೪
ಅಮೃತಕಾಲ :೧೪:೪೪ – ೧೬:೧೬
ರಾಹು ಕಾಲ:೧೬:೩೩ – ೧೭:೫೭
ಗುಳಿಕ ಕಾಲ:೧೫:೦೯ – ೧೬:೩೩
ಯಮಗಂಡ:೧೨:೨೧ – ೧೩:೪೫

ನಿಮ್ಮ ನೆರೆಹೊರೆಯವರ ಬಗ್ಗೆ ಅನುಕಂಪವಿರಲಿ. ಒಬ್ಬರು ಮತ್ತೊಬ್ಬರಿಗೆ ಸಹಾಯ ಮಾಡುವುದು ಮಾನವ ಧರ್ಮ. ಆ ಧರ್ಮದಿಂದಲೇ ಸಹಬಾಳ್ವೆ ಉಂಟಾಗುವುದು. ಮಕ್ಕಳ ಓದಿನ ಬಗ್ಗೆ ಗಮನಹರಿಸಿರಿ.

ನಿಮ್ಮ ಆಂತರಿಕ ಯೋಜನೆಗಳನ್ನು ಪರರ ಮುಂದೆ ಹಂಚಿಕೊಳ್ಳುವಿರಿ. ಇದರಿಂದ ನಿಮಗೆ ಬೇರೊಂದು ರೀತಿಯಲ್ಲಿ ಸಹಾಯವಾಗುವುದು. ಹಣಕಾಸು ಕೂಡಾ ನೀವು ಅಂದುಕೊಂಡಂತೆ ದೊರೆಯುವುದು.

ಇಂದು ಎದ್ದಾಗಿನಿಂದ ಯಾವುದೋ ಒಂದು ಚಿಂತೆಯು ನಿಮ್ಮನ್ನು ಕಾಡುತ್ತಿದೆ. ನಿಮ್ಮ ಮನಸ್ಸಿನಂತೆ ಹಣವು ಸಕಾಲದಲ್ಲಿ ಬರದೇ ಇರುವುದರಿಂದ ಭವಿಷ್ಯದ ಬಗ್ಗೆ ಹೆಚ್ಚು ಚಿಂತಾಕ್ರಾಂತರಾಗುವಿರಿ.

ಮನೆಗೆ ಹೊಸ ಅತಿಥಿ ಬರುವ ಸಂಭವ. ಬಂಧುಗಳು, ಸ್ನೇಹಿತರು ನಿಮ್ಮ ಮೇಲೆ ಅಧಿಕ ವಿಶ್ವಾಸವನ್ನು ಇಡುವರು. ಕೌಟುಂಬಿಕ ಜೀವನ ನೆಮ್ಮದಿಯುತವಾಗಿರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಕೆಲವು ದಿನಗಳಿಂದ ಕಾಣಿಸಿಕೊಂಡಿದ್ದ ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವವು. ಕೆಲವರು ನಿಮ್ಮ ಮಾತನ್ನು ಅಪಾರ್ಥ ಮಾಡಿಕೊಳ್ಳುವುದರಿಂದ ನಿಮ್ಮ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಿರಿ. ಈದಿನ ಮಿಶ್ರ ಫಲವನ್ನು ಅನುಭವಿಸುವಿರಿ. ಸಾಮಾಜಿಕವಾಗಿಯೂ, ಸಾಂಸ್ಕೃತಿಕ ವಿಚಾರವಾಗಿಯೂ ಹೆಚ್ಚಿನ ಗೌರವವನ್ನು ಹೊಂದುವಿರಿ.

 

ಆಶಾವಾದವು ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತದೆ. ಮಿತ್ರರು ಬೆಂಬಲ ನೀಡುವರು. ಈದಿನ ಶುಭವಾರ್ತೆಯನ್ನು ಕೇಳುವಿರಿ. ಬಂಧುಭಗಿನಿಯರ ಸೌಖ್ಯ, ಭಾಗ್ಯ ವೃದ್ಧಿ. ಆಂಜನೇಯ ಸ್ತೋತ್ರ ಪಠಿಸಿ.

 

ಮನೆಯಲ್ಲಿನ ಹಿರಿಯರ ಭಾವನೆಗಳನ್ನು ಅಥೈರ್‍ಸಿಕೊಂಡು ಅದಕ್ಕೆ ಸ್ಪಂದಿಸಿರಿ. ಅವರ ಮನದಲ್ಲಿನ ಗೊಂದಲಗಳಿಗೆ ಸೂಕ್ತ ಸಮಜಾಯಿಸಿ ನೀಡಿ. ಅವರನ್ನು ಸಂತೈಸಿರಿ. ಅವರ ಆಶೀರ್ವಾದವು ನಿಮ್ಮ ಒಳಿತಿಗೆ ಬೆಳಕಾಗುವುದು.

 

ಇಟ್ಟ ಗುರಿ ಬಿಟ್ಟ ಬಾಣದಂತೆ ನೀವು ಸಾದಾ-ಸೀದಾ ವ್ಯಕ್ತಿ. ಎದುರಿಗೆ ಕಂಡ ಅನ್ಯಾಯವನ್ನು ಸಹಿಸಲು ಆಗುವುದಿಲ್ಲ. ಹಾಗಂತ ಸುಖಾಸುಮ್ಮನೆ ಜಗಳ ತೆಗೆದು ಅಪಹಾಸ್ಯಕ್ಕೆ ಒಳಗಾಗದಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಕೌಟುಂಬಿಕ ಖರ್ಚುಗಳು ಹೆಚ್ಚಾಗಲಿದೆ. ತಾಳ್ಮೆಯಿಂದ ವರ್ತಿಸಿರಿ. ಇಂದಿನ ದಿನವನ್ನು ಖುಷಿಯಿಂದ ಕಳೆಯುವಿರಿ. ಈ ಖುಷಿಗೆ ನಿಮ್ಮ ಹಳೆಯ ಸ್ನೇಹಿತರು ಕಾರಣರಾಗುವರು. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿರಿ.

 

ಆಶಾವಾದ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತದೆ. ಮಿತ್ರರು ಸಕಾಲದಲ್ಲಿ ನೆರವು ನೀಡುವರು. ಹಣಕಾಸು ನೀವು ಬಯಸಿದಷ್ಟು ಬರದೆ ಇದ್ದರೂ ಇಂದಿನ ಖರ್ಚಿಗೆ ಸಮನಾದ ಹಣವು ಕೈಸೇರುವುದು.

ಧನಾತ್ಮಕ ಚಿಂತನೆಯು ನಿಮ್ಮ ಯಶಸ್ಸಿನ ಗುಟ್ಟಾಗಿರುತ್ತದೆ. ಇದರಿಂದ ನಿಮ್ಮ ಮೇಲೆ ಕತ್ತಿ ಮಸೆಯುತ್ತಿದ್ದ ವಿರೋಧಿಗಳಿಗೆ ಸೋಲುಂಟಾಗುವುದು. ಆರ್ಥಿಕ ಸ್ಥಿತಿಯು ಉತ್ತಮವಾಗಿ ಮಕ್ಕಳಿಂದ ಸಂತಸದ ವಾರ್ತೆ ಕೇಳುವಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top