ದೇವರು

ಮಂಗಳವಾರದ ದಿನ ಒಂದು ಬಾರಿ ಈ 3 ಶಬ್ದದ ಮಂತ್ರ ಹೇಳಿದರೆ ಸಾಕಂತೆ ನಿಮ್ಮ ಎಲ್ಲ ಹಣಕಾಸಿನ ಸಮಸ್ಯೆ ಪಟ್ ಅಂತ ಮಾಯವಾಗುತ್ತೆ

ಮಂಗಳವಾರದ ದಿನ ಯಾವುದಾದರೂ ಸಮಯದಲ್ಲಿ ಒಂದು ಬಾರಿ ಈ ಮೂರು ಶಬ್ದಗಳನ್ನು ಹೇಳಿದರೆ ಸಾಕು ನಿಮ್ಮ ಜೀವನದಲ್ಲಿರುವ ಕಷ್ಟಗಳು ಮಾಯವಾಗುತ್ತಂತೆ
ಹನುಮಂತನ ದೇವರನ್ನು ರಾಮಭಕ್ತ ಎಂದು ಹೇಳಲಾಗುತ್ತದೆ ಮತ್ತು ಹನುಮಂತ ದೇವನು ತನ್ನ ಭಕ್ತರ ಮಾಡುವ ಪೂಜೆಯಿಂದ ಬೇಗನೇ ಪ್ರಸನ್ನಗೊಳ್ಳುತ್ತಾನೆ. ಮತ್ತು ಒಂದು ಬಾರಿ ಒಬ್ಬ ವ್ಯಕ್ತಿ ಹನುಮಂತ ದೇವರಲ್ಲಿ ಸಂಪೂರ್ಣವಾಗಿ ಶರಣಾದರೆ ಸಾಕು ಅವರ ಸಂಪೂರ್ಣ ಕಷ್ಟಗಳು ಸಹ ದೂರವಾಗುತ್ತವೆ. ಇದರ ಜೊತೆಗೆ ಹನುಮಂತನ ಕೃಪೆ ಮಾತ್ರವಲ್ಲದೆ, ಭಗವಂತನಾದ ಸಾಕ್ಷಾತ್ ವಿಷ್ಣುವಿನ ಅವತಾರವಾದ ಶ್ರೀರಾಮನ ಕೃಪೆಯು ಸಹ ಲಭಿಸಲಿದೆ.ಅಷ್ಟೇ ಅಲ್ಲದೆ ಹನುಮಂತ ದೇವರನ್ನು ಶಿವನ 11 ನೇ ರುದ್ರ ಅವತಾರ ಎಂದೇ ಹೇಳಲ್ಪಡುವುದರಿಂದ ಆ ಶಿವನ ಕೃಪೆಯೂ ಕೂಡ ಲಭಿಸಲಿದೆ.

 

 

 

ಮಂಗಳವಾರದ ದಿನ ಹನುಮಂತನನ್ನು ಭಕ್ತಿ , ಶ್ರದ್ಧೆ ನಂಬಿಕೆಯಿಂದ ಪೂಜಿಸಿದರೆ ವ್ಯಕ್ತಿಯ ಜೀವನದಲ್ಲಿ ಇರುವ ಎಲ್ಲಾ ಸಮಸ್ಯೆಗಳು ಸಹ ದೂರವಾಗುತ್ತವೆ. ಜೊತೆ ಜೊತೆಗೆ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಪ್ರಾಪ್ತಿಯಾಗಲಿದೆ.
ಹನುಮಂತ ದೇವರ ಒಂದು ಅತಿ ಮುಖ್ಯವಾದ ಮಂತ್ರವಿದೆ. ಆ ಮಂತ್ರವನ್ನು ನಿಯಮಿತವಾಗಿ ಭಕ್ತಿ, ಶ್ರದ್ಧೆ, ಏಕಾಗ್ರತೆ ಮತ್ತು ನಂಬಿಕೆಯಿಂದ ಜಪಿಸುವುದರಿಂದ ನಿಮಗೆ ಅನೇಕ ಪ್ರಕಾರದ ಲಾಭಗಳು ದೊರೆಯುತ್ತವೆ. ಜೊತೆಗೆ ಹಣದ ದೇವಿ, ಮಹಾಲಕ್ಷ್ಮಿ ದೇವಿಯ ಕೃಪೆಯು ಸಹ ನಿಮ್ಮ ಮೇಲೆ ಇರುತ್ತದೆ ಮತ್ತು ನಿಮ್ಮ ಜೀವನದಲ್ಲಿ ಇರುವ ಎಲ್ಲ ಆಸೆಗಳು ಕೂಡ ಈಡೇರುತ್ತವೆ. ಆ ಮಂತ್ರ ಹೀಗಿದೆ “ಓಂ ಹಂ ಹನುಮತೇ ನಮಃ”.

ಈ ಮಂತ್ರವನ್ನು ನೀವು ಮಂಗಳವಾರದ ದಿನ ಹನುಮಂತ ದೇವರ ಮಂದಿರದಲ್ಲಿ ಹನುಮಂತ ದೇವರ ದರ್ಶನ ಪಡೆದು, ಪೂಜೆ ಮಾಡಿ,ಪ್ರಾರ್ಥಿಸಿ ನಂತರ ಜಪಿಸಲು ಪ್ರಾರಂಭಿಸಬೇಕು. ಈ ಮಂತ್ರದ ಜಪದಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಅತಿ ಬೇಗನೆ ನಿವಾರಣೆಯಾಗುತ್ತದೆ ಮತ್ತು ನಿಮಗೆ ಯಾವುದೇ ಪರಿಸ್ಥಿತಿಯಲ್ಲೂ ಹಣದ ಅಭಾವ ಅಥವಾ ಆರ್ಥಿಕ ಸಂಕಷ್ಟಗಳು ಎದುರಾಗುವುದಿಲ್ಲ ಮತ್ತು ಎಲ್ಲಾ ಕೆಲಸದಲ್ಲಿಯೂ ಖಚಿತವಾಗಿ ಯಶಸ್ಸು ಪ್ರಾಪ್ತಿಯಾಗಲಿದೆ.ನೀವು ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನೀವು ಈ ಮಂತ್ರವನ್ನು ಅವಶ್ಯವಾಗಿ ಪ್ರತಿ ಮಂಗಳವಾರದ ದಿನ ವಿಧಿ ವಿಧಾನವನ್ನು ಪಾಲಿಸಿ ನಿಮಗೆ ಸಾಧ್ಯವಾದಷ್ಟು ಬಾರಿ ಅಂದರೆ 11,21,48,108 ಹೀಗೆ ಈ ಕ್ರಮದಲ್ಲಿ ಜಪಿಸುತ್ತಾ ಬನ್ನಿ.ಆಗ ಸ್ವತಃ ನೀವೇ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ಕಾಣುತ್ತೀರ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top