ಸಮಾಚಾರ

ವೈರಲ್ ಆಯಿತು ಪುತ್ರನೊಂದಿಗಿನ ಸಾನಿಯಾ ಮಿರ್ಜಾ ಫೋಟೋ,ಫೋಟೋ ಒಳಗಿದೆ

ಕ್ರಿಕೆಟಿಗ ಶೊಯೆಬ್ ಮಲಿಕ್ ಹಾಗೂ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ದಂಪತಿಗೆ ಮೊನ್ನೆಯಷ್ಟೇ ಗಂಡು ಮಗು ಜನನವಾಗಿದೆ. ಸಾನಿಯಾ ಮಿರ್ಜಾ ಪತಿ, ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲ್ಲಿಕ್ ತಮಗೆ ಗಂಡು ಮಗು ಜನ್ಮವಾಗಿದೆ ಎಂಬ ವಿಷಯವನ್ನು ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದರು. “ಇದನ್ನು ಹೇಳಲು ನಾನು ತುಂಬಾ ಉತ್ಸಾಹಕನಾಗಿದ್ದೀನಿ. ನಮಗೆ ಗಂಡು ಮಗು ಜನ್ಮವಾಗಿದೆ. ನನ್ನ ಮಗು ಮತ್ತು ನನ್ನಾಕೆ ಆರೋಗ್ಯದಿಂದಿದ್ದು, ನಿಮ್ಮ ಹಾರೈಕೆಗೆ ಧನ್ಯವಾದಗಳು” ಎಂದು ಶೊಯೆಬ್ ಟ್ವೀಟ್ ಮಾಡಿದ್ದರು.

ಸಾನಿಯಾ ಮತ್ತು ಶೋಯಬ್ 2010ರಲ್ಲಿ ವಿವಾಹವಾಗಿದ್ದರು. ಕಳೆದ ಏಪ್ರಿಲ್ ನಲ್ಲಿ ಶೋಯೆಬ್ ಮತ್ತು ಸಾನಿಯಾ ತಮ್ಮ ಮೊದಲ ಮಗುವನ್ನು ನಿರೀಕ್ಷೆಯಲ್ಲಿದ್ದೇವೆ ಎಂದು ಸಾಮಾಜಿಕ ತಾಲತಾಣಗಳಲ್ಲಿ ಹೇಳಿಕೊಂಡಿದ್ದರು,ಇತ್ತೀಚೆಗೆ ನಡೆದ ಸಾನಿಯಾ ಅವರ ಸೀಮಂತ ಕಾರ್ಯಕ್ರಮ ಕೂಡ ವ್ಯಾಪಕ ವೈರಲ್ ಆಗಿತ್ತು.ಈಗ ನಾವು ಹೇಳಲು ಹೊರಟಿರುವ ಸುದ್ದಿ ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ಜನ ಫುಲ್ ಫಿದಾ ಆಗಿದ್ದಾರೆ.

 

 

 

ಪಾಕಿಸ್ತಾನ ತಂಡದ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್, ಸಾನಿಯಾ ದಂಪತಿಯ ತಮ್ಮ ಮಗುವಿಗೆ ಇಝಾನ್ ಮಿರ್ಜಾ ಮಲಿಕ್ ಎಂದು ಹೆಸರಿಟ್ಟಿದ್ದು, ಇಝಾನ್ ಎಂದರೆ ಅರೇಬಿಕ್ ನಲ್ಲಿ ಗಾಡ್ ಗಿಫ್ಟ್ ಎಂಬರ್ಥವನ್ನು ನೀಡುತ್ತದೆ. ಈ ನಡುವೆ ಅವರ ಮಗುವಿನೊಂದಿಗೆ ಸಾನಿಯಾ ಅವರು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶೋಯೆಬ್ ಮಲಿಕ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.ಫೋಟೋದಲ್ಲಿ ಸಾನಿಯಾ ಮಿರ್ಜಾ ಆಸ್ಪತ್ರೆಯಿಂದ ಹೊರ ಬರುತ್ತಿದ್ದು ಪುತ್ರ ಇಝಾನ್‍ನನ್ನು ಎತ್ತಿಕೊಂಡು ಬರುತ್ತಿರುವುದನ್ನು ನಾವು ನೋಡಬಹುದು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top