fbpx
ಭವಿಷ್ಯ

ವಾರ ಭವಿಷ್ಯ ನವೆಂಬರ್ 5ನೇ ತಾರೀಖಿನಿಂದ 12ನೇ ತಾರೀಖಿನವರೆಗೆ.

ಮೇಷ ರಾಶಿ

 

 

 

ತೀರ್ಥಕ್ಷೇತ್ರಕ್ಕೆ ಪ್ರಯಾಣ ಮಾಡುವ ಶುಭಯೋಗ, ಮನೆಗೆ ಬಂಧುಗಳ ಆಗಮನ , ವಿಪರೀತ ಹಣಕಾಸಿನ ಖರ್ಚು, ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ, ವಿದ್ಯಾರ್ಥಿಗಳಲ್ಲಿ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟಾಗಲಿದೆ, ಅನಗತ್ಯ ಮತ್ತು ವೃತಾ ತಿರುಗಾಟ, ಏನಾದರೂ ಕೆಲಸ ಕಾರ್ಯಗಳು ಇದ್ದರೆ ಮಾತ್ರ ಓಡಾಟವನ್ನು ಇಟ್ಟುಕೊಳ್ಳಿ.

ಪರಿಹಾರ:“ಓಂ ಲಕ್ಷ್ಮಿ ಗಣಪತಯೇ ನಮಃ” ಈ ಮಂತ್ರವನ್ನು 48 ಬಾರಿ ಪ್ರತಿನಿತ್ಯ ಜಪಿಸಿ ಗಣೇಶನಿಗೆ 21 ಬಾರಿ ದೀರ್ಘದಂಡ ನಮಸ್ಕಾರವನ್ನು ಮಾಡಿ .

ವೃಷಭ ರಾಶಿ

 

 

 

ವ್ಯವಹಾರದಲ್ಲಿ ಅನುಕೂಲ, ದಾಯಾದಿಗಳೊಂದಿಗೆ ಕಲಹ, ಮನಸ್ಸಿನಲ್ಲಿ ಅತಿಯಾದ ಭಯ, ಮಾನಸಿಕ ವ್ಯಥೆ, ಮಾತಿನ ಮೇಲೆ ನಿಗವನ್ನು ಇಟ್ಟು ಮಾತನಾಡಿ, ಋಣ, ರೋಗ ಭಾದೆಗಳು ಬಾಧಿಸುತ್ತವೆ, ದುಷ್ಟರ ಸಹವಾಸದಿಂದ ಸಮಸ್ಯೆ, ಕಾರ್ಯ ಸಾಧನೆಗಾಗಿ ಪರಿಶ್ರಮ, ಬಂಧು ಮಿತ್ರರ ವಿರೋಧ ಉಂಟಾಗಲಿದೆ, ಮಾನಸಿಕ  ಆಶಾಂತಿ ಉಂಟಾಗಲಿದೆ.

ಪರಿಹಾರ:ಪ್ರತಿನಿತ್ಯ ಶಿವಾಲಯಕ್ಕೆ ಹೋಗಿ ಬಿಲ್ವಾರ್ಚನೆಯನ್ನು ಮಾಡಿಸಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಮಿಥುನ ರಾಶಿ

 

 

 

ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟಾಗಲಿದೆ, ಮಾನಸಿಕವಾಗಿ ಅಧಿಕ ಒತ್ತಡ, ವ್ಯವಹಾರದಲ್ಲಿ ನಷ್ಟ, ಚಂಚಲ ಮನಸ್ಸು, ವಿವಾಹ ಯೋಗ, ಪರಿಶ್ರಮಕ್ಕೆ ತಕ್ಕ ಫಲ ಲಭಿಸಲಿದೆ, ವಾರಾಂತ್ಯದಲ್ಲಿ ದನಾಗಮನವಾಗಲಿದೆ, ಹಣಕಾಸಿನಲ್ಲಿ ಲಾಭ.

ಪರಿಹಾರಪ್ರತಿನಿತ್ಯ ಗಾಯತ್ರಿ ಮಂತ್ರವನ್ನು ಪಠಿಸಿ ಗಾಯತ್ರಿ ದೇವಾಲಯಕ್ಕೆ ಹೋಗಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಕಟಕ ರಾಶಿ

 

 

 

ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ರಿಯಲ್ ಎಸ್ಟೇಟ್ ನವರಿಗೆ ಲಾಭ, ಇಷ್ಟವಾದ ವಸ್ತುಗಳ ಖರೀದಿಯನ್ನು ಮಾಡುವಿರಿ, ಆಕಸ್ಮಿಕ ಧನಲಾಭ, ಸ್ತ್ರೀಯರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಪರಿಹಾರ :ಪ್ರತಿನಿತ್ಯ ಔದುಂಬರ ವೃಕ್ಷಕ್ಕೆ ಹದಿನೆಂಟು ಬಾರಿ ಪ್ರದಕ್ಷಿಣೆಯನ್ನು ಮಾಡಿ ನಮಸ್ಕಾರ ಮಾಡಿ.

ಸಿಂಹ ರಾಶಿ 

 

 

 

ಸಾಮಾನ್ಯ ನೆಮ್ಮದಿಗೆ ಧಕ್ಕೆ ಉಂಟಾಗಲಿದೆ ,ಗಣ್ಯ ವ್ಯಕ್ತಿಗಳ ಭೇಟಿ ಮಾಡಲಿದ್ದೀರ, ಉದ್ಯೋಗದಲ್ಲಿ ಬಡ್ತಿ, ಕೆಲಸದಲ್ಲಿ ತಾಳ್ಮೆ ಅತ್ಯಗತ್ಯ, ನೀವು ಆಡುವ ಮಾತಿನಲ್ಲಿ ಎಚ್ಚರಿಕೆ ಇರಲಿ, ಪರರೊಂದಿಗೆ ಕಲಹವಾಗುವ ಸಾಧ್ಯತೆ ಇದೆ, ಯತ್ನ ಕಾರ್ಯದಲ್ಲಿ ವಿಳಂಬ , ವಾರಾಂತ್ಯದಲ್ಲಿ ನೆಮ್ಮದಿ ಪ್ರಾಪ್ತಿಯಾಗಲಿದೆ.

ಪರಿಹಾರ: ಪ್ರತಿದಿನ ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ ದಕ್ಷಿಣಾಭಿಮುಖವಾಗಿರುವ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ, ದೀರ್ಘದಂಡ ನಮಸ್ಕಾರವನ್ನು ಮಾಡಿ.

ಕನ್ಯಾ ರಾಶಿ 

 

 

 

ನೆಮ್ಮದಿಯಿಂದ ಬದುಕಲು ಮನಸ್ಸು ಆಲೋಚಿಸುತ್ತದೆ, ಸ್ಥಿರಾಸ್ತಿಯ ವಿಚಾರದಲ್ಲಿ ಯೋಚನೆ ಮಾಡುತ್ತೀರಿ, ವ್ಯಾಪಾರಿಗಳಿಗೆ ಲಾಭ, ಷೇರು ವ್ಯವಹಾರಗಳಲ್ಲಿ ಅಲ್ಪ ಚೇತರಿಕೆ, ಆತ್ಮೀಯರೊಂದಿಗೆ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ,ಅಧಿಕ  ಹಣವನ್ನು ಖರ್ಚು ಮಾಡುವಿರಿ,ಕೃಷಿ ಚಟುವಟಿಕೆ ಮಾಡುವವರಿಗೆ ಬಹಳಷ್ಟು ಲಾಭ, ಆದರೆ ಗೆಳೆಯರಿಂದ ಅನರ್ಥಗಳಾಗುವ ಸಾಧ್ಯತೆಗಳಿವೆ.

ಪರಿಹಾರ:ಪ್ರತಿನಿತ್ಯ  ಗುರುಗಳ ಆರಾಧನೆಯನ್ನು ಮಾಡಿ, ಕಣ್ಣಿಲ್ಲದೆ ಇರುವ ಅಂಧಮಕ್ಕಳಿಗೆ ಕೈಲಾದ ಸೇವೆಯನ್ನು ಮಾಡಿ .

ತುಲಾ ರಾಶಿ

 

 

 

ಯಂತ್ರೋಪಕರಣಗಳಿಂದ ಲಾಭವಾಗಲಿದೆ, ಸ್ನೇಹಿತರಿಂದಲೇ ನಿಂದನೆ, ಅವಮಾನ ಅಪವಾದಗಳನ್ನು ಈ ವಾರ ಅನುಭವಿಸಬೇಕಾಗುತ್ತದೆ, ಸ್ವಲ್ಪ ಜಾಗ್ರತೆ ವಹಿಸಿ, ಮಹಿಳೆಯರಿಗೆ ಅನುಕೂಲ, ಅಧಿಕ ಹಣ ಖರ್ಚಾಗಲಿದೆ, ಶೀತ ಸಂಬಂಧಿತ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ, ಮನಸಿನಲ್ಲಿ ಕೆಟ್ಟ ಕೆಟ್ಟ ಆಲೋಚನೆಗಳು ಉತ್ಪತ್ತಿಯಾಗುತ್ತವೆ, ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ, ಈ ವಾರ ಮಾಡುವ ಕೆಲಸ ಕಾರ್ಯಗಳಲ್ಲಿ ಬಹಳಷ್ಟು ಎಚ್ಚರವನ್ನು ವಹಿಸಿ.

ಪರಿಹಾರ:ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡಿ, ವೃದ್ಧ ದಂಪತಿಗಳಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯಿರಿ.

ವೃಶ್ಚಿಕ ರಾಶಿ 

 

 

 

ಕುಟುಂಬದಲ್ಲಿ ಅಶಾಂತಿಯ ವಾತಾವರಣ, ವ್ಯರ್ಥ ಧನಹಾನಿ, ಆರ್ಥಿಕ ಸಂಕಷ್ಟದ ಬಾಧೆಗೆ ಸಿಲುಕಲಿದ್ದೀರ, ಶುಭ ಕಾರ್ಯಗಳಲ್ಲಿ ಭಾಗಿಯಾಗುವ ಶುಭಯೋಗ, ಕಾರ್ಯದಲ್ಲಿ ಅನುಕೂಲ,ನಿಮ್ಮ ಆತ್ಮೀಯರೇ ನಿಮಗೆ ಮೋಸ ಮಾಡುವರು, ಈ ವಾರ ಶುಭ ವಾರ್ತೆಯನ್ನು ಕೆಲಲಿದ್ದೀರಿ.

ಪರಿಹಾರ: ಪ್ರತಿನಿತ್ಯ ನಾಗ ದೇವತೆಗಳಿಗೆ ಪೂಜೆಯನ್ನು ಮಾಡಿ ನಮಸ್ಕಾರ ಮಾಡಿ.

ಧನಸ್ಸು ರಾಶಿ 

 

 

 

ಮನೆಗೆ ಆತ್ಮೀಯರ ಆಗಮನ, ನೆಮ್ಮದಿ ಇಲ್ಲದ ಜೀವನ ನಿಮ್ಮದಾಗಲಿದೆ, ಧಾರ್ಮಿಕ ಕಾರ್ಯಗಳತ್ತ ಮನಸ್ಸು ಮೂಡುವುದು, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸುವುದು, ಬಾಕಿ ಹಣ ಮರುಪಾವತಿಯನ್ನು ಮಾಡುವುದಕ್ಕೆ ಬಹಳಷ್ಟು ಓಡಾಟ ಮಾಡಲಿದ್ದೀರಿ, ವಾರದ ಮಧ್ಯ ನೆಮ್ಮದಿ ಪ್ರಾಪ್ತಿಯಾಗಲಿದೆ, ಮಾಡುವ ವ್ಯವಹಾರದಲ್ಲಿ ಬಹಳಷ್ಟು ಎಚ್ಚರವನ್ನು ವಹಿಸಿ.

ಪರಿಹಾರ: ಪ್ರತಿನಿತ್ಯ ಗಣೇಶನ ದರ್ಶನ ಮಾಡಿ ಗಣೇಶನ ದೇವಾಲಯಕ್ಕೆ ಹೋಗಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಮಕರ ರಾಶಿ 

 

 

 

ಸ್ನೇಹಿತರು ಮತ್ತು ಬಂಧುಗಳಿಂದ ಸಹಾಯ ಲಭಿಸುವುದು, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಚ್ಚರವನ್ನು ವಹಿಸಿ, ನಿಮ್ಮ ಗೌರವಕ್ಕೆ ಧಕ್ಕೆ ಬರುವ ಸಾಧ್ಯತೆಯಿದೆ, ಗೃಹಸ್ಥಳ ಬದಲಾವಣೆಯಾಗಲು ಮಹಿಳೆಯರಿಗೆ ಅನುಕೂಲಕರವಾಗಲಿದೆ, ವಾಹನ ಚಾಲನೆ ಮಾಡುವವರು ಎಚ್ಚರಿಕೆಯಿಂದಿರಿ, ವಾಹನ ಅಪಘಾತವಾಗುವ ಸಾಧ್ಯತೆ ಇದೆ, ಆತ್ಮೀಯರಿಂದಲೇ  ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿದೆ.

ಪರಿಹಾರ: ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡಿ ಸುಬ್ರಮಣ್ಯನಿಗೆ ಕೆಂಪು ಹೂವುಗಳನ್ನು ಅರ್ಪಿಸಿ, ದೀರ್ಘದಂಡ ನಮಸ್ಕಾರವನ್ನು ಮಾಡಿ.

ಕುಂಭ ರಾಶಿ 

 

 

 

ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಹಿತ ಶತ್ರುಗಳಿಂದ ಎಚ್ಚರಿಕೆ, ವ್ಯವಹಾರದಲ್ಲಿ ಉತ್ತಮ ಬುದ್ಧಿಶಕ್ತಿ ನಿಮ್ಮ ಶರೀರದಲ್ಲಿ ಉತ್ಪತ್ತಿಯಾಗಲಿದೆ , ಅದನ್ನು ಸದುಪಯೋಗ ಪಡಿಸಿಕೊಳ್ಳಿ, ನಂಬಿಕಸ್ಥರಿಂದಲೇ ಮೋಸ ಹೋಗುವಿರಿ, ಸಂಗಾತಿಯ  ಸಲಹೆ ಕೇಳಿ, ದಾಂಪತ್ಯದಲ್ಲಿ ಅನ್ಯೋನ್ಯತೆ ಹೆಚ್ಚಾಗಲಿದೆ.

ಪರಿಹಾರ: ವಟು ಬ್ರಾಹ್ಮಣರಿಗೆ ಪಾದಪೂಜೆಯನ್ನು ಮಾಡಿ ಸ್ವಯಂ ಪಾಕ ನೀಡಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಮೀನ ರಾಶಿ

 

 

 

ವಸ್ತ್ರಾಭರಣ ಖರೀದಿ ಮಾಡಲು ಶುಭಯೋಗ, ತೀರ್ಥಕ್ಷೇತ್ರ ದರ್ಶನಕ್ಕೆ ಪ್ರಯಾಣ ಮಾಡುವಿರಿ, ವಿಪರೀತ ಹಣಕಾಸು ಖರ್ಚಾಗುತ್ತದೆ, ಋಣ ವಿಮೋಚನೆ ಮಾಡುವ ಸಾಧ್ಯತೆಯಿದೆ, ಸಂಕಷ್ಟಕ್ಕೆ ಗುರಿಯಾಗುವಿರಿ, ಅಧಿಕಾರಿಗಳಿಂದ ಪ್ರಶಂಸೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಾಹನ ಲಭಿಸುವ ಸಾಧ್ಯತೆ ಇದೆ, ಆರೋಗ್ಯದಲ್ಲಿ ಚೇತರಿಕೆ.

ಪರಿಹಾರ :ಸುದರ್ಶನ ಮಂತ್ರವನ್ನು ಪ್ರತಿನಿತ್ಯ ಪಾರಾಯಣ ಮಾಡಿ, ಬುದುವಾರ ವಿಷ್ಣುವಿನ ದೇವಾಲಯಕ್ಕೆ ಹೋಗಿ ನಾಟಿ ತುಳಸಿಯನ್ನು ಅರ್ಪಿಸಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top