fbpx
ಭವಿಷ್ಯ

07 ನವೆಂಬರ್: ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಬುಧವಾರ, ೦೭ ನವೆಂಬರ್ ೨೦೧೮
ಸೂರ್ಯೋದಯ : ೦೬:೪೭
ಸೂರ್ಯಾಸ್ತ : ೧೭:೫೬
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಷಾಢ

ಪಕ್ಷ : ಕೃಷ್ಣ ಪಕ್ಷ
ತಿಥಿ : ಅಮಾವಾಸ್ಯೆ – ೨೧:೩೧ ವರೆಗೆ
ನಕ್ಷತ್ರ : ಸ್ವಾತಿ – ೧೯:೩೭ ವರೆಗೆ
ಯೋಗ : ಆಯುಷ್ಮಾನ್ – ೧೭:೫೯ ವರೆಗೆ
ಸೂರ್ಯ ರಾಶಿ : ತುಲಾ

ಅಭಿಜಿತ್ ಮುಹುರ್ತ : ಯಾವುದೂ ಇಲ್ಲ
ಅಮೃತಕಾಲ : ೧೦:೫೬ – ೧೨:೩೦
ರಾಹು ಕಾಲ:೧೨:೨೧ – ೧೩:೪೫
ಗುಳಿಕ ಕಾಲ: ೧೦:೫೮ – ೧೨:೨೧
ಯಮಗಂಡ:೦೮:೧೧ – ೦೯:೩೪

 

ರೋಗ್ಯದ ವಿಷಯದಲ್ಲಿ ಉದಾಸೀನತೆ ಸಲ್ಲದು. ಸಾಧಕರೊಬ್ಬರ ದರ್ಶನ ಭಾಗ್ಯದಿಂದ ನಿಮ್ಮ ಜೀವನ ಶೈಲಿ ಬದಲಾಗುವುದು. ಜೀವನ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುವಿರಿ.ಅಡೆ-ತಡೆಯಿಲ್ಲದ ಖರ್ಚು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಹಾನಿ ಮಾಡುವ ಸಂದರ್ಭ.

ಜೀವನದಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೊದಲು ಅದರ ಮೂಲವನ್ನು ತಿಳಿಯಿರಿ. ಇಲ್ಲವಾದಲ್ಲಿ ನಿಮಗೆ ನೀವೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಬಹುದು. ಬಂಧುವರ್ಗದವರಿಗೆ ನಿಮ್ಮ ಬಗ್ಗೆ ತಾತ್ಸಾರ ಮೂಡಬಹುದು.

 

ನಿಮ್ಮ ದುಡುಕಿನ ಮಾತಿನಿಂದಾಗಿ ಬಹುದಿನದ ಸ್ನೇಹಕ್ಕೆ ಭಂಗಬರುವುದು. ಎರಡು ಬಾರಿ ಚಿಂತಿಸಿ ಮಾತನಾಡಿರಿ.ಆರೋಗ್ಯದ ಬಗ್ಗೆ ಉದಾಸೀನ ಬೇಡ. ಕುಲದೇವತಾರಾಧನೆ ಮಾಡುವುದು ಉತ್ತಮ

 

ಸಣ್ಣಪುಟ್ಟ ವಿಷಯಗಳನ್ನು ಅಲಕ್ಷಿಸದಿರುವುದೇ ಒಳ್ಳೆಯದು. ಏಕೆಂದರೆ ಕಟ್ಟೆಯನ್ನೆ ಗುಡ್ಡವೆಂದು ಕೆಲವರು ಅಪಪ್ರಚಾರ ಮಾಡುವರು. ಹಾಗಾಗಿ ವಿರೋಧಿಗಳ ಟೀಕೆಗೆ ಗುರಿಯಾಗದಿರಿ.

 

 

ಆತಂಕದಲ್ಲಿದ್ದ ನಿಮ್ಮ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನೆರವೇರುವುದು. ನಿಮ್ಮ ಮನದ ಇಂಗಿತವನ್ನು ಆಪ್ತರೊಂದಿಗೆ ಹಂಚಿಕೊಳ್ಳಿರಿ.

 

 

ಬೆಟ್ಟದಂತೆ ಬಂದ ಸಮಸ್ಯೆಯು ಮಂಜಿನಂತೆ ಕರಗಿ ಹೋಗುವುದು. ದೈವ ಕಪೆಯಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಹಿರಿಯರ ಸಲಹೆ ಸ್ವೀಕರಿಸಿ.

 

 

ಮನುಜನ ಮೊದಲನೆ ಶತ್ರು ಕೋಪ. ನಿಮ್ಮ ಮುಂಗೋಪದ ಸ್ವಭಾವದಿಂದಾಗಿ ಆಗುವ ಕೆಲಸಗಳು ಅರ್ಧಕ್ಕೆ ನಿಲ್ಲುವವು. ಮರಕ್ಕಿಂತ ಮತ್ತೊಂದು ಮರ ದೊಡ್ಡದು ಎನ್ನುವಂತೆ ಬುದ್ಧಿಚಾತುರ‌್ಯದಲ್ಲಿ ನಿಮ್ಮನ್ನು ಮೀರಿಸುವ ಜನರಿದ್ದಾರೆ ಎಂಬುದು ನಿಮ್ಮ ಗಮನದಲ್ಲಿರಲಿ.

 

 

ಈ ಹಿಂದೆ ಪಟ್ಟ ಶ್ರಮಕ್ಕೆ ಇನ್ನು ಮುಂದೆ ಪ್ರತಿಫಲಗಳು ಗೋಚರಿಸುತ್ತಾ ಹೋಗುವುದು. ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡುವುದು ಒಳ್ಳೆಯದು.ಭಿನ್ನಾಭಿಪ್ರಾಯಗಳನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸಿ.

 

ನಿಮ್ಮ ಮನಸ್ಸನ್ನು ಅರಿಯಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಅನಿರೀಕ್ಷಿತ ನಡಾವಳಿ ಕೆಲವರಿಗೆ ಬೇಸರವನ್ನುಂಟು ಮಾಡುವುದು. ಸ್ವಪ್ರಯತ್ನ ಹಾಗೂ ಶ್ರಮ ನಿಮ್ಮ ಯಶಸ್ಸಿನ ಮೆಟ್ಟಿಲು.

 

ಸರಿಯಾದ ನಿರ್ಣಯದಿಂದ ಮಾತ್ರ ಬದುಕು ತಹಬಂದಿಗೆ ಬರಲು ಸಾಧ್ಯ ಇಲ್ಲವಾದಲ್ಲಿ ಭವಿಷ್ಯದ ಚಿಂತೆ ವರ್ತಮಾನವನ್ನು ಹಾಳು ಮಾಡುವುದು. ಸ್ನೇಹಿತರ ಸಲಹೆಯಿಂದಾಗಿ ಆಗಲಿರುವ ವಂಚನೆಯಿಂದ ಪಾರಾಗುವಿರಿ

 

ಬಂಧುಗಳೊಂದಿಗೆ ಆದ ವೈಮನಸ್ಸು ನಿಮ್ಮನ್ನು ಒಂಟಿತನಕ್ಕೆ ಈಡು ಮಾಡುವುದು. ದುಡುಕುತನ ಬೇಡ. ಮಾನಸಿಕ ಏಕಾಗ್ರತೆಗಾಗಿ ಅಧ್ಯಯನ ಮತ್ತು ಧ್ಯಾನದಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ಮತ್ತೊಬ್ಬರ ವಿಷಯದಲ್ಲಿ ತಲೆ ಹಾಕಬೇಡಿ.

 

ಆಗಿಹೋದ ಕಹಿ ಘಟನೆಗಳ ನೆನಪಿನಿಂದ ನೋವು ಮರುಕಳಿಸುತ್ತದೆಯೇ ಹೊರತು ಅದರಿಂದ ಪ್ರಯೋಜನವಿಲ್ಲ. ಸಂಗಾತಿಯಿಂದ ಸಾಂತ್ವನದ ಮಾತನ್ನು ಕೇಳುವಿರಿ. ಯೋಗ್ಯರ ಸಲಹೆಯಿಂದ ಮಾತ್ರ ಸಮಸ್ಯೆ ದೂರವಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top