ದೇವರು

ಹಸುವಿನ ಬಾಲದ ಒಂದು ಕೂದಲಿನಿಂದ ಈ ರೀತಿ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತಂತೆ.

ಪ್ರಕೃತಿಯನ್ನು,ಪಶು ಪಕ್ಷಾದಿಗಳನ್ನು ಆರಾಧಿಸುವ ಸಂಪ್ರದಾಯ ನಮ್ಮದು.ಅದಕ್ಕೆ ನಾವು ಅನಾದಿ ಕಾಲದಿಂದಲೂ ಗೋಪೂಜೆಯನ್ನು ಸಾಂಪ್ರದಾಯಕವಾಗಿ ಆಚರವಾಗಿ ಮಾಡಿಕೊಂಡು ಬಂದಿರುವಂತಹದ್ದು.ಗೋವಿಗೆ ಕಾಮಧೇನುವೆಂದೂ ಕರೆಯುವುದುಂಟು.ಗೋವನ್ನು ಪೂಜಿಸಿ ಅದಕ್ಕೆ ತಿನ್ನಲು ಆಹಾರವನ್ನು ನೀಡುತ್ತಾ ನಮಸ್ಕರಿಸಿ ಪೂಜಿಸಿಕೊಳ್ಳುವುದು ನಾವು ಸನಾತನ ಕಾಲದಿಂದಲೂ ಮಾಡುತ್ತ ಬಂದಿರುವಂತ ಒಂದು ಪದ್ದತಿ.ಸಕಲ ದೇವಾನುದೇವತೆಗಳು ಈ ಕಾಮಧೇನುವಿನಲ್ಲಿ (ಗೋವಿನಲ್ಲಿ) ನೆಲೆಸಿವೆ ಎಂದು ಪುರಾಣಗಳು ಸಾರಿ ಹೇಳುತ್ತಿವೆ.

 

 

ಇನ್ನು ಗೋವಿನ ಹಿಂಡು ಗೋವುಗಳು ಅಥವಾ ಗೋವೇ ಎಲ್ಲೇ ನಮಗೆ ಎಲ್ಲಿಲ್ಲದ ಆನಂದ.ಏಕೆಂದರೆ ಗೋವಿನ ಆಗಮನ, ದರ್ಶನ ಶುಭಸೂಚಕ ಮಂಗಳ ಪ್ರದ ಎನ್ನುತ್ತಾರೆ ಪಂಡಿತೋತ್ತಮರು. ಅದಕ್ಕೆ ಅದು ಎಲ್ಲೇ ಕಾಣಲಿ ನಮಸ್ಕರಿಸುವುದು ಅದರ ಕಾಲು ಮುಟ್ಟಿ,ಬೆನ್ನು ಸವರಿ ಪ್ರಾರ್ಥಿಸುವುದು ನಮಗೆ ಗೊತ್ತಿಲ್ಲದೇ ಮಾಡುತ್ತ ಬಂದಿರುವಂತ ಒಂದು ದಿನಚರಿಯಾಗಿದೆ.ಹಾಗೆ ನಾವು ಗೊತ್ತಿಲ್ಲದೇ ಮಾಡಿದರು ಸಹ ನಮ್ಮ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತವೆ ಈ ಗೋಮಾತೆ.ಹಾಗೆಯೆ ಗೋವಿಗೆ ಆಹಾರವನ್ನು ತಿನ್ನಿಸುತ್ತ ಅದರ ಕಿವಿಯಲ್ಲಿ ನಮ್ಮ ಇಷ್ಟಾರ್ಥಗಳನ್ನು ಹೇಳಿದರೆ ಸಾಕು ತಕ್ಷಣವೇ ನೆರವೇರುವಂತೆ ನಮಗೆ ಇಷ್ಟಾರ್ಥಗಳನ್ನ ನೆರವೇರಿಸುತ್ತದೆ ಈ ಕಾಮಧೇನು.ಇದು ಎಲ್ಲರಿಗೂ ತಿಳಿದಿರುವಂತ ವಿಶಯವೆ.

ಅನಾರೋಗ್ಯದಾಸಮಸ್ಯೆಯಿಂದ ಬಳಲುತ್ತಿರುವವರು ಗೋಮಾತೆಯ ಬಾಲದಲ್ಲಿರುವ ಒಂದು ಕೂದಲನ್ನು ತೆಗೆದುಕೊಂಡು ಅದನ್ನು ನಿಮ್ಮ ಹೆಬ್ಬೆಟ್ಟಿಗೆ ಸುತ್ತಿಕೊಂಡು ನಿಮ್ಮ ಶರೀರದಲ್ಲಿ ಯಾವ ಭಾಗದಲ್ಲಿ ನೋವಿದೆಯೋ ಅಲ್ಲಿ ಅದನ್ನ ಅಂದರೆ ಕೂದಲು ಸುತ್ತಿರುವ ಹೆಬ್ಬೆಟ್ಟನ್ನು ಗಟ್ಟಿಯಾಗಿ ಒಳಗೆ ಹೋಗುವಂತೆ ಒತ್ತಬೇಕು.ಹೀಗೆ ಮೂರು ಭಾರಿ ಮಾಡಬೇಕು ಕ್ರಮೇಣ ಆ ನೋವು ಕಡಿಮೆಯಾಗಿ ಮಾಯವಾಗುತ್ತದೆ.ಒಂದು ವೇಳೆ ಆ ನೋವು ಅಲ್ಪಸ್ವಲ್ಪ ನೋವು ಇದೆ ಅಂತ ಎನಿಸಿದರೆ ಎರಡನೇ ದಿನ ಹಾಗು ಮೂರನೇ ದಿನವೂ ಸಹ ಹೀಗೆ ಮಾಡಿದ್ದಲ್ಲಿ ಎಂತಹದ್ದೇ ನೋವಾಗಿರಲಿ ಕ್ರಮೇಣ ಕಡಿಮೆಯಾಗುತ್ತದೆ.

ಅಷ್ಟೇ ಅಲ್ಲ ನಾವು ನೋಡಬಹುದು ಕೆಲವು ಜನ ಸ್ವಾಮೀಜಿಗಳ ಬಳಿಯಲ್ಲಿ ಸಾಧುಸಂತರ ಬಳಿಯಲ್ಲಿ ಈ ಗೋವಿನ ಕೂದಲಿನಿಂದ ಮಾಡಿದ ದಾರ ಕೈಗೆ ಸುಟ್ಟಿಕೊಂಡಿರುವುದು ಕಾಣಬರುತ್ತದೆ.ಆದ್ದರಿಂದ ಅವರ ಬಳಿ ಯಾರೇ ಹೋಗಲಿ ನಮಸ್ಕರಿಸಿದಾಗ ಆಶೀರ್ವಾದಕ್ಕೆ ತಲೆಯ ಮೇಲೆ ಅಥವಾ ಬೆನ್ನ ಮೇಲೆ ಕೈ ಇಟ್ಟಾಗ ನಮಗೆ ಗೊತ್ತಿಲ್ಲದೇ ಆ ಕೂದಲಿನ ಶಕ್ತಿಯಿಂದ ಆ ಮನುಷ್ಯನಲ್ಲಿ ಪಾಸಿಟಿವ್ ಎನರ್ಜಿ ಪ್ರವೇಶ ಮಾಡುತ್ತದೆ. ಆದ್ದರಿಂದ ಯಾವುದೇ ಬಗೆಯ ಸಮಸ್ಯೆಗಳಾಗಿರಲಿ ಅಳಿಸಿಹೋಗುತ್ತವೆ.ಅಂದರೆ ನಿವಾರಣೆ ಹೊಂದಿ ಒಳ್ಳೆಯದಾಗುತ್ತದೆ.ಅದ್ಕಕೆ ನಮ್ಮ ಹಿರಿಯರು ಮಕ್ಕಳಾಗಲಿ ಹಿರಿಯರಾಗಲಿ ಹುಡುಗರಿಗಾಗಲಿ ನಾರಾ ದೃಷ್ಟಿ ತಗಲಿದಾಗ ಅಕಾಲ ಬಲದಿಂದ ದೃಷ್ಟಿ ಇಳಿಸುವುದು ನಮಗೆಲ್ಲ ಗೊತ್ತಿರುವುದೇ.ಅಷ್ಟೇ ಅಲ್ಲ ಅದರ ಬಾಲದ ಕೂದಲನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕುಂಕುಮ ಸೇರಿಸಿ ಚಿಕ್ಕ ಯಂತ್ರ ಒಂದರಲ್ಲಿ ಹಾಕಿ ಅದನ್ನ ಶರೀರದ ಮೇಲೆ ಧರಿಸಿದರೆ ಜನ್ಮದಲ್ಲಿ ಯಾವುದೇ ಬಗೆಯ ದೃಷ್ಟಿ ತಗಲುವುದಿಲ್ಲದೃಷ್ಟಿಭಾದೆಯಿಂದ ಬಳಲುವುದಿಲ್ಲ ಏನು ಹೇಳುತ್ತಾರೆ ಹಿರಿಯರು.

 

ಹೀಗೆ ಆಕಳಿನ ಕೂದಲಿನ ಮಹತ್ವ ಅಷ್ಟು ಅಮೋಘವಾದದ್ದು.ಇದನ್ನು ಅರಿತು ನಡೆದುಕೊಂಡರೆ ಸಾಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top