fbpx
ದೇವರು

ಈ 3 ದೀಪವನ್ನು ನವೆಂಬರ್ 7 ನೇ ತಾರೀಖು ದೀಪಾವಳಿಯ ಅಮವಾಸ್ಯೆಯ ದಿನ ಹಚ್ಚಿದರೆ ಐಶ್ವರ್ಯ,ಸಂಪತ್ತು ಪ್ರಾಪ್ತಿಯಾಗುತ್ತದೆ.

ದೀಪಾವಳಿಯ ಅಮವಾಸ್ಯೆಯ ದಿನ ನಾವು ಐಶ್ವರ್ಯ ಪ್ರಾಪ್ತಿಗಾಗಿ, ಧನ ಪ್ರಾಪ್ತಿಗಾಗಿ ದೀಪಗಳನ್ನು ಹಚ್ಚಬೇಕು. ಎಷ್ಟು ದೀಪಗಳನ್ನು ಎಲ್ಲಿ ಹಚ್ಚಬೇಕು ? ದೀಪಗಳನ್ನು ಹಚ್ಚಿಟ್ಟು ಎಲ್ಲಿ ಇಡಬೇಕು ? ಎಂದು ಈಗ ನಾವು ತಿಳಿದುಕೊಳ್ಳೋಣ.

ಶ್ರೀ ಮಹಾಲಕ್ಷ್ಮಿ ದೇವಿಯ ಕಟಾಕ್ಷ ಇದ್ದರೆ ಸಾಕು, ಆರ್ಥಿಕ ಪರಿಸ್ಥಿತಿಗಳು ತುಂಬಾ ಚೆನ್ನಾಗಿರುತ್ತದೆ. ಆದ್ದರಿಂದ ಈ ದೀಪಾವಳಿಯ ಅಮವಾಸ್ಯೆಯ ದಿನ ತುಂಬಾ ಶ್ರದ್ಧೆ, ಭಕ್ತಿಯಿಂದ ಲಕ್ಷ್ಮಿ ದೇವಿಯ ಆರಾಧನೆ ಹೇಗೆ ಮಾಡುತ್ತೇವೆಯೋ ? ಅಷ್ಟೇ ಶ್ರದ್ದೆಯಿಂದ ಈ ಮೂರು ದೀಪಗಳನ್ನು ಹಚ್ಚಬೇಕು. ಈ ದೀಪಗಳು ನಿಮಗೆ ಅಷ್ಟೈಶ್ವರ್ಯಗಳನ್ನು ಸಿರಿ, ಸಂಪತ್ತು ಧನಪ್ರಾಪ್ತಿಯನ್ನು ತಂದು ಕೊಡುತ್ತವೆ. ಮೊದಲಿಗೆ 3 ಮಣ್ಣಿನ ದೀಪಗಳನ್ನು ತೆಗೆದುಕೊಳ್ಳಬೇಕು. ಪಿತೃ ದೇವತೆಗಳು ಅನುಗ್ರಹಕ್ಕೋಸ್ಕರ, ಲಕ್ಷ್ಮಿ ದೇವಿಯ ಅನುಗ್ರಹಕ್ಕೋಸ್ಕರ ಮತ್ತು ಅಪಮೃತ್ಯುವಿನಿಂದ ಪಾರಗಬೇಕೆಂದು ದೀಪಗಳನ್ನು ಹಚ್ಚುವುದು ನಮ್ಮ ಆಚಾರ ವಾಗಿದೆ.ಆ ದೀಪಗಳನ್ನು ಹೇಗೆ ? ಎಲ್ಲಿ ಹಚ್ಚಿ ಇಡಬೇಕು ? ಅಂದರೆ ಮೂರು ದೀಪಗಳಿಂದ 9 ಬತ್ತಿಗಳನ್ನು ಹಚ್ಚಬೇಕು.

 

 

 

ಈ ಮಣ್ಣಿನ ದೀಪಗಳಲ್ಲಿ ಹಸುವಿನ ತುಪ್ಪ ಮತ್ತು ತೆಂಗಿನಕಾಯಿ ಎಣ್ಣೆಯಿಂದ ದೀಪಾರಾಧನೆ ಮಾಡಿದರೆ ತುಂಬಾ ಶ್ರೇಷ್ಠ.ಸ್ವಲ್ಪ ಕರಿ ಎಳ್ಳನ್ನು ತೆಗೆದುಕೊಂಡು ನೆಲದ ಮೇಲೆ ಹಾಕಿ, ಒಂದು ಮಣ್ಣಿನ ದೀಪವನ್ನು ಇಟ್ಟು 3 ಬತ್ತಿಗಳಿಂದ ದೀಪಾರಾಧನೆ ಮಾಡಬೇಕು. ಇದು ಪಿತೃ ದೇವತೆಗಳಿಗೆ ಸೇರುತ್ತದೆ,ಅವರ ಅನುಗ್ರಹ ಪಡೆಯಲು ಹೀಗೆ ದೀಪಾರಾಧನೆ ಮಾಡಬೇಕು. ಹೀಗೆ ದೀಪಾರಾಧನೆ ಮಾಡುವುದರಿಂದ ವಂಶಾಭಿವೃದ್ಧಿಯಾಗುತ್ತದೆ.ಸ್ವಲ್ಪ ಉಪ್ಪನ್ನು ನೆಲದ ಮೇಲೆ ಹಾಕಿ ಎರಡನೇ ದೀಪವನ್ನು ಇಟ್ಟು 3 ಬತ್ತಿಗಳಿಂದ ದೀಪಾರಾಧನೆ ಮಾಡಬೇಕು. ಇದು ಅಪಮೃತ್ಯುವಿನ ದೋಷಗಳನ್ನು ತೊಲಗಿಸುತ್ತದೆ, ಇದರಿಂದ ಮೃತ್ಯು ಗಂಡಾಂತರವಿದ್ದರೂ ಸಹ ಅದು ಕೂಡ ದೂರವಾಗುತ್ತದೆ.
ಕೆಲವು ದಾನ್ಯಗಳನ್ನು ತೆಗೆದುಕೊಂಡು ನೆಲದ ಮೇಲೆ ಹಾಕಿ, ಒಂದು ಮಣ್ಣಿನ ದೀಪವನ್ನು ಇಟ್ಟು 3 ಬತ್ತಿಗಳಿಂದ ದೀಪಾರಾಧನೆ ಮಾಡಬೇಕು. ಇದು ಕುಲದೇವತೆ ರಾಶ್ಯಾಧಿಪತಿಯ ಅನುಗ್ರಹವನ್ನು ನೀವು ಪಡೆಯಲು ಈ ದೀಪಾರಾಧನೆಯನ್ನು ಮಾಡಬೇಕು.

ಮನೆಯ ಯಜಮಾನರ ನಕ್ಷತ್ರವನ್ನು ತಿಳಿದುಕೊಂಡು ಆ ನಕ್ಷತ್ರಕ್ಕೆ ಅಧಿಪತಿ ಯಾರು ? ಎಂದು ತಿಳಿದುಕೊಂಡು ಆ ಅಧಿಪತಿಗೆ ಇಷ್ಟವಾದ ಧಾನ್ಯ ಏನು ? ಎಂಬುದನ್ನು ತಿಳಿದುಕೊಂಡು ಆ ಧಾನ್ಯಗಳನ್ನು ಈಗಿನ ಬ್ರಾಹ್ಮಣರಿಗೆ ದಾನ ಮಾಡಬೇಕು. ಮರುದಿನ ಮೊದಲನೇ ದೀಪದ ಕೆಳಗಿರುವ ಕರಿ ಎಳ್ಳನ್ನು ಪಕ್ಷಿಗಳಿಗೆ ಆಹಾರವಾಗಿ ನೀಡಬೇಕು. ಎರಡನೇ ದೀಪದ ಕೆಳಗಿರುವ ಉಪ್ಪನ್ನು ಗಿಡಗಳ ಕೆಳಗೆ ಹಾಕಬೇಕು. ಆದರೆ ಈ ಉಪ್ಪನ್ನು ತುಳಸಿ ಗಿಡಕ್ಕೆ ಮಾತ್ರ ಹಾಕಬಾರದು. ಧಾನ್ಯಗಳನ್ನು ಪ್ರಾಣಿ ಪಕ್ಷಿಗಳಿಗೆ ಆಹಾರವಾಗಿ ಹಾಕಬೇಕು. ಈ ವಿಧವಾಗಿ ಮಾಡುವುದರಿಂದ ಮನೆಯಲ್ಲಿರುವ ದಾರಿದ್ರ್ಯ ಹೋಗಿ ಐಶ್ವರ್ಯ ಸಿದ್ಧಿ ಪ್ರಾಪ್ತಿಯಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top