ಉಪಯುಕ್ತ ಮಾಹಿತಿ

ಬ್ಯಾಂಕ್ ಖಾತೆಯಿಂದ ಆಧಾರ್ ನಂಬರ್ ಡಿ-ಲಿಂಕ್ ಮಾಡಿಸೋದು ಹೇಗೆ ಗೊತ್ತಾ?

ಆಧಾರ್ ಸಿಂಧುತ್ವದ ಕುರಿತು ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ್ದು ಸರಕಾರದ ವಿವಿಧ ಸೇವೆಗಳಿಗೆ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಬೇಕೋ ಅಥವಾ ಬೇಡವೋ ಎಂಬ ಗೊಂದಲಗಳಿಗೆ ಸುಪ್ರೀಂಕೋರ್ಟ್ ತೆರೆ ಎಳೆದಿದ್ದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐದು ಸದಸ್ಯರ ಸಾಂವಿಧಾನಿಕ ಪೀಠ ಆಧಾರ್ ಕಡ್ಡಾಯವಲ್ಲ ಎಂಬ ಮಹತ್ವದ ತೀರ್ಪು ನೀಡಿದೆ..

ಶಿಕ್ಷಣ ಸಂಸ್ಥೆ,ಮೊಬೈಲ್ ಸಿಮ್, ಬ್ಯಾಂಕ್‍ಗಳಲ್ಲಿ ಆಧಾರ್ ಕಡ್ಡಾಯವಲ್ಲ ಎಂದು ಹೇಳಿರುವ ಕೋರ್ಟ್, ಸರ್ಕಾರದ ಯೋಜನೆಗಳಿಗೆ ಮಾತ್ರ ಆಧಾರ್ ಕಡ್ಡಾಯ ಎಂದು ಸ್ಪಷ್ಟಪಡಿಸಿದೆ. ಪ್ರಮುಖ ಪರೀಕ್ಷೆಗಳಾದ CBSC, NEET ನಂತಹ ಪರೀಕ್ಷೆಗಳಲ್ಲಿ ಆಧಾರ್ ಕಡ್ಡಾಯಗೊಳಿಸುವಂತಿಲ್ಲ ಅಂತೆಯೇ ಸರ್ಕಾರಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲ ಆಸ್ಪತ್ರೆಗಳಲ್ಲಿ ಆಧಾರ್ ಕಾರ್ಡ್ ಇಲ್ಲ ಎಂದು ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

ಬ್ಯಾಂಕುಗಳಿಗೆ ಆಧಾರ್ ಲಿಂಕ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿರುವ ಹಿನ್ನಲೆಯಲ್ಲಿ ಜನರು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗಳಿಂದ ಡಿಲಿಂಕ್ ಮಾಡುವ ಬಗ್ಗೆ ಯೋಚಿಸುತ್ತಿದ್ದಾರೆ.. ಹಾಗಾಗಿ ನಿಮ್ಮ ಆಧಾರ್ ಅನ್ನು ಬ್ಯಾಂಕ್ ಖಾತೆಯಿಂದ ಡಿಲಿಂಕ್ (Delink) ಮಾಡಲು ಇಚ್ಛಿಸಿದರೆ ಈ ಹಂತಗಳನ್ನು ಅನುಸರಿಸಿ.

ಬ್ಯಾಂಕ್ ಖಾತೆಯಿಂದ ಆಧಾರ್ ಡಿಲಿಂಕ್ ಮಾಡಿಸುವ ವಿಧಾನ.

ಹಂತ 1: ನೀವು ಖಾತೆಯನ್ನು ಹೊಂದಿರುವ ಬ್ಯಾಂಕ್ ಶಾಖೆಗೆ ಭೇಟಿ ಕೊಡಿ.

ಹಂತ 2: ಗ್ರಾಹಕ ಸೇವಾ ಕೌಂಟರ್ ನಿಂದ, ಆಧಾರ್ ಅನ್ನು ಡಿಲಿಂಕ್ ಮಾಡುವ ಅರ್ಜಿಯನ್ನು ಪಡೆಯಿರಿ.

ಹಂತ 3: ಅರ್ಜಿಯನ್ನು ಸರಿಯಾದ ಮಾಹಿತಿಗಳೊಂದಿಗೆ ಭರ್ತಿ ಮಾಡಿ ಸಂಬಂಧಪಟ್ಟವರಿಗೆ ಸಲ್ಲಿಸಿ.

ನೀವು ಅರ್ಜಿಯನ್ನು ಸಲ್ಲಿಸಿದ 48 ಗಂಟೆಗಳೊಳಗೆ ನಿಮ್ಮ ಆಧಾರ್ ನ್ನು ಬ್ಯಾಂಕ್ ಖಾತೆಯಿಂದ ಡಿಲಿಂಕ್ ಮಾಡಲಾಗುತ್ತದೆ.. ನಿಮ್ಮ ಆಧಾರ್ ಅನ್ನು ಬ್ಯಾಂಕ್ ಖಾತೆಯನ್ನು ಡಿಲಿಂಕ್ ಮಾಡಲಾಗಿದೆಯೇ ಎಂದು ಪರಿಶೀಲಿಸಲು, ನೀವು ಬ್ಯಾಂಕ್ ಶಾಖೆಗೆ ಫೋನ್ ಮಾಡಿ ವಿಚಾರಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top