ಆರೋಗ್ಯ

ಕುರ ಏನಾದ್ರು ಅಪ್ಪಿ ತಪ್ಪಿ ಆದ್ರೆ ಕುತ್ಕೊಳ್ಳೋಕೆ ನಿಂತ್ಕೊಳ್ಳೋಕೆ ಆಗಲ್ಲ ಅನ್ನೋರು ಈ ಮನೆಮದ್ದು ಮಾಡ್ಕೊಂಡು ಸರಿ ಮಾಡ್ಕೋಬಹುದು

ಕುರದ ಸಮಸ್ಯೆಯಿಂದ ಬಳಲುತ್ತಿರೋರು ಈ ಮನೆ ಮದ್ದು ಮಾಡ್ಕೊಂಡು ಸರಿ ಮಾಡ್ಕೋಬಹುದು

ಬೇವಿನ ಎಲೆ ಹಾಗು ಅರಿಶಿನ ಪುಡಿಯನ್ನು ಸೇರಿಸಿ ನುಣ್ಣಗೆ ಅರೆದು ಕುರ ಆಗಿರುವ ಜಾಗಕ್ಕೆ ಹಚ್ಚಿ.

 

 

 

ಉದ್ದಿನ ಬೆಳೆಯನ್ನು ರಾತ್ರಿ ಇಡೀ ನೆನೆಹಾಕಿ , ಬೆಳಗ್ಗೆ ನುಣ್ಣಗೆ ರುಬ್ಬಿ ಕುರ ಆಗಿರುವ ಜಾಗಕ್ಕೆ ಹಚ್ಚಿ , ಕುರ ಹಣ್ಣಾಗಿ ಒಡೆದು ಹೋಗುತ್ತದೆ , ಎರಡು ದಿನಗಳಲ್ಲಿ ನೋವು ಕೂಡ ಕಡಿಮೆಯಾಗುತ್ತದೆ.ವೀಳ್ಯದ ಎಲೆಯನ್ನು ಸ್ವಲ್ಪ ಬಿಸಿ ಮಾಡಿ ಕಟ್ಟಿ ಕುರ ಹಣ್ಣಾಗಿ ಒಡೆದು ಹೋಗುತ್ತದೆ , ಎರಡು ದಿನಗಳಲ್ಲಿ ನೋವು ಕೂಡ ಕಡಿಮೆಯಾಗುತ್ತದೆ.ಕುರಕ್ಕೆ ಬೆಣ್ಣೆ ಹಚ್ಚಿ ಬಿಸಿ ನೀರಲ್ಲಿ ಬಟ್ಟೆ ಅಡ್ಡಿ ಕುರಕ್ಕೆ ಶಾಖ ಕೊಡುವುದರಿಂದ ಬೇಗ ಹಣ್ಣಾಗಿ ಒಡೆಯುತ್ತೆ.ರಾಗಿ ಹಿಟ್ಟನ್ನು ಚೆನ್ನಾಗಿ ಬಿಸಿ ನೀರಿನಲ್ಲಿ ಬೇಯಿಸಿ ಕುರ ಆಗಿರುವ ಜಾಗಕ್ಕೆ ಹಚ್ಚಿ ಹೀಗೆ ಎರಡು ದಿನ ಮಾಡಿದರೆ ಕುರ ಒಡೆದು ಹೋಗುತ್ತದೆ.ಸ್ವಲ್ಪ ಮೆಂತ್ಯೆಯನ್ನು ರಾತ್ರಿ ಇಡೀ ನೆನೆಹಾಕಿ ಬೆಳಗ್ಗೆ ಐಶಿನ ಬೆರೆಸಿ ನುಣ್ಣಗೆ ರುಬ್ಬಿ ಕುರ ಆಗಿರುವ ಜಾಗಕ್ಕೆ ಹಚ್ಚಿ ಹೀಗೆ ಎರಡು ದಿನ ಮಾಡಿದರೆ ಕುರ ಒಡೆದು ಹೋಗುತ್ತದೆ.ಕುರದ ಸಮಸ್ಯೆಗೆ ವಿಭೂತಿಗಿಡದ ಎಲೆಗಳಿಗೆ ಹರಳೆಣ್ಣೆ ಬಳಿದು ನಂತರ ೩ನಿಮಿಷ ಸುಟ್ಟು ಪಟ್ಟು ಹಾಕಿದರೆ ವಾಸಿಯಾಗುತ್ತದೆ.

 

 

 

ಕೀವು ಕಟ್ಟಿರುವ ಚರ್ಮದ ಭಾಗಗಳನ್ನು ಸರಿಪಡಿಸಲು ಬಳಸಲಾಗುತ್ತದೆ, ಉರಿಯೂತ(ಬೊಯ್ಲ್ಸ್), ಗಂಟಿನಿಂದ ದೊಡ್ಡದಾಗಿರುವ ಗ್ರಂಥಿಗಳು(lymph-nodes ), ಕುರವು ,ಕೀವಿನಿಂದ ಉಂಟಾದ ದೊಡ್ಡ ಬೊಬ್ಬೆಗಳು,ಗಾಯಗಳು, ಮೂಗೇಟುಗಳು, ಮತ್ತು ಚರ್ಮದ ಅಲರ್ಜಿ ಚಿಕಿತ್ಸೆಗೆ ಬಳಸಲಾಗುತ್ತದೆ.ಚರ್ಮದ ಮೇಲೆ ಉಂಟಾದ ಸತ್ತ ಜೀವಕೋಶಗಳ ಬೊಬ್ಬೆಯನ್ನು ತೆಗೆದುಹಾಕಲು ಬಳಸಲಾಗುತ್ತದೆ.ಬಾಳೆ ದಿಂಡಿನ ಪಲ್ಯ ಮಾಡಿ ತಿನ್ನಬೇಕು.ಶಂಖವನ್ನು ನಿಂಬೆರಸದಲ್ಲಿ ತೇದು ಹಚ್ಚಿದರೆ ಕುರ ಒಡೆದುಮಾಯುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top