ದೇವರು

ಧನಪ್ರಾಪ್ತಿಗೆ ಕರಿ ಮೆಣಸು ಹಾಗೂ ಉಪ್ಪಿನ ಪೂಜೆ

ನಾವು ಅಂದುಕೊಂಡ ಹಾಗೆ ಕೆಲಸ ವೇಗವಾಗಿ,ಬೇಗನೆ ಆಗಬೇಕು ಎಂದು ಕೆಲವರು ಮನೆಯಲ್ಲಿ ಪ್ರತಿದಿನ ದೇವರಿಗೆ ಪೂಜೆಯನ್ನು ಮಾಡುತ್ತಾರೆ.ಇನ್ನೂ ಕೆಲವರು ದೇವಸ್ಥಾನಕ್ಕೆ ಹೋಗಿ ಬೇಡಿಕೊಳ್ಳುತ್ತಾರೆ ಮತ್ತೆ ಕೆಲವರು ಸಮಯವಿಲ್ಲದೆ ಮಾನಸಿಕ  ಒತ್ತಡಕ್ಕೆ ಒಳಗಾಗುತ್ತಾ ಇರುತ್ತಾರೆ.ಈಗ ಇಲ್ಲಿ ಹೇಳುವ ನಿಯಮವನ್ನು ಪಾಲಿಸಿದರೆ,ನೀವು ಅಂದುಕೊಂಡ ಕೆಲಸಗಳು ಬೇಗ ಆಗಿ ಧನಪ್ರಾಪ್ತಿಯಾಗುತ್ತದೆ.

 

 

 

ಒಂದೂವರೆ ಕೆ.ಜಿ. ಕಲ್ಲು ಉಪ್ಪುನ್ನು ಮತ್ತು 50 ಗ್ರಾಂ ಕರಿಮೆಣಸಿನ  ಕಾಳನ್ನು ತಾಜಾವಾಗಿ ಮನೆಗೆ ತೆಗೆದುಕೊಂಡು ಬರಬೇಕು.ಈ 50 ಗ್ರಾಂ ಕರಿಮೆಣಸಿನ ಕಾಳನ್ನು ಹಸಿರು ವಸ್ತ್ರದಲ್ಲಿ ಮತ್ತು ಒಂದೂವರೆ ಕೆ.ಜಿ. ಕಲ್ಲು ಉಪ್ಪನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿ 11 ದಿನಗಳ ಕಾಲ ಇಟ್ಟು ಪೂಜೆ ಮಾಡಬೇಕು ,ಯಾವುದೇ ಸಮಯದಲ್ಲಿಯೂ ಸಹ ಇದನ್ನು ತೆಗೆಯಬಾರದು.11 ದಿನಗಳ ಕಾಲ ಧೂಪ,ದೀಪ,ನೈವೇದ್ಯ ಸಮರ್ಪಿಸುವಾಗ  ಕಾಲ ಭೈರವೇಶ್ವರ  ಸ್ವಾಮಿಯನ್ನು ಪ್ರಾರ್ಥಿಸಬೇಕು.ಹೀಗೆ ಪ್ರಾರ್ಥನೆ ಮಾಡುವಾಗ  “ಓಂ ಕಾಲ ಭೈರವಾಯ ನಮಃ” ಎಂಬ ಮಂತ್ರವನ್ನು ಪಠಿಸಬೇಕು.ಹೀಗೆ 11 ದಿನಗಳ ಕಾಲ  ಪೂಜೆ ಮಾಡಿದ ನಂತರ ಬಟ್ಟೆಯಲ್ಲಿ  ಕಟ್ಟಿ ಇಟ್ಟಿರುವ ಕಲ್ಲು ಉಪ್ಪು ಮತ್ತು ಕರಿ ಮೆಣಸಿನ ಕಾಳನ್ನು ತೆಗೆದು ಅದನ್ನು ಪ್ರತಿದಿನ ನಾವು ಮಾಡುವ ಅಡುಗೆಯಲ್ಲಿ ಬಳಸಬೇಕು.ಈ ಕಲ್ಲು ಉಪ್ಪು ಮತ್ತು ಕರಿಮೆಣಸಿನ ಕಾಳು ಮುಗಿಯುವವರೆಗೂ ಹೊಸ ಉಪ್ಪು ಮತ್ತು ಹೊಸ ಕರಿಮೆಣಸನ್ನು ಬಳಸಬಾರದು.ಎಷ್ಟು ದಿನಗಳ ಕಾಲ ಇದು ಬಂದರೆ ಅಷ್ಟು ದಿನಗಳ ಕಾಲ ಉಪಯೋಗಿಸಬೇಕು.ಹೀಗೆ ಈ ನಿಯಮಗಳನ್ನು ಅನುಸರಿಸಿದರೆ ನಾವು ಅಂದುಕೊಂಡ ಕೆಲಸಗಳು ತ್ವರಿತವಾಗಿ,ವೇಗವಾಗಿ ಬೇಗನೆ  ಆಗುವುದು ಅಷ್ಟೇ ಅಲ್ಲದೆ  ಇದರ ಜೊತೆಗೆ ಧನಪ್ರಾಪ್ತಿಯೂ ಸಹ ಆಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top