ಸಮಾಚಾರ

ವಿವಾದದ ಕಿಡಿ ಹೊತ್ತಿಸಿದ ವಿರಾಟ್ ಕೊಹ್ಲಿ ಹೇಳಿಕೆ- ವಿಡಿಯೋ ವೈರಲ್​

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ವಿವಾದ ಒಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಹುಟ್ಟುಹಬ್ಬದ ದಿನ ಕೊಹ್ಲಿ ಆ್ಯಪ್ ಬಿಡುಗಡೆ ಮಾಡಿದ್ದರು. ಇದೀಗ ಈ ಆ್ಯಪ್ ಮೂಲಕ ಬಂದ ಪ್ರಶ್ನೆಗೆ ಉತ್ತರಿಸುವ ವೇಳೆ ಕೊಹ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.

 

 

ತನ್ನ ಅಫಿಶಿಯಲ್ ಆ್ಯಪ್ ಗಾಗಿ ಸೆಶನ್ ಒಂದನ್ನು ರೆಕಾರ್ಡ್ ಮಾಡುತ್ತಿದ್ದಾಗ ಒಬ್ಬರ ಕಾಮೆಂಟ್ ಓದಿದ್ದಾರೆ. “ನನಗೆ ಅವರ (ಕೊಹ್ಲಿ) ಬ್ಯಾಟಿಂಗ್ ನಲ್ಲಿ ವಿಶೇಷವೇನೂ ಕಂಡಿಲ್ಲ. ನಾನು ಭಾರತೀಯರಿಗಿಂತ ಇಂಗ್ಲಿಷ್ ಮತ್ತು ಆಸ್ಟ್ರೇಲಿಯನ್ ಬ್ಯಾಟ್ಸ್ ಮ್ಯಾನ್ ಗಳನ್ನು ಇಷ್ಟಪಡುತ್ತೇನೆ” ಎಂಬ ಕಾಮೆಂಟನ್ನು ಕೊಹ್ಲಿ ಓದಿದ್ದಾರೆ.

ನಂತರ ಇದಕ್ಕೆ ಪ್ರತಿಕ್ರಿಯಿಸಿದ ಭಾರತ ತಂಡದ ನಾಯಕ, “ಪರವಾಗಿಲ್ಲ, ಆದರೆ ನೀವೇಕೆ ಭಾರತದಲ್ಲಿ ವಾಸವಾಗಿದ್ದೀರಿ ಎಂದು ಅರ್ಥವಾಗುತ್ತಿಲ್ಲ. ನಮ್ಮ ದೇಶದಲ್ಲಿ ಇದ್ದು ಇನ್ನೊಂದು ದೇಶವನ್ನು ಪ್ರೀತಿಸುವ ಬದಲು, ಅಲ್ಲಿಯೇ ಹೋಗಬಹುದಲ್ಲ. ನೀವು ನನ್ನನ್ನು ಇಷ್ಟಪಡುತ್ತಿಲ್ಲ ಎಂಬ ಕಾರಣಕ್ಕೆ ನನಗೇನೂ ಬೇಸರವಿಲ್ಲ. ಆದರೆ ನಮ್ಮ ದೇಶದಲ್ಲಿ ಯಾಕಿದ್ದೀರಾ? ನಿಮ್ಮ ಆದ್ಯತೆಗಳನ್ನು ಸರಿಯಾಗಿ ಗುರುತಿಸಿಕೊಳ್ಳಿ” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top