fbpx
ದೇವರು

ನಿಮ್ಮ ಜೀವನದಲ್ಲಿ ಕಷ್ಟಗಳಿದ್ದರೆ ದುರ್ಗಾದೇವಿಗೆ ಇದನ್ನು ಅರ್ಪಿಸಿದರೆ ಸಾಕು ಶುಭ ಫಲಗಳು ನಿಶ್ಚಿತ

ದುರ್ಗಾ ದೇವಿಗೆ ಈ ಒಂದು ವಸ್ತುವನ್ನು ಅರ್ಪಿಸಿದರೆ ಸಾಕು, ನಿಮ್ಮ ಜೀವನದಲ್ಲಿರುವ ಸಂಕಷ್ಟಗಳೆಲ್ಲವೂ ಸಹ ದೂರವಾಗುತ್ತವೆ.ವೀಳ್ಯದೆಲೆಯ ಹಾರವನ್ನು ದುರ್ಗಾದೇವಿಗೆ ಹಾಕಿ, ಪೂಜೆ ಮಾಡಿಸುವುದರಿಂದ ಯಾವ ರೀತಿಯಾಗಿ ಫಲವನ್ನು ಕಾಣಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

7 ಮಂಗಳವಾರ ವೀಳ್ಯದೆಲೆಯ ಹಾರ:ಯಾರು ಒಬ್ಬರೇ ಇರುವಾಗ ತುಂಬಾ ಭಯ ಪಡುತ್ತಾರೆ, ಒಬ್ಬರೇ ಮಾತನಾಡಿಕೊಳ್ಳುತ್ತಾರೆ, ಅಥವಾ ಒಬ್ಬರೇ ನಗುತ್ತಿರುತ್ತಾರೆ, ಸಾರ್ವಜನಿಕರಲ್ಲಿ ಮಾತನಾಡುವಾಗ ಭಯವಾದರೆ ಹಾಗೂ ಮಾತನಾಡುವಾಗ ತೊಡಲುತ್ತಿದ್ದರೆ, ಒಬ್ಬರೇ ಒಂಟಿಯಾಗಿ ಕುಳಿತು ತುಂಬಾ ಯೋಚನೆ ಮಾಡುವುದು, ಮನಸ್ಸಿನೊಳಗೆ ತುಂಬಾ ದುಃಖ ಪಡುವುದು, ಇವೆಲ್ಲವೂ ಇದ್ದರೆ ಎಲ್ಲರೂ ಇದ್ದರೂ ಯಾರು ಇಲ್ಲ ? ಎನ್ನುವ ಭಾವನೆ ಕಾಡುತ್ತಿದ್ದರೆ, ಜೀವನ ಸಾಕು ಸತ್ತು ಹೋಗಿ ಬಿಡೋಣ ಎನಿಸುತ್ತಿದ್ದರೆ, ತಪ್ಪದೇ ಶ್ರೀ ದುರ್ಗಾ ದೇವಿಗೆ 7 ಮಂಗಳವಾರದ ದಿನ ವೀಳ್ಯದೆಲೆಯ ಹಾರವನ್ನು ಹಾಕಿಸಬೇಕು.

 

 

 

9 ಮಂಗಳವಾರ ದುರ್ಗಾ ವೀಳ್ಯದೆಲೆಯ ಹಾರ:ಪ್ರಾರ್ಥನೆ ಮಾಡಿ ಫಲ ಹಾಗೂ ತಾಂಬೂಲವನ್ನು, ನೈವೇದ್ಯ ಮಾಡಿಸಿ ಸುಮಂಗಲಿಯರಿಗೆ ತಾಂಬೂಲವನ್ನು ದಾನ ಮಾಡಿದರೆ, ಸರ್ವ ದೋಷಗಳು ಸಹ ನಿವಾರಣೆಯಾಗುತ್ತವೆ. ದುರ್ಗಾದೇವಿಗೆ ವೀಳ್ಯದೆಲೆಯ ಹಾರ ತುಂಬಾ ವಿಶೇಷವಾಗಿರುತ್ತದೆ. ಆಗಿದ್ದರೆ ಜ್ಞಾಪಕ ಶಕ್ತಿ , ಬುದ್ಧಿಶಕ್ತಿ ಕಡಿಮೆ ಇದ್ದರೆ, ತಲೆಯಲ್ಲಿ ನೀರು ತುಂಬಿದ್ದರೆ, ಬಾಣಂತಿಯರಲ್ಲಿ ಸನ್ನಿ ಯಾದರೆ, ದೇಹದಲ್ಲಿ ನೀರಿನಂಶ ಕಡಿಮೆಯಾದರೆ, ದೇಹದಲ್ಲಿ ಬಿಳಿಯ ರಕ್ತದ ಕಣಗಳು ಕಡಿಮೆಯಾದರೆ, ಕಣ್ಣಿನಲ್ಲಿ ನೀರು ಬರುತ್ತಿದ್ದರೆ, ದೇಹದಲ್ಲಿ ನೀರಿನಂಶ ಕಡಿಮೆಯಾದರೆ, ನಾಲಿಗೆಯು ಯಾವಾಗಲೂ ಒಣಗುತ್ತಿದ್ದರೆ, ಈ ರೀತಿಯ ದೋಷ ಉಳ್ಳವರು ಶ್ರೀ ದುರ್ಗಾ ದೇವಿಗೆ 9 ಮಂಗಳವಾರ ವೀಳ್ಯದೆಲೆಯ ಹಾರವನ್ನು ಹಾಕಿಸಬೇಕು.ಈ ರೀತಿ ಪೂಜಿಸಿ ತಾಂಬೂಲವನ್ನು ದಾನ ಮಾಡುತ್ತಾ ಬಂದರೆ ಸರ್ವ ದೋಷವು ನಿವಾರಣೆಯಾಗುತ್ತದೆ. ಆರೋಗ್ಯ ಭಾಗ್ಯವೂ ಕೂಡ ಲಭಿಸುತ್ತದೆ. ಯಾವುದೇ ತರಹದ ಶ್ರೇಯಸ್ಸಿಗಾಗಿ ದೇವಿಗೆ ಬೆಳಗಿನ ಸಮಯ ವೀಳ್ಯದೆಲೆಯ ಹಾರವನ್ನು ಹಾಕಿಸಬೇಕು.

ಯಾವುದೇ ತರಹದ ಕಾಯಿಲೆಯಿಂದ ಗುಣ ವಾಗಬೇಕಾದರೆ , ಸಾಯಂಕಾಲದ ಸಮಯದಲ್ಲಿ ವೀಳ್ಯದೆಲೆಯ ಹಾರವನ್ನು ಹಾಕಬೇಕು 22, 24, 48, 108 , 109 ಎಲೆಗಳು ಇದ್ದರೆ ತುಂಬಾ ಒಳ್ಳೆಯದು.ವೀಳ್ಯದೆಲೆ ಜೋಡಿ ಇರಬೇಕು ಅದು ಆಗದಿದ್ದರೆ, 5, 7, 9, 11 ಎಲೆಗಳ ಹಾರ ಬೇಕಾದರೂ ಹಾಕಬಹುದು. ಈ ರೀತಿಯ ನಿಯಮವನ್ನು ತಪ್ಪದೆ ಪಾಲಿಸಿದರೆ ದುರ್ಗಾ ದೇವಿಯ ಕೃಪೆಗೆ ನೀವು ಪಾತ್ರರಾಗುತ್ತೀರ. ದೇವಿಯ ಕೃಪೆಗೆ ಪಾತ್ರರಾಗಿ ನಿಮ್ಮ ಜೀವನದ ಸಕಲ ಸಂಕಷ್ಟಗಳೂ ದೂರವಾಗುವುದು ಖಚಿತ. ಒಂದು ವೀಳ್ಯದೆಲೆಯ ಹಾರ ನಿಮ್ಮ ಜೀವನವನ್ನೇ ಬದಲಾಯಿಸಬಹುದು.ಯಾರಿಗೆ ಆದರೂ ಆರೋಗ್ಯ ಸಮಸ್ಯೆ, ವಿದ್ಯಾಭ್ಯಾಸ, ಜ್ಞಾಪಕ ಶಕ್ತಿ ಇಲ್ಲದೇ ಇದ್ದರೆ, ಈ ರೀತಿ ತಪ್ಪದೇ ಮಾಡಿ. ಸಾಲ ಬಾದೆಗಳು, ಇನ್ನಿತರ ಸಮಸ್ಯೆಗಳು ಇದ್ದರೂ ಸಹ ವೀಳ್ಯದೆಲೆಯ ಹಾರವನ್ನು ದುರ್ಗಾದೇವಿಗೆ ನೀಡುತ್ತಾ ಬಂದರೆ ಸಕಲ ಫಲಗಳನ್ನು ಕಾಣುತ್ತೀರ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top