ಮನೋರಂಜನೆ

ಕಾಶಿಯಾತ್ರೆ ಶುರು ಹಚ್ಕೊಂಡ ಸ್ವೀಟಿ ಅಲಿಯಾಸ್ ರಾಧಿಕಾ ಕುಮಾರಸ್ವಾಮಿ

ನಟಿ ರಾಧಿಕಾ ಕುಮಾರಸ್ವಾಮಿ ಕಾಶಿಯಾತ್ರೆ ಮಾಡುತ್ತಿದ್ದಾರೆ. ರಾಧಿಕಾ ಈ ಯಾತ್ರೆ ಮಾಡುತ್ತಿರುವುದಾದರೂ ಯಾಕೆ ಗೊತ್ತಾ ,ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ರವರು ಯಾವುದೇ ಪಾತ್ರದಲ್ಲಿ ಅಭಿನಯ ಮಾಡಲು ಹಿಂದೇಟು ಹಾಕುವುದಿಲ್ಲ, ಭೈರಾದೇವಿ ಸ್ಕ್ರಿಪ್ಟ್ ನೀಡಲು ಹಲವು ನಿರ್ದೇಶಕರಿಗೆ ಸವಾಲಾಗಿತ್ತು, ಆದರೆ ಈ ಚಿತ್ರದ ನಿರ್ದೇಶಕರು ರಾಧಿಕಾ ಕುಮಾರ ಸ್ವಾಮಿ ಅವರಲ್ಲಿ ಆಸಕ್ತಿ ಮೂಡಿಸಿದರು.

ಅಂದಹಾಗೆ ರಾಧಿಕಾ ಈಗ ‘ಭೈರಾದೇವಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಭೈರಾದೇವಿ ಇರುವುದು ಕಾಶಿಯಲ್ಲಿ. ಹಾಗಾಗಿ ಅಲ್ಲಿಯೇ ಚಿತ್ರೀಕರಣ ಮಾಡುತ್ತಿದ್ದಾರೆ ನಿರ್ದೇಶಕರು. ಈ ಚಿತ್ರಕ್ಕೆ ಹೀರೋ ಆಗಿ ರಮೇಶ್ ನಟಿಸುತ್ತಿದ್ದು ಈಗಾಗಲೇ ರಮೇಶ್‌ ಅರವಿಂದ್‌ ನಟನೆಯ ದೃಶ್ಯಗಳನ್ನು ಕಾಶಿಯಲ್ಲಿ ಸೆರೆ ಹಿಡಿದಿದ್ದಾರಂತೆ ನಿರ್ದೇಶಕರು. ಈ ಸಿನಿಮಾದಲ್ಲಿ ರಮೇಶ್‌ ತನಿಖಾಧಿಕಾರಿಯಾಗಿ ನಟಿಸುತ್ತಿದ್ದು, ಭೈರಾದೇವಿ ಹುಡುಕಿಕೊಂಡು ಅವರು ಅಲ್ಲಿಗೆ ಹೊರಡುತ್ತಾರಂತೆ. ‘ಕಾಶಿಯ ಗಂಗಾನದಿಯಲ್ಲಿ ದಿನಕ್ಕೂ ನೂರಕ್ಕೂ ಹೆಚ್ಚು ಶವಸಂಸ್ಕಾರ ನಡೆಯುತ್ತದೆ. ಅಲ್ಲಿಯೇ ಶೂಟಿಂಗ್‌ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಮೊದಲ ಬಾರಿಗೆ ಅದನ್ನು ನಮ್ಮ ಸಿನಿಮಾದಲ್ಲಿ ತೋರಿಸುತ್ತಿದ್ದೇವೆ. ಆದಷ್ಟು ನೈಜ ಎನ್ನುವಂತೆ ದೃಶ್ಯಗಳನ್ನು ಕಟ್ಟಿಕೊಡುತ್ತಿದ್ದೇವೆ ಎಂದರುನಿರ್ದೇಶಕ ಶ್ರೀಜೈ. ಈ ಸಿನಿಮಾ ಶುರುವಾಗುವುದೇ ಕಾಶಿಯಿಂದ. ಗಂಗಾ ನದಿ ಕೂಡ ಸಿನಿಮಾದಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಲಿದೆಯಂತೆ. ಹಾಗಾಗಿಯೇ ಇಡೀ ಟೀಮ್‌ ಕಟ್ಟಿಕೊಂಡು ಕಾಶಿಯಲ್ಲಿ ಬೀಡು ಬಿಟ್ಟಿದ್ದಾರೆ ನಿರ್ದೇಶಕರು.

 

 

 

ಈಗ ಸ್ಯಾಂಡಲ್ ​ವುಡ್​ನ ಸ್ವಿಟಿ ರಾಧಿಕಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಲಾಂಗ್​ ಬ್ರೇಕ್​ನ ನಂತರ ಸಾಕಷ್ಟು ಸಿನಿಮಾಗಳನ್ನು ಮಾಡ್ತಿದ್ದಾರೆ,ಅಂದಹಾಗೇ ಮಗುವಿನ ತಾಯಿಯಾಗಿದ್ದರೂ ಬಲಕೋ ಬಳ್ಳಿಯಂತಿರುವ ರಾಧಿಕಾ, ತನಗೆ ಯಾವ ಪಾತ್ರ ಕೊಟ್ಟರೂ ಅದನ್ನು ನಿರ್ವಹಿಸೋಕೆ ರೆಡಿ ಅಂತಾರೆ. ‘ಕನ್ನಡದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ನಿರ್ಮಾಣ ಆಗುತ್ತಿರುವುದು ತೀರಾ ಕಡಿಮೆ.ಆ ಮಾದರಿಯ ಚಿತ್ರಗಳಿಗೆ ಸ್ಯಾಂಡಲ್ ವುಡ್ ನಲ್ಲಿ ಪ್ರಾಮುಖ್ಯತೆ ಕೂಡ ಕಡಿಮೆ, ಆದರೆ, ದೊಡ್ಡ ಬಜೆಟ್​ನಲ್ಲಿ ಈ ಚಿತ್ರ ಮಾಡುವುದಕ್ಕೆ ಪ್ಲಾನ್ ಮಾಡಿದ್ದಾರೆ. ರಾಧಿಕಾ ಇಂತ ಚಿತ್ರಗಳಲ್ಲಿ ಅಭಿನಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.ರಾಧಿಕಾ ಅಭಿನಯ ಅಭಿಮಾನಿಗಳಲ್ಲಿ ಭಾರೀ ಕ್ರೇಜ್​ ಹುಟ್ಟಿಸಿದೆ. ಸದಾ ನಗುತ್ತಿದ್ದ ರಾಧಿಕಾ ಮುಖದಲ್ಲಿ ,ಆ ಕೋಪ-ತಾಪ ಕಂಡಿರಲಿಕ್ಕಿಲ್ಲ, ಈವರೆಗೆ ಗ್ಲಾಮರಸ್​​ ಲುಕ್​​​ಗಳಲ್ಲಿ ಮಿಂಚಿದ್ದ ಸ್ವೀಟಿ, ‘ಭೈರಾದೇವಿ ಸಿನಿಮಾದಲ್ಲಿ ತುಂಬಾ ಡಿಫರೆಂಟ್​ ಆಗಿ ಕಾಣಿಸಿಕೊಳ್ಳಲಿದ್ದಾರೆ ಹಾಗೂ ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top