ಮನೋರಂಜನೆ

ಸಡನ್ನಾಗಿ ಕಿಚ್ಚ ಸುದೀಪ್ ಇಷ್ಟೊಂದು ಸಣ್ಣಗಾಗಲು ಅಸಲಿ ಕಾರಣವೇನು ಗೊತ್ತಾ? ಪೈಲ್ವಾನ್ ನಿರ್ದೇಶಕ ಹೇಳಿದ್ದೇನು.

ಪೈಲ್ವಾನ್ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಇದೇ ಮೊದಲ ಬಾರಿಗೆ ಕಟ್ಟುಮಸ್ತಾದ ದೇಹದಲ್ಲಿ ಕಾಣಿಸಿಕೊಂಡಿದ್ದು ಅವ್ರ ಬರ್ತಡೇಯಂದು ರಿಲೀಸ್ ಆಗಿದ್ದ ಟೀಸರ್​ನಲ್ಲಿ ಕಿಚ್ಚನ ದೇಹಾಕಾರದಲ್ಲಿ ಅದ್ಭುತ ಎಂಬಂಥಾ ಬದಲಾವಣೆಗಳಾಗಿದ್ದವು.. ಕಿಚ್ಚನ ಗುಂಡುಗುಂಡಾದ ದೇಹವನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದರು., ಪೈಲ್ವಾನ್ ಸ್ಟಾರ್ಟ್ ಆದಾಗಿನಿಂದಲೂ ಕಟ್ಟುಮಸ್ತಾದ ಬಾಡಿ ಬರಿಸಿಕೊಳ್ಳೋಕೆ ಸುದೀಪ್ ಅವರಿಂದ ಸಾಧ್ಯವೇ? ಎಂದು ಅನೇಕರು ಅನುಮಾನಪಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ಟ್ರೊಲ್ ಮಾಡಲಾಗಿತ್ತು, ಆದರೆ ಅನುಮಾನಗೊಂಡವರ ಬಾಯಿಗೆ ಟೀಸರ್ ಬೀಗ ಜಡಿಯುವಂತಿತ್ತು..

ಪೈಲ್ವಾನ್ ಟೀಸರ್ ನಲ್ಲಿ ಕಟ್ಟುಮಸ್ತಾದ ದೇಹಸಿರಿಯ ಮೂಲಕ ಮಿಂಚಿದ್ದ ಸುದೀಪ್ ಇದೀಗ ತೀರಾ ಸಣ್ಣಗಾಗಿಬಿಟ್ಟಿದ್ದಾರೆ.. ಅದು ಎಷ್ಟರ ಮಟ್ಟಿಗೆ ಎಂದರೆ ಇತ್ತೀಚಿನ ವರ್ಷಗಳಲ್ಲಿ ಅವರೆಂದೂ ಇಷ್ಟೊಂದು ಸೊರಗಿದ ಅವತಾರದಲ್ಲಿ ಕಾಣಿಸಿಕೊಂಡಿದ್ದಿಲ್ಲ. ಈ ಹಿಂದೆ ‘ವೀರ ಮದಕರಿ’ ಚಿತ್ರದ ಆಸುಪಾಸಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಾಗೆ ಸುದೀಪ್ ಸೊರಗಿದ್ದಾರೆ.. ಇಷ್ಟೊಂದು ಸೊರಗಿರೋದಕ್ಕೆ ಅವರ ಅಭಿಮಾನಿಗಳಲ್ಲಿ ಒಂದು ರೀತಿಯ ಆತಂಕ ಮೂಡಿದೆ..

ಸುದೀಪ್ ಸಡನ್ನಾಗಿ ಈ ಪಾಟಿ ಸಣ್ಣಗಾಗಿರೋದು ಯಾಕೆ? ಅವರ ಪೈಲ್ವಾನ್ ಚಿತ್ರದ ಕಾರಣಕ್ಕಾಗಿಯಾ? ಆ ಚಿತ್ರದಲ್ಲಿ ಸುದೀಪ್ ಮತ್ತೊಂದು ಶೇಡಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಎಂಬೆಲ್ಲಾ ನಾನಾ ಪ್ರಶ್ನೆಗಳು ಅವರ ಅಭಿಮಾನಿಗಳನ್ನು ಕಾಡುತ್ತಲೇ ಇದ್ದವು, ಹೀಗಿದ್ದರೂ ಯಾವುದಕ್ಕೂ ಉತ್ತರ ಸಿಕ್ಕಿರಲಿಲ್ಲ.. ಆದರೆ ಇದೀಗ ಪೈಲ್ವಾನ್ ಚಿತ್ರದ ನಿರ್ದೇಶಕ ಕೃಷ್ಣಾ ಸುದೀಪ್ ತೆಳ್ಳಗಾಗಿರುವುದು ಏಕೆ ಎಂಬ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬರ ಸುದೀಪ್ ಇಷ್ಟೊಂದು ಸಣ್ಣ ಆಗಿದ್ದೇಕೆ, ಸಿನಿಮಾದಲ್ಲಿ ಕಿಚ್ಚನದ್ದು ಎರಡು ಶೇಡ್ ಪಾತ್ರಗಳು ಇದ್ದಾವೆಯೇ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕ ಕೃಷ್ಣ ” ಹೌದು, ಅದಕ್ಕಾಗಿಯೇ ಅವರು ದೇಹ ಪರಿವರ್ತನೆಯನ್ನು ಮಾಡಿಕೊಂಡಿದ್ದಾರೆ” ಎಂದು ಉತ್ತರಿಸಿದ್ದಾರೆ. ಈ ಮೂಲಕ ಕೊನೆಗೂ ಚಿತ್ರಕ್ಕಾಗಿಯೇ ಕಿಚ್ಚ ಈ ರೀತಿ ಲುಕ್ ಬದಲಾಯಿಸಕೊಂಡಿರೋದು ಅನ್ನೋ ಸತ್ಯ ರಿವೀಲ್ ಆಗಿದೆ.

ಅಂದಹಾಗೆ ಪೈಲ್ವಾನ್ ಚಿತ್ರದಲ್ಲಿ ಕಿಚ್ಚ ಮೂರು ರೀತಿಯಲ್ಲಿ ಫೈಟ್ ಮಾಡಲಿದ್ದಾರೆ. ಒಂದು ಶೇಡ್‍ನಲ್ಲಿ ಪೈಲ್ವಾನ್ ಆಗಿ ಕಾಣಿಸ್ತಾರೆ. ಇನ್ನೊಂದ್ಕಡೆ ಮಾಮೂಲಿ ಆ್ಯಕ್ಷನ್ನೂ ಇರುತ್ತೆ. ಪೋಸ್ಟರ್‍ಗಳಲ್ಲಿ ಈಗಾಗಲೇ ರಿವೀಲ್ ಆದಂತೆ ಕಿಚ್ಚ ಬಾಕ್ಸರ್ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ. ಬಾಕ್ಸರ್ ಅವತಾರಕ್ಕೆ ಕಿಚ್ಚ ಹೀಗೆ ತೆಳ್ಳಗಾಗಿದ್ದು ಸಣ್ಣ ದೇಹದ ಫಿಟ್ ಲುಕ್‍ನಲ್ಲಿ ಮಿಂಚಲಿದ್ದಾರೆ. ಪಕ್ಕಾ ಫಿಟ್ ದೇಹದಲ್ಲಿ ಥೇಟ್ ಹಾಲಿವುಡ್ ಹೀರೋ ಥರ ಕಿಚ್ಚ ಸುದೀಪ್ ಲೀನ್ ದೇಹದಲ್ಲಿ ಕಾಣಿಸಿಕೊಳ್ಳುತ್ತಾರಂತೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top