ಮನೋರಂಜನೆ

ಗೋಲ್ಡನ್ ಸ್ಟಾರ್ ಮನೆಯಲ್ಲಿ ಗೋಲ್ಡನ್ ಕ್ವೀನ್ ನ ದೀಪಾಚರಣೆ.ಫೋಟೋ ಒಳಗಿದೆ

ಮದುವೆಯಾದ ನಂತರ ಚಿತ್ರರಂಗದಿಂದ ದೂರ ಸರಿದು ಸಂಸಾರ ತಾಪತ್ರಗಳಲ್ಲಿ ಮುಳುಗಿಹೋಗಿರುವಾಕೆ ಅಮೂಲ್ಯ. ತನ್ನ ರೂಪ ಲಾವಣ್ಯದಿಂದಲೇ ಕನ್ನಡಿಗರ ಮನೆಮಾತಾಗಿದ್ದರು ಅಮೂಲ್ಯ ,ಓದು-ಸಿನಿಮಾ ಅಂತಾ ಎರಡು ಕಡೆ ಬ್ಯಾಲೆನ್ಸ್ ಮಾಡಿಕೊಂಡು ಬರ್ತಿದ್ದ ಐಸೂ, ಮದುವೆಗೆ ಮುನ್ನ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ರು.. ವರ್ಷಕ್ಕೆ ಕಮ್ಮಿಯಂದ್ರೂ ಮೂರ್‍ನಾಲ್ಕು ಸಿನಿಮಾಗಳು ರಿಲೀಸ್ ಆಗ್ತಿದ್ವು.. ನಿಜ ಹೇಳ್ಬೇಕು ಅಂದ್ರೆ ಒಂದಷ್ಟು ಚಿತ್ರಗಳು ಅಮೂಲ್ಯಗಾಗಿನೆ ಮಾಡಿದ್ದಾರೇನೋ ಅನ್ನುವಂತಿದ್ವು.. ಹೀಗಾಗಿನೆ ಬಹು ಬೇಗನೆ ಸ್ಯಾಂಡಲ್‌ವುಡ್‌ನ ರಾಣಿಪಟ್ಟ ಅಲಂಕರಿಸಿದ್ದು ಈ ಚಲುವೆ.. ನಾಯಕಿಯಾಗಿ ಬ್ಯುಸೀ ಇರುವ ಹೊತ್ತಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅಮೂಲ್ಯ ಬಣ್ಣದ ಲೋಕದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿಯ ಜೊತೆ ಕಾಲಕಳೆದಿದ್ದರು

ಮಾಸ್ತಿಗುಡಿ ಮತ್ತು ಮುಗುಳುನಗೆ ಚಿತ್ರಗಳಲ್ಲಿ ನಟಿಸಿದ ನಂತರ ಮತ್ಯಾವ ಚಿತ್ರಗಳಲ್ಲೂ ಐಸೂ ಕಾಣಿಸಿಕೊಂಡಿರಲಿಲ್ಲ ಆದರೆ ಇದೀಗ ಅಮೂಲ್ಯ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದು ಆದಷ್ಟು ಬೇಗ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ನಮ್ಮ ಗೋಲ್ಡನ್ ಕ್ವೀನ್ ಅಮೂಲ್ಯ ಈ ಸಲದ ದೀಪಾವಳಿ ಆಚರಣೆ ಮಾಡಿರುವುದು ಎಲ್ಲಿ ಗೊತ್ತಾ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ,ಹೌದು ಗೋಲ್ಡನ್ ಸ್ಟಾರ್​ ಕುಟುಂಬದವರೊಂದಿಗೆ ದೀಪಗಳ ಹಬ್ಬ ಮಾಡಿದ್ದಾರೆ,ಗೋಲ್ಡನ್​​ಸ್ಟಾರ್​​ ಗಣೇಶ್​ ಕೂಡ ಶೂಟಿಂಗ್​​ನಿಂದ ಬ್ರೇಕ್​​ ತೆಗೆದುಕೊಂಡಿದ್ದು, ಫ್ಯಾಮಿಲಿಯೊಟ್ಟಿಗೆ ದೀಪಾವಳಿ ಹಬ್ಬವನ್ನು ಸೆಲೆಬ್ರೇಟ್​​ ಮಾಡ್ತಿದ್ದಾರೆ.

 

 

 

ಗಣೇಶ್‌ ಕುಟುಂಬದ ಜೊತೆಗೆ ಅವ್ರ ಆಪ್ತ ಸ್ನೇಹಿತರಾದ ಅಮೂಲ್ಯ, ರವಿಶಂಕರ್​ ದಂಪತಿ ಕೂಡ ಹಬ್ಬದಲ್ಲಿ ಪಾಲ್ಗೊಂಡಿದ್ದು, ಈ ಫೋಟೊಗಳನ್ನು ಗಣೇಶ್​​ ತಮ್ಮ ಟ್ವಿಟ್ಟರ್​​ನಲ್ಲಿ ಅಪ್ಲೋಡ್​​ ಮಾಡಿದ್ದು, ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಷಯ ತಿಳಿಸಿದ್ದರು,ಆ ಫೋಟೋ ಈಗ ಫುಲ್ ವೈರಲ್ ಆಗಿದ್ದು ಚೆಲುವಿನ ಚಿತ್ರಾರ ಜೋಡಿಯನ್ನು ಮತ್ತೆ ನೋಡಿ ಖುಷಿ ಪಟ್ಟಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top