ಭವಿಷ್ಯ

10 ನವೆಂಬರ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಶನಿವಾರ, ೧೦ ನವೆಂಬರ್ ೨೦೧೮
ಸೂರ್ಯೋದಯ : ೦೬:೪೯
ಸೂರ್ಯಾಸ್ತ : ೧೭:೫೫
ಅಮಂತ ತಿಂಗಳು : ಕಾರ್ತಿಕ

ಪಕ್ಷ : ಶುಕ್ಲ ಪಕ್ಷ
ತಿಥಿ : ತದಿಗೆ – ೨೨:೧೨ ವರೆಗೆ
ನಕ್ಷತ್ರ : ಜ್ಯೆಷ್ಟ್ಯ – ೨೨:೦೦ ವರೆಗೆ
ಯೋಗ : ಅತಿಗಂಡ – ೧೪:೪೨ ವರೆಗೆ
ಸೂರ್ಯ ರಾಶಿ : ತುಲಾ

ಅಭಿಜಿತ್ ಮುಹುರ್ತ : ೧೧:೫೯ – ೧೨:೪೪
ಅಮೃತಕಾಲ :೧೨:೪೧ – ೧೪:೨೨
ರಾಹು ಕಾಲ:೦೯:೩೫ – ೧೦:೫೮
ಗುಳಿಕ ಕಾಲ: ೦೬:೪೯ – ೦೮:೧೨
ಯಮಗಂಡ:೧೩:೪೫ – ೧೫:೦೮

 

ಆತಂಕದಿಂದಲೇ ತೆಗೆದುಕೊಂಡ ನಿರ್ಧಾರಗಳು ಇನ್ನು ಮುಂದೆ ಗಟ್ಟಿಯಾಗುತ್ತಲೇ ಹೋಗುತ್ತವೆ. ಇದರಿಂದ ನಿರ್ಧಾರಗಳು ಸ್ಪಷ್ಟವಾಗಿ ಕೈಗೊಳ್ಳಲಿರುವ ಕಾರ್ಯಗಳು ಹೊಸ ಸ್ವರೂಪ ಪಡೆಯಲಿವೆ.

 

ಹಿಂದಿನ ದುಡುಕುತನ, ಮುಂಗೋಪಗಳೆಲ್ಲ ಕಡಿಮೆಯಾಗಿ ಬಂಧುಗಳೊಡನೆ ಬೆರೆಯುವಿರಿ. ಹಿರಿಯರ ಆಶೀರ್ವಾದದಿಂದ ಹಮ್ಮಿಕೊಂಡ ಕಾರ್ಯಗಳು ಯಶಸ್ವಿಯಾಗುವವು.

 

ವಿವಾದಗಳು ಇತ್ಯರ್ಥಗೊಂಡು ನೆಮ್ಮದಿ ಕಾಣುವಿರಿ. ನಿಮ್ಮ ಮೇಲಿನ ಬೃಹತ್‌ ಜವಾಬ್ದಾರಿಯನ್ನು ಕಳೆದುಕೊಳ್ಳುವಿರಿ. ಮನಸ್ಸು ಹಕ್ಕಿಯಂತೆ ಹಾರಾಡುವುದು.

 

ಬಂಧುಗಳ ಮಧ್ಯೆ ಬಿಟ್ಟು ಹೋಗಿದ್ದ ಸಂಬಂಧ ಮತ್ತೆ ಚಿಗುರಲಿದೆ. ಇದರಿಂದ ಮನೆಯಲ್ಲಿ ಎಲ್ಲರಿಗೂ ಸಂತೋಷವುಂಟಾಗುವುದು.ನೀವು ಎಷ್ಟೇ ದುಡಿದು ದಣಿದರೂ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಅವಕಾಶ ಬಹಳ ಕಡಿಮೆ

 

 

ಗೊತ್ತುಗುರಿಯಿಲ್ಲದೆ ಹಮ್ಮಿಕೊಂಡ ಅನೇಕ ಕಾರ್ಯಗಳಿಗೆ ಆರ್ಥಿಕ ಕೊರತೆ ಕಂಡು ಬರಲಿದೆ. ಕೊಟ್ಟ ಮಾತು ಉಳಿಸಿಕೊಳ್ಳಲು ಪರದಾಡುವಿರಿ. ಮಾತಿನ ತಪ್ಪು ಗ್ರಹಿಕೆಯಿಂದ ಕುಟುಂಬದಲ್ಲಿ ದೊಡ್ಡ ಬಿರುಗಾಳಿ ಏಳುವುದು.

 

 

ಮಾತಿನಲ್ಲಿ ಬಲು ಚತುರರಾದ ನೀವು ವಿಷಯಗಳು ತಿಳಿದಿದ್ದರೂ ಮುಗ್ಧರಂತೆ ಇರುವುದು ಉತ್ತಮ. ಬೇರೆಯವರ ವೈಯಕ್ತಿಕ ವಿಚಾರಗಳಲ್ಲಿ ಅತಿ ಕುತೂಹಲ ಬೇಡ. ಇದರಿಂದ ವೈಯಕ್ತಿಕ ಕೀರ್ತಿಗೆ ಕಳಂಕ ಬರುವುದು.

 

 

ಇದ್ದದ್ದನ್ನು ಇದ್ದಂತೆ ಹೇಳಿದರೆ ಎದೆಗೆ ಬಂದು ಒದ್ದ ಎನ್ನುವಂತೆ ನೀವು ಹೇಳುವ ವಿಚಾರ ಸತ್ಯವಾಗಿದ್ದರೂ ಅದನ್ನು ಸ್ವೀಕರಿಸುವ ಜನರಿಗೆ ಅಪಥ್ಯವಾಗುವುದು. ಇದರಿಂದ ನಿಮಗೆ ವಿರೋಧಿಗಳು ಹೆಚ್ಚಾಗುವ ಸಂಭವವಿದೆ.

 

 

ಭಿನ್ನಾಭಿಪ್ರಾಯ ಮೂಡಿದ್ದ ಕುಟುಂಬದಲ್ಲಿ ಏಕಾಭಿಪ್ರಾಯ ವ್ಯಕ್ತವಾಗಲಿದೆ. ಯಾವುದೇ ಸನ್ನಿವೇಶಕ್ಕೆ ಅಂಜದೆ ಗಟ್ಟಿ ನಿರ್ಧಾರ ತೆಗೆದುಕೊಂಡಲ್ಲಿ ಅದು ನಿಮ್ಮ ಜೀವನದ ಗತಿಯನ್ನೇ ಬದಲಾಯಿಸಲಿದೆ.

 

ನೀವು ಹೋಗುತ್ತಿರುವ ದಾರಿ ಸರಿಯಾಗಿದ್ದು ಅದರ ಬಗ್ಗೆ ಗೊಂದಲ ಬೇಡ. ಬೇರೆಯವರ ಮಾತುಗಳು ನಿಮ್ಮ ದಾರಿ ತಪ್ಪಿಸಬಹುದು. ನಿಮ್ಮ ದೃಢ ನಿರ್ಧಾರ ಎಲ್ಲರಿಗೂ ಸಂತಸ ತರಲಿದೆ. ಅಷ್ಟೇ ಅಲ್ಲದೆ ಸಾಮಾಜಿಕ ಗೌರವ ಹೆಚ್ಚಿಸಲಿದೆ.

 

 

ನಿಮ್ಮ ಪ್ರಗತಿ ಸಹಿಸದ ಕೆಲವರು ನಿಮ್ಮನ್ನು ಪ್ರಚೋದಿಸಿ ಬಾಯಿಂದ ನಿಷ್ಠುರದ ಮಾತುಗಳು ಬರುವಂತೆ ಮಾಡುವರು. ಮಾತನಾಡುವಾಗ ಸಮಯ ಸಂದರ್ಭದ ಅರಿವಿರಲಿ.

 

ಕೆಲವು ವಿಷಯಗಳಲ್ಲಿ ಅತಿ ಬುದ್ಧಿವಂತಿಕೆ ತೋರದೆ ಸಹಜವಾಗಿ ಹೊಂದಿಕೊಂಡು ಹೋಗುವುದು ಬುದ್ಧಿವಂತರ ಲಕ್ಷ ಣ. ಬರಲಿರುವ ಉತ್ತಮ ಅವಕಾಶಗಳನ್ನು ನಿಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳುವುದನ್ನು ಕಲಿಯಿರಿ.

 

ಬಂಧು ಬಾಂಧವರೊಂದಿಗೆ ಸೌಹಾರ್ದದಿಂದ ವರ್ತಿಸಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗುವ ಸಂಭವವಿದೆ.ನಿಮ್ಮ ಮಿತಿಮೀರಿದ ಆಲೋಚನೆಗಳು ನಿಮ್ಮ ಕೆಲಸದಲ್ಲಿ ಅಪಯಶಸ್ಸು ತರುವ ಸಾಧ್ಯತೆ ಇರುವವು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top