ಸಮಾಚಾರ

ಟಿಪ್ಪು ಜಯಂತಿ ಕಾರ್ಯಕ್ರಮದಿಂದ ಬೇಕಂತಲೇ ಹಿಂದೆ ಸರಿದರೇ ಮುಖ್ಯಮಂತ್ರಿ HD ಕುಮಾರಸ್ವಾಮಿ.

ಭಾರೀ ವಿವಾದಕ್ಕೀಡಾಗಿರುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಸರ್ಕಾರ ಮಾಡಿಯೇ ತೀರುತ್ತೇವೆ ಅಂತ ಹೇಳಿದ್ದು, ಇದೀಗ ಆಚರಣೆಗೂ ಸರ್ಕಾರ ರೆಡಿಯಾಗಿದೆ. ಆದರೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಟಿಪ್ಪು ಜಯಂತಿ ಕುರಿತ ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮದಿಂದ ದೂರ ಉಳಿಯುವ ಸಾಧ್ಯತೆ ಇದೆ. ನಾಳೆ ವಿಧಾನಸೌಧದಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೆಸರು ಪ್ರಕಟಿಸಲಾಗಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಬ್ಬರೂ ಗೈರು ಹಾಜರಾಗಲಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಟಿಪ್ಪು ಜಯಂತಿ ಆಚರಣೆ ಬಗ್ಗೆ ಟೀಕಿಸಿದ್ದ ಕುಮಾರಸ್ವಾಮಿ, ಈಗಲೂ ಅದೇ ನಿಲುವುವನ್ನ ಕಾಯ್ದುಕೊಂಡಿದ್ದಾರಾ? ಹಾಗಾದ್ರೆ ಸಮ್ಮಿಶ್ರ ಸರ್ಕಾರ ವಿವಾದಾತ್ಮಕ ನಿರ್ಧಾರಕ್ಕೆ ಹೆಚ್ ಡಿಕೆ ಸೈಲೆಂಟ್ ಆಗಿಬಿಟ್ಟರಾ? ಅನ್ನೋ ಪ್ರಶ್ನೆ ಮೇಲೆ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.. ಮೈಸೂರಿನ ಸುಲ್ತಾನ್​ರನ್ನು ಆರಾಧನೆ ಮಾಡಿದವರಿಗೆ ದುರಾದೃಷ್ಟ ಬೆನ್ನು ಬೀಳಲಿದೆ ಎಂಬ ಅಭಿಪ್ರಾಯವೇ ಅವರನ್ನು ಟಿಪ್ಪು ಜಯಂತಿಯಿಂದ ದೂರ ಉಳಿದುಕೊಳ್ಳಲು ಕಾರಣವಾಗಿದೆಯಂತೆ.

 

 

‘ದಿ ಸ್ವೋರ್ಡ್​​​ ಆಫ್​ ಟಿಪ್ಪು ಸುಲ್ತಾನ್​’ ಶೂಟಿಂಗ್​ ಸಂದರ್ಭದಲ್ಲಿ ನಟ ಸಂಜಯ್​ ಖಾನ್​ ಜೀವಕ್ಕೆ ಕುತ್ತು ಎದುರಾಗಿತ್ತು. ಇನ್ನು ಇಂಗ್ಲೆಂಡ್​ನಲ್ಲಿ ನಡೆದ ಹರಾಜಿನಲ್ಲಿ ಟಿಪ್ಪು ಖಡ್ಗವನ್ನು ಕರ್ನಾಟಕಕ್ಕೆ ಮರಳಿ ತಂದಿದ್ದರು ವಿಜಯ್​ ಮಲ್ಯ. ಈಗ ಅವರು ಅದೇ ದೇಶದಲ್ಲಿ ತಲೆಮರಿಸಿಕೊಳ್ಳುವ ಸ್ಥಿತಿ ಬಂದೊದಗಿದೆ. ಟಿಪ್ಪು ಜಯಂತಿ ಆಚರಣೆ ಪ್ರಾರಂಭಿಸಿದ ನಂತರದಲ್ಲಿ ಸಿದ್ದರಾಮಯ್ಯ ಅಧಿಕಾರವನ್ನೇ ಕಳೆದುಕೊಂಡರು!

ಮೊದಲಿನಿಂದಲೂ ದೇವೆಗೌಡ ಅವರ ಕುಟುಂಬ ಈ ರೀತಿಯ ವಿಚಾರಗಳನ್ನು ಹೆಚ್ಚು ನಂಬಿಕೊಂಡು ಬಂದಿದೆ. ಒಂದೊಮ್ಮೆ ಟಿಪ್ಪುವಿನ ಆರಾಧನೆ ಮಾಡಿದರೆ ಅದು ಮುಳುವಾಗಬಹುದು ಎಂದು ಬಲವಾಗಿ ನಂಬಿದ್ದಾರೆ. ಹಾಗಾಗಿ ಆ ಬಗ್ಗೆ ಅವರು ಆಸಕ್ತಿಯನ್ನೇ ತೋರಿಸುತ್ತಿಲ್ಲ ಎನ್ನಲಾಗಿದೆ.. ಅಂದಹಾಗೆ ಇತ್ತೀಚೆಗೆ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಿಂದಲೂ ಕುಮಾರಸ್ವಾಮಿ ಹಾಗೂ ಎಚ್‌ಡಿ ದೇವೇಗೌಡರು ದೂರ ಉಳಿದಿದ್ದರು ಇದು ವ್ಯಾಪಕ ಟೀಕೆಗೆ ಕಾರಣವಾಗಿತ್ತು

ಚಿಕಿತ್ಸೆಯ ನೆಪವೊಡ್ಡಿದ ಕುಮಾರಸ್ವಾಮಿ:
ವೈದ್ಯರ ಸಲಹೆ ಮೇರೆಗೆ ಕುಮಾರಸ್ವಾಮಿ ಅವರು ಮೂರು ದಿನ ವಿಶ್ರಾಂತಿ ಪಡೆಯಲಿದ್ದು, ಈ ಸಮಯದಲ್ಲಿ ಕುಟುಂಬದೊಂದಿಗೆ ಕಾಲ ಕಳೆಯಲಿದ್ದಾರೆ. ಮೈಸೂರು ಜಿಲ್ಲೆಯ ಖಾಸಗಿ ಸ್ಥಳದಲ್ಲಿ ಸಿಎಂ ಕುಮಾರಸ್ವಾಮಿ ವಿಶ್ರಾಂತಿ ಪಡೆಯಲಿದ್ದಾರೆ. ಹಾಗಾಗಿ ಅವರು ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಅಂತೆಯೇ ಟಿಪ್ಪು ಜಯಂತಿಗೂ ಹಾಜರಾಗುವುದಿಲ್ಲ ಎಂದು ಹೇಳಲಾಗುತ್ತಿದೆ….

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top